ನವದೆಹಲಿ: ಸೋಮವಾರದಿಂದಲೇ ಸಂಸತ್‌ನ ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಆರಂಭವಾಗಲಿದ್ದು, ರಾಜ್ಯಸಭೆಗೆ ಈ ಬಾರಿ 19 ಗಂಟೆಗಳ ಹೆಚ್ಚುವರಿ ಕಲಾಪ ಅವಧಿ ಸಿಗಲಿದೆ.
ಅಧಿವೇಶನದ ಮೊದಲಾರ್ಧದಲ್ಲಿ ರಾಜ್ಯಸಭೆಯ ಕಲಾಪವು ಬೆಳಗ್ಗೆ 10ರಿಂದ ಸಂಜೆ 3ರವರೆಗೆ ನಡೆದಿತ್ತು. ಆದರೆ, ದ್ವಿತೀಯಾರ್ಧದ 19 ಸಿಟ್ಟಿಂಗ್‌ನಲ್ಲಿ ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ (ಮಧ್ಯಾಹ್ನ 1 ಗಂಟೆ ಭೋಜನ ವಿರಾಮ) ಕಲಾಪ ನಡೆಯಲಿದೆ.
ಹೀಗಾಗಿ, ಸಾರ್ವಜನಿಕ ಪ್ರಾಮುಖ್ಯತೆಯ ವಿಚಾರಗಳ ಕುರಿತು ಚರ್ಚಿಸಲು ರಾಜ್ಯಸಭೆಗೆ ಒಟ್ಟಾರೆ 64 ಗಂಟೆ 30 ನಿಮಿಷಗಳ ಕಾಲಾವಕಾಶ ಸಿಗಲಿದೆ.
ಇದನ್ನೂ ಓದಿ:ಸಾಗರ : ವಿದ್ಯುತ್ ತಂತಿ ತಗುಲಿ ತೆಂಗಿನ ಮರಕ್ಕೆ ಬೆಂಕಿ
ಮೊದಲಾರ್ಧದಲ್ಲಿ ಸದನದ ಶೂನ್ಯ ಅವಧಿಯನ್ನು ಅರ್ಧಗಂಟೆಗೆ ಇಳಿಸಲಾಗಿತ್ತು. ದ್ವಿತೀಯಾರ್ಧದಲ್ಲಿ ಇದನ್ನು ಒಂದು ಗಂಟೆಗೆ ಏರಿಸಲಾಗಿದೆ ಎಂದೂ ರಾಜ್ಯಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲಾರ್ಧವು (10 ಸಿಟ್ಟಿಂಗ್) ಶೇ.101.4ರಷ್ಟು ಉತ್ಪಾದಕತೆಯೊಂದಿಗೆ ಫೆ.11ರಂದು ಸಮಾಪ್ತಿಯಾಗಿತ್ತು.