Advertisement
ಇಂಟಕ್ ರಾಜ್ಯ ಕಮಿಟಿ, ಜಿಲ್ಲಾ ಕಮಿಟಿಯ ಪದಾಧಿಕಾರಿಗಳನ್ನು ಚುನಾವಣೆ ವೇಳೆಯಲ್ಲಿ ಏಕಾಏಕಿ ಬದಲಾಯಿಸಲಾಗಿದೆ. ಇದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಾಧ್ಯಕ್ಷರಾದ ರಾಕೇಶ್ ಮಲ್ಲಿ, ಇಂಟಕ್ ಸಂಘಟನೆಯನ್ನು ಬಲಾಡ್ಯಗೊಳಿಸಿದ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಸಹಿತ ಇತರರ ಕೆಂಗಣ್ಣಿಗೆ ಕಾರಣವಾಗಿದೆ.
Related Articles
Advertisement
ರಾಕೇಶ್ ಮಲ್ಲಿ ಅವಧಿಯಲ್ಲಿ, ಮನೋಹರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುದ್ರೆಮುಖ ಸಂಸ್ಥೆ, ಎನ್ ಎಂಪಿಟಿ, ಗೂಡ್ಸ್ ಶೆಡ್, ಟಿಂಬರ್ ಗಳಲ್ಲಿ ಇಂಟಕ್ ಕಾರ್ಮಿಕ ಸಂಘಟನೆ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಒಂದು ವೇಳೆ ಮಲ್ಲಿ ಇಂಟಕ್ ಬಿಟ್ಟರೆ ಇದನ್ನು ಸಿಕ್ಕ ಅವಕಾಶ ಎಂಬಂತೆ ಬಿಜೆಪಿ ಮುಖಂಡರು ಬಿಎಂಎಸ್ ಕಾರ್ಮಿಕ ಸಂಘಟನೆಗೆ ಅವರನ್ನು ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂಟಕ್ ಇಂದು ಪ್ರಬಲ ಕಾರ್ಮಿಕ ಸಂಘಟನೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಹೀಗಿರುವಾಗ ಚುನಾವಣೆ ವೇಳೆಯಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ಬದಲಾಯಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಕೇಶ್ ಮಲ್ಲಿ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಚಿತ್ತರಂಜನ್ ರೈಗೆ ಮಲ್ಲಿ ಅಭಿಪ್ರಾಯವನ್ನೂ ಕೇಳದೆ ಜಿಲ್ಲಾಧ್ಯಕ್ಷ ಹುದ್ದೆ ನೀಡಿರುವುದು ಸಂಘಟನೆಯೊಳಗೆ ಇರಿಸುಮುರಿಸಿಗೆ ಕಾರಣವಾಗಿದ್ದು ಈ ಬಗ್ಗೆ ಆಪ್ತರ ಬಳಿ ರಾಕೇಶ್ ಮಲ್ಲಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇದು ಚುನಾವಣೆ ಸಮಯದಲ್ಲಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯಕ್ಕೂ ಕಂಟಕವಾಗುವ ಎಲ್ಲ ಸೂಚನೆ ಲಭಿಸಿದೆ.