ಬೆಂಗಳೂರು: ಸೋದರ- ಸೋದರಿಯರ ನಡುವಿನ ಬಾಂಧವ್ಯದ ಮಹತ್ವ ಸಾರುವ ರಕ್ಷಾಬಂಧನ ಹಬ್ಬ, ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಣೆಯಾಗುತ್ತಿದೆ. ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಹಿಳಾ ಕಾನ್ಸ್ಟೇಬಲ್‌ಗಳಿಬ್ಬರು ರಕ್ಷಾ ಬಂಧನ ಕಟ್ಟಿದರು.
“ನಿನ್ನೆ ಇಬ್ಬರು ಮಹಿಳಾ ಕಾನ್ಸ್ಟೇಬಲ್‌ಗಳು ರಾಖಿ ಕಟ್ಟಿ ಶುಭ ಕೋರಿದರು. ಅವರಿಗೂ ರಕ್ಷಾಬಂಧನದ ಶುಭಾಶಯ ಕೋರಲಾಯಿತು’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹಂಚಿಕೊಂಡಿದ್ದಾರೆ.
ನಾಡಿನ ಸಮಸ್ತ ಜನತೆಗೆ ರಕ್ಷಣೆಯ ಮತ್ತು ಸಹೋದರತ್ವದ ಸಂಕೇತದ ಹಬ್ಬವಾಗಿರುವ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಹರಸಿ, ಆಶೀರ್ವದಿಸಿ, ಆರೈಕೆ ಮಾಡಿ ಧೈರ್ಯವನ್ನು ತುಂಬುವ ಸಹೋದರಿಯರ ಕಾಳಜಿ ಮತ್ತು ಕನಿಕರ ನಿಜಕ್ಕೂ ಅವಿಸ್ಮರಣೀಯವಾದದ್ದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿ ಶುಭ ಕೋರಿದ್ದಾರೆ.
ಅಣ್ಣ-ತಮ್ಮ ಅಂತ ಕರೆಯಲು ರಕ್ತ ಹಂಚಿಕೊಂಡು ಹುಟ್ಟಿರಬೇಕು ಅಂತ ಏನಿಲ್ಲ. ಮನಸ್ಸಿನ ಭಾವನೆಯಿಂದ ಕರೆಯುವ ಪ್ರತಿಯೊಬ್ಬರು ಸಹೋದರ- ಸಹೋದರಿಯರೇ ಆಗಿರುತ್ತಾರೆ. ಕನಸುಗಳು ನೂರಿರಲಿ, ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸಹೋದರತೆಯ ಸಂಭ್ರಮದ ಹಬ್ಬಕ್ಕೆ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು’ ಎಂದಿದ್ದಾರೆ ಸಚಿವ ಮುರುಗೇಶ್ ನಿರಾಣಿ.
ನಾಡಿನ ಸಮಸ್ತ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಭ್ರಾತೃತ್ವ, ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿ ಆಚರಿಸಲ್ಪಡುವ ರಕ್ಷಾಬಂಧನ ಎಲ್ಲರ ಬಾಳಿನಲ್ಲಿ ಸಂತಸದ ಹೊಂಬೆಳಕನ್ನು ಮೂಡಿಸಲಿ ಎಂದು ಪ್ರಾರ್ಥಿಸುವೆ’ ಎಂದು ಅಶ್ವಥ್ ನಾರಾಯಣ್ ಅವರು ಕೂ ಮಾಡಿದ್ದಾರೆ.