Advertisement

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

12:48 PM Dec 25, 2024 | Team Udayavani |

ಮಂಗಳೂರು: ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳ ಭಾಗದಲ್ಲೇ ಮೊದಲ ಬಾರಿಗೆ ಎಕ್ಮೋ (ಎಕ್ಸ್‌ ಟ್ರಾಕೋರ್ಪೊರಲ್‌ ಮೆಂಬ್ರೇನ್‌ ಆಕ್ಸಿಜನೇಶನ್‌ – ಇಸಿಎಂಒ) ಸೇವೆಯನ್ನು ಐಸಿಯು ಮೂಲಕ ರೋಗಿಗಳ ಜೀವ ಉಳಿಸುವ ಕ್ರಿಟಿಕಲ್‌ ಕೇರ್‌ ಚಿಕಿತ್ಸೆಗಾಗಿ ಆರಂಭಿಸುವ ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಗೀರ್‌ ಸಿದ್ಧಿಕಿ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಮದನ್ಸ್‌ ಎಕ್ಮೋ ಹೆಲ್ತ್‌ ಕೇರ್‌ ಪ್ರೈ.ಲಿ. ಸಂಸ್ಥೆಯ ಸಹಕಾರದಲ್ಲಿ
ಎಕ್ಮೋ  ಸೇವೆಯನ್ನು ಆರಂಭಿಸಲಾಗುತ್ತಿದ್ದು, ಜನವರಿಯಿಂದ ಸೇವೆ ಆರಂಭವಾಗಲಿದೆ. ಇದರಿಂದ ಜೀವ ರಕ್ಷಕ ಚಿಕಿತ್ಸೆಗಳಿಗಾಗಿ ಬೇರೆ ನಗರಗಳಿಗೆ ಪ್ರಯಾಣಿಸುವ ಕಷ್ಟದಿಂದ ರೋಗಿಗಳನ್ನು ತಪ್ಪಿಸಬಹುದು ಎಂದರು.

ಆಸ್ಪತ್ರೆಯ ಕ್ರಿಟಿಕಲ್‌ ಕೇರ್‌ ವಿಭಾಗದ ಮುಖ್ಯಸ್ಥ ಡಾ| ದತ್ತಾತ್ರೇಯ ಪ್ರಭು ಮಾತನಾಡಿ, ಈ ವರೆಗೆ ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳ ಮೂಲಕ ರೋಗಿಗಳ ಆರೈಕೆ ಮಾಡಲಾಗುತ್ತಿತ್ತು. ಮುಂದಕ್ಕೆ ಈ  ಅಧುನಿಕ ತಂತ್ರಜ್ಞಾನದ ಮೂಲಕ ಹೆಚ್ಚಿನ ಚಿಕಿತ್ಸೆ ದೊರೆಯಲಿದೆ. ಹೃದಯಾಘಾತ, ಹೃದಯ ಸ್ತಂಭನ, ತೀವ್ರ ಉಸಿರಾಟದ ಸಮಸ್ಯೆ ಮೊದಲಾದವುಗಳಿಗೆ ಸಂಬಂಧಿಸಿದ
ಚಿಕಿತ್ಸೆಗೆ ಈ ಸೇವೆಯನ್ನು ಬಳಸಲಾಗುವುದು ಎಂದರು.

ಎಕ್ಮೋ ಹೆಲ್ತ್‌ ಕೇರ್‌ ಪ್ರೈ.ಲಿ. ಸಂಸ್ಥೆಯ ಸಂಸ್ಥಾಪಕ ಡಾ| ಮದನ್‌ ಮಾತನಾಡಿ, ರೋಗಿಯ ಶ್ವಾಸಕೋಶ ಮತ್ತು ಹೃದಯಗಳು
ಕಾರ್ಯಾಚರಣೆ ನಿಲ್ಲಿಸಿದಾಗ ಐಸಿಯುನಲ್ಲಿ ಅದಕ್ಕೆ ಪೂರಕವಾಗಿ ಎಕ್ಮೋ ಸೇವೆಯನ್ನು ಬಳಸಿ ರೋಗಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಬಹುದು. ಎಕ್ಮೋ ಚಿಕಿತ್ಸೆ ಪ್ರಸ್ತುತ ದುಬಾರಿಯಾದರೂ ಇದು ಎಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ. ಇತರ ನಗರದಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಈಗಾಗಲೇ ಈ ಸೇವೆಯ ಮೂಲಕ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದರು. ಮಾರ್ಕೆಟಿಂಗ್‌ ಮತ್ತು ಸೇಲ್ಸ್‌ ಹೆಡ್‌ ರಾಕೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next