Advertisement

ರಾಜ್ಯಸಭೆ ಟಿಕೆಟ್‌: ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ

07:17 AM Jun 06, 2020 | Team Udayavani |

ಬೆಳಗಾವಿ: ರಾಜ್ಯಸಭೆಗೆ ಯಾರಿಗೆ ಟಿಕೆಟ್‌ ಕೊಡಬೇಕು ಎಂಬುದರ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಇದು ವರಿಷ್ಠರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.  ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯಸಭೆ ಟಿಕೆಟ್‌ಗಾಗಿ ಪ್ರಭಾಕರ ಕೋರೆ ಮತ್ತು ರಮೇಶ ಕತ್ತಿ ಪೈಪೋಟಿ ನಡೆಸುತ್ತಿದ್ದಾರೆ.

Advertisement

ಎಲ್ಲರಿಗೂ  ಆಕಾಂಕ್ಷೆ ಇರುತ್ತದೆ. ಆದರೆ ಇದರಲ್ಲಿ ಪಕ್ಷದ ವರಿಷ್ಠರ ನಿರ್ಧಾರ ಅಂತಿಮ. ಹಿರಿಯ ಶಾಸಕ ಉಮೇಶ ಕತ್ತಿ ಯಾವುದೇ ಬಂಡಾಯ ಮಾಡಿಲ್ಲ. ಶಾಸಕರಿಗೆ ಊಟ ಮಾಡಿಸಿದ್ದಾರೆ. ಲಾಕ್‌ಡೌನ್‌ ಇರುವುದರಿಂದ ಎಲ್ಲ ಹೋಟೆಲ್‌ಗ‌ಳು ಮುಚ್ಚಿದ್ದವು. ಈ  ಕಾರಣದಿಂದ ಉಮೇಶ ಕತ್ತಿ ತಮ್ಮ ನಿವಾಸದಲ್ಲಿ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಅದರಲ್ಲಿ ವಿಶೇಷ ಏನಿಲ್ಲ. ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು. ಸಿದ್ದರಾಮಯ್ಯ ಮಹಾನ್‌ ನಾಯಕರು. ಅವರ ಬಗ್ಗೆ  ಗೌರವವಿದೆ. ಆದರೆ ಈಗ ಅವರ ಕಣ್ಣು ಹಳದಿಯಾಗಿದೆ.

ಬಿಜೆಪಿ ಶಾಸಕರು ಅವರ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ಈ ಮೊದಲು ಜಗದೀಶ ಶೆಟ್ಟರ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ನಾನೇ ಜಿಲ್ಲಾ ಉಸ್ತುವಾರಿ  ಸಚಿವನಂತಿದ್ದೆ. ಈಗ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಜಿಲ್ಲೆಯ ಅಭಿವೃದಿಟಛಿ ದೃಷ್ಟಿಯಿಂದ ಯಾರೇ ಒಳ್ಳೆಯ ಸಲಹೆ ಅಥವಾ ಸೂಚನೆ ಕೊಟ್ಟರೆ ಅದನ್ನು ಸ್ವೀಕಾರ ಮಾಡ್ತೇನೆ, ಪûಾತೀತವಾಗಿ ಎಲ್ಲರನ್ನೂ ಕರೆದುಕೊಂಡು ಹೋಗ್ತೀನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next