Advertisement

Rakshabandhan: ಇಂದು ರಕ್ಷಾಬಂಧನ: ಪರಸ್ಪರ ಆಶ್ವಾಸನೆಯ ಸಂಕೇತ

01:04 AM Aug 30, 2023 | Team Udayavani |

ರಕ್ಷಾಬಂಧನವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚ­ರಿಸ­ಲಾಗುತ್ತದೆ. ಇದು ಪರಸ್ಪರ ಪ್ರೇಮ, ಸೌಹಾ ರ್ದತೆಯಿಂದ ಕೂಡಿ ನಿಮ್ಮನ್ನು ರಕ್ಷಿಸುವ ಒಂದು ಪವಿತ್ರ  ಬಂಧನವಾಗಿದೆ. ಈ ಹಬ್ಬದಲ್ಲಿ, ಜಾತಿ, ವರ್ಗ, ಧರ್ಮ ಮತ್ತು ಲಿಂಗಭೇದವಿಲ್ಲದೆ ಎಲ್ಲರೂ  ಭಾಗವಹಿಸುತ್ತಾರೆ. ಸಹೋ ದರಿಯ ಪ್ರೇಮ ಮತ್ತು ಸೂಕ್ಷ್ಮ ಭಾವನೆಗಳ ಸಂಕೇತದಂತೆ ಕೈಗೆ ಕಟ್ಟಲಾಗುವ ಈ ದಾರವನ್ನು “ರಾಖೀ” ಎಂದು ಕರೆಯುತ್ತಾರೆ. ರಕ್ಷಾಬಂಧನವು ಕೇವಲ ಸಾಮಾಜಿಕ ಸಂಕೇತವಾಗಿಲ್ಲ; ಬದಲಾಗಿ ಪ್ರತಿಯೊಬ್ಬರ ಚೈತನ್ಯವನ್ನು ಬೆಸೆಯುವ ಕೊಂಡಿಯಾಗಿದೆ. ಭಾರತದ ಇತರ ಭಾಗಗಳಲ್ಲಿಇದನ್ನು ರಾಖೀ, ಬಲೇವ, ಸಲೂನೊ ಎಂಬ ವಿವಿಧ ಹೆಸರುಗಳಿಂದ  ಕರೆಯಲಾಗುತ್ತದೆ.

Advertisement

ಗುಣಗಳಿಗೆ ಅನುಸಾರವಾಗಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ರೀತಿಯ ಬಂಧನಗಳಿವೆ. ಸಾತ್ವಿಕ ಬಂಧನವು ಜ್ಞಾನ, ಸಂತೋಷ, ಆನಂದಕ್ಕೆ ಸಂಬಂಧಪಟ್ಟದ್ದಾಗಿದೆ. ರಾಜಸಿಕ ಬಂಧನವು ಎಲ್ಲ ರೀತಿಯ ಆಸೆಗಳು ಮತ್ತು ಬಯಕೆಗಳಿಗೆ ಸಂಬಂಧಿಸಿದುದಾಗಿದೆ. ಪೂರ್ಣತೆಯ ಕೊರತೆಯಿಂದ ಮತ್ತು ಅತೃಪ್ತಿಯಿಂದ ಕೂಡಿರುವ ಬಂಧನವು ತಾಮಸಿಕವಾದದ್ದು. ಉದಾಹರಣೆಗೆ, ಧೂಮಪಾನದ ಚಟವಿದ್ದವರು, ಯಾವುದೇ ರೀತಿಯ ಆನಂದವು ದೊರಕದಿದ್ದರೂ ಅದರಿಂದ ಹೊರಬರಲು ಕಷ್ಟಪಡುತ್ತಾರೆ. ರಕ್ಷಾಬಂಧನವು ಜ್ಞಾನ ಮತ್ತು ಪ್ರೇಮದಿಂದ ಕೂಡಿ ಎಲ್ಲರನ್ನು ಒಗ್ಗೂಡಿಸುವ ಒಂದು ಸಾತ್ವಿಕ ಬಂಧನವಾಗಿದೆ.

ಇಂದಿನ ದಿನಗಳಲ್ಲಿ ಇದನ್ನು ಸಹೋದರ- ಸಹೋದರಿಯರ ನಡುವಿನ ಹಬ್ಬವಾಗಿ ಪರಿಗಣಿಸಲಾದರೂ, ಹಿಂದಿನ ದಿನಗಳಲ್ಲಿ ಅದು ಅಷ್ಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಐತಿಹಾಸಿಕವಾಗಿ, ಅನೇಕ ಸಂದರ್ಭಗಳಲ್ಲಿ ರಾಖೀಯು ರಕ್ಷಣೆಯನ್ನು ನೀಡುವ ಸಂಕೇತವಾಗಿತ್ತು. ತಾಯಿ, ಪತ್ನಿ ಅಥವಾ ಮಗಳು ರಾಖೀಯನ್ನು ಕಟ್ಟಬಹುದಿತ್ತು. ತಮ್ಮ ಆಶೀರ್ವಾದವನ್ನು ಕೋರಿ ಬರುವವರಿಗೆ ಋಷಿಗಳು ರಾಖೀಯನ್ನು ಕಟ್ಟುತ್ತಿದ್ದರು. ಹಲವು ಋಷಿಮುನಿಗಳು ದುಷ್ಟಾಚಾರ ಮತ್ತು ಅನಾಚಾರಗಳಿಂದ  ರಕ್ಷಿಸಿಕೊಳ್ಳುವ ಕವಚದಂತೆ ಇದನ್ನು ಬಳಸುತ್ತಿದ್ದರು. ಕೆಲವು ಸಂಪ್ರದಾಯಗಳಲ್ಲಿ ಇದನ್ನು “ಪಾಪ ತೋಡಕ, ಪುಣ್ಯ ಪ್ರದಾಯಕ ಪರ್ವ” – ಪುಣ್ಯವನ್ನು ಅನುಗ್ರಹಿಸಿ , ಪಾಪದಿಂದ ಮುಕ್ತರನ್ನಾಗಿಸುವ ದಿನವಾಗಿ  ಆಚರಿಸಲಾಗುತ್ತದೆ.  ಶ್ರಾವಣ ಮಾಸದ ಹುಣ್ಣಿಮೆಯನ್ನು ಋಷಿಮುನಿಗಳಿಗಾಗಿ ಮೀಸಲಿಡಲಾಗಿದೆ.

ನಾವು ವೈವಿಧ್ಯಮಯ ಸಮಾಜದಲ್ಲಿ ಜೀವಿಸುತ್ತಿರುವಾಗ   ವಾದಗಳು, ವ್ಯತ್ಯಾಸಗಳು ಮತ್ತು ಅಪಾರ್ಥಗಳು ಉಂಟಾಗುವುದು ಸಹಜವೇ ಆಗಿದೆ. ಇದರಿಂದ ಒತ್ತಡ, ಭಯ ಮುಂತಾದ ಅಸುರಕ್ಷ ಭಾವನೆಗಳು ಉಂಟಾಗುತ್ತವೆ. ಭಯ ಮತ್ತು ಅಪನಂಬಿಕೆಯಲ್ಲಿ ಜೀವಿಸುವ ಸಮಾಜವು ಖಂಡಿತವಾಗಿಯೂ ಅಳಿವಿನ ಅಂಚಿಗೆ ತೆರಳುತ್ತದೆ. ರಕ್ಷಾಬಂಧನದ ಹಬ್ಬದ ದಿನದಂದು ನಾವೆಲ್ಲರೂ, “ನೋಡು, ನಾನು ನಿನ್ನೊಂದಿಗೆ ಇದ್ದೇನೆ” ಎಂಬ ಆಶ್ವಾಸನೆಯನ್ನು ಪರಸ್ಪರ ನೀಡುತ್ತೇವೆ.

ಸಾಮಾನ್ಯವಾಗಿ ನಾವು  ಬಂಧನವೆಂದರೆ ದುಃಖದಾಯಕ ಎಂದು ಆಲೋಚಿಸುತ್ತೇವೆ. ಆದರೆ ವಾಸ್ತವವಾಗಿ   ಆಧ್ಯಾತ್ಮಿಕ ಜ್ಞಾನ, ಗುರುಗಳು , ಸತ್ಯ ಮತ್ತು ಆತ್ಮ ಇವುಗಳೊಂದಿಗೆ ಏರ್ಪಡಿಸಿಕೊಳ್ಳುವ ಬಂಧನವು ನಿಮ್ಮನ್ನು ರಕ್ಷಿಸುತ್ತದೆ. ಒಂದು ಹಗ್ಗದಿಂದ ನಿಮ್ಮನ್ನು ರಕ್ಷಿಸಬಹುದು ಅಥವಾ ನೇಣಿಗೇರಿಸಬಹುದು. ಪ್ರಾಪಂಚಿಕ ಆಸೆಗಳಿಂದ ಕೂಡಿರುವ ಸಣ್ಣ ಮನಸ್ಸು ನಿಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯಬಹುದು. ಆದರೆ ಜ್ಞಾನ ಅಥವಾ ಬೃಹತ್‌ ಪ್ರಜ್ಞೆಯೊಂದಿಗೆ ಗುರುತಿಸಿಕೊಂಡಾಗ ನೀವು ಮುಕ್ತರಾಗುತ್ತೀರಿ.

Advertisement

 ಶ್ರೀ ರವಿಶಂಕರ್‌ ಗುರೂಜಿ

Advertisement

Udayavani is now on Telegram. Click here to join our channel and stay updated with the latest news.

Next