Advertisement

ರಾಜ್ಯಸಭೆ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆ, ಕಾದು ನೋಡಿ : ಸಿ.ಟಿ.ರವಿ

03:32 PM Jun 02, 2022 | Team Udayavani |

ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಮೂರನೇ ಅಭ್ಯರ್ಥಿಯೂ ಗೆಲ್ಲುತ್ತಾರೆ.ಚುನಾವಣಾ ರಣ ನೀತಿಯನ್ನ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಪಕ್ಷಗಳಲ್ಲಿ ಮೋದಿ ಇಷ್ಟಪಡುವವರೂ ಇದ್ದಾರೆ. ಎರಡು ಪಕ್ಷಗಳ ಬಹಿರಂಗ ಭಿನ್ನಾಭಿಪ್ರಾಯ ಬಿಜೆಪಿಗೆ ಪ್ಲಸ್ ಆಗುತ್ತದೆ. ಜೆಡಿಎಸ್ ನಲ್ಲಿ 33 ವೋಟ್ ಇದ್ದು, ಆ ಮತಗಳೂ ಅವರಿಗೇ ಬಿಳುವ ವಿಶ್ವಾಸ ಇಲ್ಲ. ನಮ್ಮ ಎರಡು ಅಭ್ಯರ್ಥಿಗಳಿಗೂ ತಲಾ 45 ವೋಟ್ ಆದರೂ ಇನ್ನೂ 32 ವೋಟ್ ಉಳಿಯುತ್ತವೆ.ಚುನಾವಣಾ ರಣತಂತ್ರದ ಮೂಲಕ ಹೇಗೆ ಗೆಲ್ಲುತ್ತೇವೆ ಅನ್ನುವುದು ಜೂನ್ 10 ರ ಬಳಿಕ ಗೊತ್ತಾಗಲಿದೆ ಎಂದರು.

ಆರ್ ಎಸ್ ಎಸ್ ನೂರಾರು ವಿದ್ಯಾಸಂಸ್ಥೆಗಳನ್ನ ಕಟ್ಟಿದೆ. ಶುಲ್ಕವಿಲ್ಲದೆ ಕೆಲವು ಕಡೆ ಶಿಕ್ಷಣ ಕೊಡುತ್ತಿದೆ. ಸಿದ್ದರಾಮಯ್ಯ ಅವರಿಗೆ ದೃಷ್ಟಿದೋಷ ಇರುಬಹುದು . ನಿಮ್ಮ ಸುತ್ತಲೂ ಭಯೋತ್ಪಾದಕರು ಇದ್ದಾರೆ. ನಿಮ್ಮದೇ ಶಾಸಕರ ಮನೆಗೆ ಬೆಂಕಿ ಬಿತ್ತು. ಅವರಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದಾರೆ. ಹೀಗಾಗಿ ನಿಮಗೆ ದೃಷ್ಟಿ ದೋಷವಿದೆ. ಸಿದ್ದರಾಮಯ್ಯನವರಿಗೆ ಚಿಕಿತ್ಸೆ ಅಗತ್ಯವಿದೆ. ಸಿದ್ದರಾಮಯ್ಯ ವಯಸ್ಸಾಗುತ್ತಿದೆ. ಈಗಲಾದರೂ ಸುಳ್ಳನ್ನ ಹೇಳುವುದನ್ನ ಬಿಡಿ. ಆರ್ ಎಸ್ ಎಸ್ ಗೆ ನಿಮ್ಮ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ದೇಶದ ಜನರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆರ್ ಎಸ್ ಎಸ್ ದೇಶ ಭಕ್ತ ಸಂಘಟನೆಯಾಗಿದೆ. ಮುಂದಿನ‌ ದಿನಗಳಲ್ಲಿ ತಮ್ಮ ತಪ್ಪಿನ ಅರಿವು ಆಗುತ್ತಿದೆ.ಮುಂದಿನ ದಿನ ಸಿದ್ದ ರಾಮಯ್ಯ ಪ್ರಶಂಸಿಸುವ ದಿನ ಬರುತ್ತದೆ ಎಂದು ಸಿದ್ದರಾಮಯ್ಯ ಅವರ ಸರಣಿ ಟ್ವೀಟ್ ಗಳಿಗೆ ರುಗೇಟು ನೀಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ಎಲ್ಲಾ ರಂಗಗಳಲ್ಲೂ ಗಣನೀಯ ಅಭಿವೃದ್ಧಿ ಸಾಧಿಸಲಾಗಿದೆ.ಮಾತೃ ಭಾಷೆಯಲ್ಲಿ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ‌. ಇದು ಭವಿಷ್ಯದ ದಿನಗಳಲ್ಲಿ ಕ್ರಾಂತಿಯನ್ನು ಮಾಡಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ದೇಶದ ಎಲ್ಲಾ ರಾಜ್ಯಗಳನ್ನು ಸಮಾನತೆಯಿಂದ ನೋಡುವ ಸಲುವಾಗಿ ಜಮ್ಮ-ಕಾಶ್ಮೀರಕ್ಕೆ ಇದ್ದ 371ನೇ ವಿಧಿಯ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ. ಭಾರತ ಕೇಂದ್ರಿತ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತೀಯರನ್ನು ಗೌರವದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ. ಜಾಗತಿಕ ನಾಯಕರ ಸಾಲಿಗೆ ಭಾರತದ ಪ್ರಧಾನಿ ಬಂದು ನಿಂತಿದ್ದಾರೆ. ಕಟ್ಟಕಡೆಯ ಮನುಷ್ಯನಿಗೂ ಲಾಭ ಸಿಗುವಂತೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next