Advertisement
ಬೆಂಗಳೂರಿನಲ್ಲಿ ಸೋಮವಾರ ನಡೆಯುವ ಕರ್ನಾಟಕ ರಾಜ್ಯೋತ್ಸವದಲ್ಲಿ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಯಿ ಅವರಿಂದ ಸ್ವೀಕರಿಸಲಿದ್ದಾರೆ. ಮಾಗಡಿ ಮಣ್ಣಿನ ಕುಡಿ: ಮಾಗಡಿ ತಾಲೂಕಿನ ಕಸಬಾ ಹೋಬಳಿ ಜುಟ್ಟನಹಳ್ಳಿ ಗ್ರಾಮದ ಎನ್. ಮಲ್ಲೇಶಯ್ಯ ರೈತಾಪಿ ಕುಟುಂಬದಲ್ಲಿ ಜನಿಸಿದವರು. ಕಲೆ ಎನ್ನುವುದು ರಕ್ತಗತವಾಗಿಯೇ ಬಂದಿರುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ. ನಾಡಪ್ರಭು ಕೆಂಪೇಗೌಡರ ನಾಡು ಮಾಗಡಿಯ ಮಣ್ಣು ಬಹುಮುಖ ಪ್ರತಿಭೆಗಳಿಗೆ ಜನ್ಮಕೊಟ್ಟಿದೆ. ಅದರಲ್ಲಿ ರಂಗಭೂಮಿ ಕಲಾವಿದ ಎನ್.ಮಲ್ಲೇಶಯ್ಯ ಅವರೂ ಒಬ್ಬರು.
Related Articles
Advertisement
ಕಲಾಸೇವೆ: ಮಂಡ್ಯದ ಬೆಣ್ಣಿ ಕಾಳಪ್ಪ ಅವರ ಪ್ರಸಿದ್ಧ ಸೀನರಿ ಇತ್ತು. ಆ ವೇಳೆ ಪೌರಾಣಿಕ ನಾಟಕಗಳು ಎಲ್ಲೆಡೆ ಹೆಚ್ಚಾಗಿ ನಡೆಯುತ್ತಿತ್ತು. ಸುಮಾರು 13 ವರ್ಷದ ಬಾಲಕನಾಗಿದ್ದಾಗಲೇ ನಾನು ರಂಗಭೂಮಿ ವೇದಿಕೆಯಲ್ಲಿ ಬಣ್ಣ ಹಚ್ಚಿದ್ದೆ. ನಂತರದಲ್ಲಿ ಬೆಂಗಳೂರಿನ ವಿವಿಧೆಡೆ ನಡೆಯುವ ನಾಟಕ ಪ್ರದರ್ಶನಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿಕೊಂಡು ಬರುತ್ತಿದ್ದೆ. ವಜ್ರಪ್ಪ ಎಂಬ ನಾಟಕದ ಮಾಸ್ಟರ್ ಇದ್ದರು.
ಅವರ ಮಾರ್ಗದರ್ಶನಲ್ಲಿ 1984 ರಿಂದಲೂ 84 ಭಾರಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡಿರುವೆ. ನನ್ನ ಸಹೋದರ ಭೈರಪ್ಪ ದುರ್ಯೋಧನ ಪಾತ್ರ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು. ಪ್ರತಿವರ್ಷ ಯಲಹಂಕದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಾನು ಅಲ್ಲಿಯೂ ಬಬ್ರುವಾಹನ ಪಾತ್ರ ಮಾಡುತ್ತಿದ್ದೆ. ಹೇಗೆ ಎಲ್ಲೆಡೆ ನೂರಾರು ರಂಗ ಸಜ್ಜಿಕೆಯಲ್ಲಿ ಕೃಷ್ಣನ ಪಾತ್ರ ಮಾಡಿದ್ದೇನೆ. ನನ್ನ ರಂಗಭೂಮಿ ಸೇವೆ ಪರಿಗಣಿಸಿ ಪ್ರಶಸ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಹಾಕಿದೆ. ಜಿಲ್ಲಾ ಉಸ್ತವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ನನ್ನ ಆಯ್ಕೆಗೆ ಶ್ರಮಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು ನನ್ನ ಕಲಾ ಸೇವೆಗೆ ಸಂದ ಗೌರವ ಪ್ರಶಸ್ತಿ ಸ್ವೀಕರಿಸುವುದಾಗಿ ಕಲಾವಿದ ಎನ್. ಮಲ್ಲೇಶಯ್ಯ ವಿವರಿಸಿದರು.