Advertisement

Sapta Sagaralu Dhaati; ರಶ್ಮಿಕಾ ಜತೆ ಇನ್ನೂ ಸಂಪರ್ಕದಲ್ಲಿದ್ದೇನೆ..: ರಕ್ಷಿತ್ ಶೆಟ್ಟಿ

09:00 AM Sep 23, 2023 | Team Udayavani |

ನಟ ರಕ್ಷಿತ್‌ ಶೆಟ್ಟಿ ಪ್ರತಿ ಬಾರಿ ಹೈದರಾಬಾದ್‌ಗೆ ಹೋದಾಗಲೂ ಅವರಿಗೊಂದು ಪ್ರಶ್ನೆ ಎದುರಾಗುತ್ತದೆ. ಅದು ರಶ್ಮಿಕಾ ಕುರಿತಾದ್ದು. ಈ ಬಾರಿ ಮತ್ತೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಕಾರಣವಾಗಿದ್ದು “ಸಪ್ತಸಾಗರದಾಚೆ ಎಲ್ಲೋ’ ಚಿತ್ರ. ಈ ಚಿತ್ರವನ್ನು ತೆಲುಗಿನಲ್ಲಿ “ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಡಿ ಸೆ.22ಕ್ಕೆ ಬಿಡುಗಡೆ ಮಾಡಿದೆ.

Advertisement

ಈ ಸಂದರ್ಭದಲ್ಲಿ ಚಿತ್ರದ ಪ್ರಮೋಶನ್‌ನಲ್ಲಿ ಭಾಗಿಯಾಗಿದ್ದ ರಕ್ಷಿತ್‌ ಶೆಟ್ಟಿ ಅವರಿಗೆ ಯುಟ್ಯೂಬರ್‌ ಕಡೆಯಿಂದ ಪ್ರಶ್ನೆಯೊಂದು ಎದುರಾಗಿದೆ. “ನೀವು ರಶ್ಮಿಕಾ ಜೊತೆ ಸಂಪರ್ಕದಲ್ಲಿದ್ದೀರಾ’ ಎಂದು. ಇದಕ್ಕೆ ರಕ್ಷಿತ್‌ ತುಂಬಾ ಕೂಲ್‌ ಆಗಿಯೇ ಉತ್ತರಿಸಿದ್ದಾರೆ. “ಹೌದು ಸಂಪರ್ಕದಲ್ಲಿದ್ದೇವೆ. ಆಕೆಗೆ ದೊಡ್ಡ ದೊಡ್ಡ ಕನಸುಗಳಿದ್ದವು. ಆಕೆಯ ಸಾಧನೆಗೆ ಭೇಷ್‌’ ಎಂದಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ:ICC Ranking: ವಿಶ್ವಕ್ರಿಕೆಟ್ ಗೆ ಭಾರತವೇ ಸಾಮ್ರಾಟ; ಮೂರು ಮಾದರಿಯಲ್ಲಿ ಟೀಂಇಂಡಿಯಾ ನಂಬರ್ 1

ಅಂದಹಾಗೆ, ಸದ್ಯ ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ’ ಪಾರ್ಟ್‌ 1 ಹಿಟ್‌ ಆಗಿದೆ. ಈಗ ಚಿತ್ರದ ಎರಡನೇ ಭಾಗ ಅಕ್ಟೋಬರ್‌ 20ಕ್ಕೆ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next