Advertisement

Rajya Sabha; ರೈತನ ಮಗ vs ಕಾರ್ಮಿಕನ ಮಗ: ಧನ್‌ಕರ್‌-ಖರ್ಗೆ ಮಧ್ಯೆ ಜಟಾಪಟಿ

12:10 AM Dec 14, 2024 | Team Udayavani |

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಮತ್ತು ಸಭಾಪತಿ ಜಗದೀಪ್‌ ಧನ್‌ಕರ್‌ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಶುಕ್ರವಾರ ಭಾರೀ ವಾಕ್ಸಮರ ನಡೆದಿದೆ.

Advertisement

ವಿಪಕ್ಷ ಸದಸ್ಯರು ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಅಸಮಾಧಾನ­ಗೊಂಡ ಧನ್‌ಕರ್‌, “ನಾನು ರೈತನ ಮಗ. ನಾನು ದುರ್ಬಲನಾಗಲಾರೆ. ನಾನು ಸಾಕಷ್ಟು ಸಹಿಸಿಕೊಂಡಿ ದ್ದೇನೆ. ನನ್ನ ದೇಶಕ್ಕಾಗಿ ನನ್ನ ಜೀವನವನ್ನೇ ತ್ಯಾಗ ಮಾಡು ತ್ತೇನೆ. ನಿಮಗೆ (ವಿಪಕ್ಷ­ಗಳಿಗೆ) ದಿನದ 24 ಗಂಟೆಯೂ ಒಂದೇ ಕೆಲಸ. ರೈತನ ಮಗ ಇಲ್ಲಿ ಏಕೆ ಕುಳಿತಿದ್ದಾನೆ ಎಂಬುದನ್ನು ಒಮ್ಮೆ ನೋಡಿ. ನಿಮಗೆ ಗೊತ್ತುವಳಿ ಮಂಡಿಸುವ ಹಕ್ಕಿದೆ. ಆದರೆ, ನೀವು ಸಂವಿಧಾನವನ್ನು ಅವಮಾನಿಸುತ್ತಿದ್ದೀರಿ’ ಎಂದರು.

ಇದರಿಂದ ಕೆರಳಿದ ವಿಪಕ್ಷ ನಾಯಕ ಖರ್ಗೆ, “ನೀವು ರೈತನ ಮಗನಾಗಿದ್ದರೆ, ನಾನು ಕಾರ್ಮಿ­ಕನ ಮಗ. ನಿಮ್ಮ ಬಗ್ಗೆ ಸದನದಲ್ಲಿ ಹೊಗಳಿಕೆ ಕೇಳಲು ನಾವಿಲ್ಲಿಗೆ ಬಂದಿಲ್ಲ. ನೀವು ಆಡಳಿತ ಪಕ್ಷದ ಸದಸ್ಯರಿಗೆ ಮಾತ­ನಾಡಲು ಬಿಟ್ಟು ನಮ್ಮ ಪಕ್ಷವನ್ನು ಅವಮಾನಿಸಲು ಅವಕಾಶ ನೀಡುತ್ತಿದ್ದೀರಿ. ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದೀರಿ’ ಎಂದರು. ಇದಕ್ಕೂ ಮೊದಲು ಬಿಜೆಪಿ ಸಂಸದರು ಧನಕರ್‌ ಕಾರ್ಯವೈಖರಿಯನ್ನು ಹೊಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next