Advertisement

ರಾಜ್ಯ ಸಭಾ ಚುನಾವಣೆ : ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್

11:46 PM May 30, 2022 | Team Udayavani |

ಬೆಂಗಳೂರು : ರಾಜ್ಯ ಸಭಾ ಚುನಾವಣೆಗೆ ಬಿಜೆಪಿಯಿಂದ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಅವರ ಹೆಸರನ್ನು ಬಿಜೆಪಿ ಹೈ ಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಿದೆ.

Advertisement

ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್‌, ನಟ ಜಗ್ಗೇಶ್‌ ಮತ್ತು ಲೆಹರ್‌ ಸಿಂಗ್‌ ಅವರು ನಾಮಪತ್ರ ಸಲ್ಲಿಸುವುದು ಖಚಿತವಾಗಿದೆ. ಇದಕ್ಕಾಗಿ ಬಿಜೆಪಿ ವರಿಷ್ಠರು ಸೋಮವಾರ ರಾತ್ರಿ ವೇಳೆಗೆ ಲೆಹರ್‌ ಸಿಂಗ್‌ ಅವರಿಗೆ ಟಿಕೆಟ್‌ ನೀಡುವುದಾಗಿ ಘೋಷಣೆ ಮಾಡಿದರು.

ಈ ಮೂಲಕ 3ನೇ ಅಭ್ಯರ್ಥಿಯ ಕುತೂಹಲಕ್ಕೆ ತೆರೆ ಎಳೆದರು. ಬಿಜೆಪಿಯ ಮೂರನೇ ಅಭ್ಯರ್ಥಿಯ ಜತೆಗೆ ಜೆಡಿಎಸ್‌ ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದರೆ ಅಥವಾ ಬೇರೊಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ “ಅಡ್ಡ ಮತದಾನ’ ಕುದುರೆ ವ್ಯಾಪಾರ ನಡೆಯುವ ಆತಂಕವೂ ಇದೆ. ಹೀಗಾಗಿ ಎಲ್ಲ ಪಕ್ಷಗಳು ಕಾದು ನೋಡುವ ತಂತ್ರ ಅನುಸರಿಸುತ್ತಿವೆ.

ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣದ 10ನೇ  ಆರೋಪಿ ಜಾಮೀನು ಅರ್ಜಿ ವಜಾ

Advertisement

Udayavani is now on Telegram. Click here to join our channel and stay updated with the latest news.

Next