ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಮುಂಬೈನ ಕುಂಬಲ್ಲಾ ಹಿಲ್‌ನಲ್ಲಿ 27 ಅಂತಸ್ತಿನ ವೈಭವೋಪೇತ ಮನೆ ನಿರ್ಮಿಸಿ ವಾಸಿಸುತ್ತಿದ್ದಾರೆ. ಅದಕ್ಕೆ ಸರಿಸಮವೋ ಎಂಬಂತೆ ದೇಶದ ಪ್ರಮುಖ ಷೇರು ಪೇಟೆ ಉದ್ಯಮಿ ರಾಕೇಶ್ ಜುಂಜನ್‌ವಾಲಾ ಮತ್ತು ಅವರ ಪತ್ನಿ ರೇಖಾ ಜುಂಝನ್‌ವಾಲಾ ಅವರು, ದಕ್ಷಿಣ ಮುಂಬೈನ ಬಿ.ಕೆ.ಖೇರ್ ರಸ್ತೆಯಲ್ಲಿ 2,700 ಚದರ ಅಡಿ ಸ್ಥಳವನ್ನು 371 ಕೋಟಿ ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡಿದ್ದಾರೆ. ಅಲ್ಲಿ ಅವರು 14 ಅಂತಸ್ತಿನ ವೈಭವೋಪೇತ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಅದರ ಕಾಮಗಾರಿ ಮುಕ್ತಾಯಗೊಂಡ ಕೂಡಲೇ ರಾಕೇಶ್ ಮತ್ತು ಅವರ ಪತ್ನಿ ಹೊಸ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸದ್ಯ ಅವರು ಮುಂಬೈನ ಬೇರೊಂದು ಸ್ಥಳದಲ್ಲಿ ಎರಡು ಅಂತಸ್ತು ಇರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಸಲ್ಲಿಸಲಾಗಿರುವ ನಿರ್ಮಾಣದ ನೀಲ ನಕ್ಷೆಯ ಪ್ರಕಾರ 12ನೇ ಮಹಡಿಯಲ್ಲಿ ಜುಂಝನ್‌ವಾಲಾ ದಂಪತಿಗಳು ಇರಲಿದ್ದಾರೆ. ಅದರಲ್ಲಿ ವಿಸ್ತಾರವಾಗಿರುವ ಬೆಡ್‌ರೂಂ, ಪ್ರತ್ಯೇಕ ಬಾತ್‌ರೂಂ ಮತ್ತು ಇತರ ಅಗತ್ಯತೆಗಳನ್ನು ಅದು ಹೊಂದಿರಲಿದೆ.
11ನೇ ಮಹಡಿಯಲ್ಲಿ ಜುಂಜನ್‌ವಾಲಾ ದಂಪತಿಗೆ ಮಕ್ಕಳ ವಾಸ್ತವ್ಯಕ್ಕಾಗಿ ಎರಡು ಬೆಡ್‌ರೂಂ ನಿರ್ಮಿಸಲಾಗುತ್ತಿದೆ. ನಾಲ್ಕನೇ ಮಹಡಿಯಲ್ಲಿ ಅತಿಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ:ಅಣ್ಣಾ ಎನ್ನುವುದು ಬೇಡ ಅಂದರೆ ಸಾಹೇಬರೇ ಎನ್ನುತ್ತೇನೆ: ಕುಮಾರಸ್ವಾಮಿಗೆ ಡಿಕೆಶಿ
371 ಕೋಟಿ ರೂ.- ಖರೀದಿಯ ಮೊತ್ತ
14- ಮನೆ ಹೊಂದಿರಲಿರುವ ಅಂತಸ್ತುಗಳು
57 ಮೀಟರ್- ಮನೆಯ ಎತ್ತರ
2,700 ಚದರ ಅಡಿ- ನಿವೇಷನದ ವಿಸ್ತೀರ್ಣ
ಏನೇನು ಇರಲಿದೆ?
ಮೊದಲ ಮಹಡಿ: ಬ್ಯಾಂಕ್ವೆಟ್ ಹಾಲ್, ಈಜುಕೊಳ, ಹೋಮ್ ಥಿಯೇಟರ್.
1,2,3ನೇ ಮಹಡಿ– ಸಾಮಾನ್ಯವಾದ ಕೊಠಡಿಗಳು
ನಾಲ್ಕನೇ ಮಹಡಿ- ಅತಿಥಿಗಳ ವಾಸ್ತವ್ಯಕ್ಕೆ ಮೀಸಲು. “ಎಲ್’ ಮಾದರಿಯ ಅಡುಗೆ ಕೋಣೆ.
ಕೊನೇಯ ಮಹಡಿ-756.05 ಚದರ ಅಡಿ ಮೀಸಲಾಗಿ ಇರಿಸಿದ ಸ್ಥಳ. ಅಲ್ಲಿ ಪಿಜ್ಜಾ ಕೌಂಟರ್, ಅಡುಗೆ ಮನೆ, ತರಕಾರಿ ಬೆಳೆಯುವ ಪ್ರದೇಶ, ಬಾಥ್‌ರೂಂ, ಒಪನ್ ಟೆರೇಸ್
ಬೇಸ್‌ಮೆಂಟ್– ವಾಹನ ನಿಲುಗಡೆ ಮತ್ತು ಇತರ ವ್ಯವಸ್ಥೆಗಳಿಗೆ.
07- ಪಾರ್ಕಿಂಗ್ ವಿಭಾಗಗಳು
03 ಅಂತಸ್ತಿನ ಲಾಬಿ,
ನೆಲಮಹಡಿ-ಫುಟ್ಬಾಲ್ ಕೋರ್ಟ್, ವಿರಾಮದ ಕೊಠಡಿ