Advertisement
ಪುಣ್ಯಕೋಟಿ ಚಿತ್ರದ ಸ್ಕ್ರಿಪ್ಟ್ ಮಾಡುತ್ತಿದ್ದೇನೆ. ಸಂಜೆ ಹೊತ್ತು ಆನ್ಲೈನ್ ಗೆ ಬಂದು ನಮ್ಮ 7 ಓಡ್ಸ್ ತಂಡದೊಂದಿಗೆ ಸಿನಿಮಾ ಕೆಲಸಗಳ ಕುರಿತು ಚರ್ಚಿಸುತ್ತೇವೆ. ಇಲ್ಲೂ ನಾವು ಸಿನಿಮಾ ವಿಷಯಗಳ ಕುರಿತಾಗಿಯೂ ಚರ್ಚಿಸುತ್ತೇವೆ. ನನ್ನ ತಂಡ ರಿಚ್ಚಿ ಚಿತ್ರದ ಸ್ಕ್ರಿಪ್ಟ್ನಲ್ಲಿ ಬಿಝಿ. ಹಿಂದೆಲ್ಲಾ ಚಿತ್ರೀಕರಣದ ಗ್ಯಾಪ್‌ನಲ್ಲಿ ಬರವಣಿಗೆ ಮಾಡ ಬೇಕಿತ್ತು. ಆದರೆ ಈಗ ಚಿತ್ರೀಕರಣವಿಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ಬರವಣಿ ಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೆಚ್ಚು ಯೋಚನೆ ಮಾಡಲು, ಹೊಸದಾಗಿ ಆಲೋಚಿಸಲು ಈಗ ಸಮಯ ಸಿಗುತ್ತದೆ’ ಎನ್ನುವುದು ರಕ್ಷಿತ್ ಶೆಟ್ಟಿ ಮಾತು. ಹಾಗಂತ ಅವರು ಕೇವಲ ಬರವಣಿಗೆಗಷ್ಟೇ ಸೀಮಿತವಾಗಿಲ್ಲ. ತಮಗೆ ಇಷ್ಟವಾದ ಒಂದಷ್ಟು ಸಿನಿಮಾಗಳನ್ನು ಕೂಡಾ ನೋಡುತ್ತಿದ್ದಾರೆ. ಬರವಣಿಗೆ ಜೊತೆಗೆ ಸಿನಿಮಾ ಕೂಡಾ ನೋಡುತ್ತಿದ್ದೇನೆ. ಫಾರಿನ್, ಇಂಡಿಯನ್ … ಹೀಗೆ ಸಾಕಷ್ಟು ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದೇನೆ. ನನಗೆ ಈ ಲಾಕ್ ಡೌನ್ ಬೋರ್ ಆಗಿಲ್ಲ. ಸಿನಿಮಾದ ಕೆಲಸ ಕಾರ್ಯಗಳಲ್ಲಿ ಮನೆಯಲ್ಲೇ ಬಿಝಿಯಾಗಿದ್ದೇವೆ ಎನ್ನುತ್ತಾರೆ ರಕ್ಷಿತ್. ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ವರ್ಷದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. Advertisement
ಬರವಣಿಗೆಯಲ್ಲಿ ರಕ್ಷಿತ್ ಬಿಝಿ
01:52 PM Apr 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.