Advertisement

ದೆಹಲಿ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಲ್ಲಿ Rally

06:28 PM Jan 18, 2021 | Team Udayavani |

ವಿಜಯಪುರ: ದೆಹಲಿಯಲ್ಲಿ ಜ. 26ರಂದು ರೈತರು ನಡೆಸಲಿರುವ ಟ್ರಾಕ್ಟರ್‌ ಪರೇಡ್‌ ಗೆ ಬೆಂಬಲವಾಗಿಅದೇ ದಿನ ಬೆಂಗಳೂರಿನಲ್ಲಿ ಬೃಹತ್‌ ರ್ಯಾಲಿ ನಡೆ ಯಲಿದೆ. ಜಿಲ್ಲೆಯ ಎಲ್ಲ ರೈತರು, ಕೃಷಿ ಕಾರ್ಮಿಕರು, ಹೋರಾಟ ಪರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಿ ಎಂದು ಆರ್‌ಕೆಎಸ್‌ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ ಕರೆ ನೀಡಿದರು.

Advertisement

ರವಿವಾರ ಹೊನಗನಹಳ್ಳಿ, ಸವನಳ್ಳಿ, ಹಿಟ್ನಳ್ಳಿ, ಉತ್ನಾಳ, ಉಕಮನಾಳ, ಕತ್ನಳ್ಳಿ, ಉಕ್ಕಲಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ಜಾಥಾದಲ್ಲಿ ಮತನಾಡಿದ ಅವರು, ಕೃಷಿ ಕ್ಷೇತ್ರವನ್ನುಕಾರ್ಪೋರೇಟ್‌ ಮನೆತನಗಳಿಗೆ ಕೊಳ್ಳೆ ಹೊಡೆಯಲು ಅನುವು ಮಾಡಿಕೊಡುವ ಕಾಯ್ದೆಗಳನ್ನು ತಂದಿರುವ ಕೇಂದ್ರ ಸರ್ಕಾರ, ಸದರಿ ಕಾಯ್ದೆಗಳು ರೈತರನ್ನು ಉದ್ಧಾರ ಮಾಡುತ್ತವೆ ಎಂದು ಸುಳ್ಳು ಪ್ರಚಾರ ಮಾಡಿ, ಜನರನ್ನು ದಾರಿ ತಪ್ಪಿಸುತ್ತಿದೆ. ತೊಂಬತ್ತರ ದಶಕದಲ್ಲಿ ಇದೇ ರೀತಿ ಸುಳ್ಳು ಹೇಳಿ ಜಾಗತೀಕರಣ, ಉದಾರೀಕರಣ ನೀತಿಗಳನ್ನು ಅಂದಿನ ಕಾಂಗ್ರೆಸ್‌ ಸರ್ಕಾರ
ಜಾರಿಗೆ ತಂದಿದ್ದರಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಆರಂಭಗೊಂಡವು ಎಂದು ಆಕ್ರೋಶ ಹೊರ ಹಾಕಿದರು.

ಈ ಕಾಯ್ದೆಗಳು ಜಾರಿಗಳು ಜಾರಿಯಾದರೆ ರೈತರು ತಮ್ಮ ಬೆಳೆ, ಭೂಮಿ ಕಳೆದುಕೊಂಡು ಕಾರ್ಪೋರೇಟ್‌ ಕಂಪನಿಗಳ ಬಾಗಿಲು ಕಾಯುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ರೈತರೂ ಈ ಕಾಯ್ದೆಗಳ ವಿರುದ್ಧ ಬೃಹತ್‌ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.

ಜಾಥಾ ನೇತೃತ್ವ ವಹಿಸಿದ್ದ ಅರ್‌ಕೆಎಸ್‌ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಎಪಿಎಂಸಿಯಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳನ್ನು ಸರಿಪಡಿಸುವ ಬದಲು, ಈ ಕಾಯ್ದೆಗಳು ಅದಕ್ಕಿಂತಲೂ ಭೀಕರ ಸಮಸ್ಯೆಯನ್ನು ಸೃಷ್ಟಿ ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘಟನಾಕಾರಾದ ಪೀರ್‌ ಜಮಾದಾರ, ಪ್ರಗತಿಪರ ಚಿಂತಕರಾದ ಸಂದೀಪ ವಠಾರ, ಸಿದ್ದಲಿಂಗ ಬಾಗೇವಾಡಿ, ಮಲ್ಲಿಕಾರ್ಜುನಎಚ್‌ .ಟಿ, ಭರತ್‌ಕುಮಾರ ವಿವಿಧ ಹಳ್ಳಿಗಳಲ್ಲಿ ಮಾತನಾಡಿದರು. ದಸ್ತಗೀರ್‌ ಉಕ್ಕಲಿ ಅವರ ಕಲಾ ತಂಡ ರೈತ ಕ್ರಾಂತಿ ಗೀತೆಗಳನ್ನು ಹಾಡಿತು.

Advertisement

ಮಹಾದೇವ ಲಿಗಾಡೆ, ತಿಪ್ಪರಾಯ ಹತ್ತರಕಿ, ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ಗೌರಿ ಹಿರೇಮಠ, ರಾಜೇಶ್ವರಿ ಭಾಗವಹಿಸಿದ್ದರು. ವಿಜಯಪುರ ಜಿಲ್ಲೆಯ ಹೊನಗನಹಳ್ಳಿ, ಸವನಳ್ಳಿ, ಹಿಟ್ನಳ್ಳಿ, ಉತ್ನಾಳ, ಉಕಮನಾಳ, ಕತ್ನಳ್ಳಿ, ಉಕ್ಕಲಿ, ಮಸಬಿನಾಳ, ಡೋಣೂರ, ಎಂಬತ್ನಾಳ, ಹಡಗಲಿ, ಶಿವಣಗಿ, ಪಡಗಾನೂರ, ಕಗ್ಗೊàಡ, ಹೊನ್ನುಟಗಿ, ಕುಮಟಗಿ, ಕವಲಗಿ, ಮದಭಾವಿ, ಬುರಣಾಪುರ ಗ್ರಾಮಗಳಲ್ಲಿ ಜಾಥಾ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next