ಮುಂಬಯಿ: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ರಾಖಿ ಸಾವಂತ್ ದಾಂಪತ್ಯ ಜೀವನ ಕಳೆದ ಕೆಲ ತಿಂಗಳಿನಿಂದ ಸುದ್ದಿಯಲ್ಲಿದೆ. ಉದ್ಯಮಿ ಆದಿಲ್ ದುರಾನಿಯನ್ನು ವಿವಾಹವಾದ ಬಳಿಕ, ಪತಿಯ ವಿರುದ್ಧ ರಾಖಿ ನಾನಾ ಆರೋಪ ಮಾಡಿದ್ದರು. ಸದ್ಯ ಆದಿಲ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಈ ನಡುವೆ ನಟಿ ರಾಖಿ ಸಾವಂತ್ ಕಹಿಯನ್ನು ಮರೆತು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣದಲ್ಲಿ ವಧುವಿನ ಉಡುಗೆ ಹಾಕಿಕೊಂಡು ಕಾಣಿಸಿಕೊಂಡಿರುವ ರಾಖಿ ಮತ್ತೆಂದೂ ಮದುವೆಯಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಒಂದೇ ಕಾರ್ಯಕ್ರಮದಲ್ಲಿ 4 ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದ ʼRRRʼ
ಒಂದು ಬಾರಿ ಮದುವೆಯಾಗಿದ್ದೇನೆ, ಇನ್ನೊಂದು ಬಾರಿ ಮದುವೆಯ ಉಡುಗೆ ತೊಡುವುದಿಲ್ಲ. ಏನಿದ್ದರೂ ನೇರ ಖಬರ್ ಗೆ ಹೋಗುವುದು ( ಸಾಯುವುದು). ನನ್ನ ಒಬ್ಬರೇ ಗಂಡ, ಅವರು ಈಗ ಜೈಲಿದ್ದಾರೆ. ಇನ್ನು ಅಳುವುದಿಲ್ಲ, ಖುಷಿಯಾಗಿ ಇರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ನೀನು ಪತ್ನಿಗೆ ತುಂಬಾ ಹಿಂಸೆ ಕೊಟ್ಟಿದ್ದೀಯಾ, ಈಗ ಜೈಲಿನಲ್ಲೇ ಇರು ಎಂದು ಪತಿಗೆ ರಾಖಿ ಹೇಳಿದ್ದಾರೆ. ಪತಿಯಿಂದ ವಿಚ್ಛೇದನ ಪಡೆಯುವುದಾಗಿ ರಾಖಿ ಇತ್ತೀಚೆಗೆ ಹೇಳಿದ್ದರು.