Advertisement
ಶಿವಸೇನೆ ಸಂಸದ ವಿನಾಯಕ ರಾವತ್ ಅವರು, ಪಿಂಚಣಿ ಹಾಗೂ ಇತರೆ ನಿವೃತ್ತಿ ಯೋಜನೆಗಳ ಪರಿಷ್ಕರಣೆ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಬಿಜೆಪಿ ಸಂಸದ ಸುದರ್ಶನ್ ಭಗತ್ ಅವರು, ಆಯುಷ್ಮಾನ್ ಭಾರತ್ ಯೋಜನೆಯು ದುರ್ಬಳಕೆಯಾಗುತ್ತಿರುವ ಬಗ್ಗೆ ಸದನದ ಗಮನ ಸೆಳೆದರು.
Related Articles
Advertisement
ಖರ್ಗೆ ಆಕ್ಷೇಪ:ರಾಜ್ಯಸಭೆಯಲ್ಲಿ ತಮಗೆ ಮತ್ತು ಇಬ್ಬರು ಗಣ್ಯ ಸದಸ್ಯರು ಯಾವಾಗ ಬೇಕಿದ್ದರೂ ಮಾತನಾಡಬಹುದು ಎಂದು ಸಭಾಧ್ಯಕ್ಷ ಜಗದೀಪ್ ಧನ್ಕರ್ ಅವರು ಭರವಸೆ ನೀಡಿದ್ದರೂ, ತಮಗೆ ಸದನದಲ್ಲಿ ಮಾತನಾಡಲು ಅವಕಾಶ ಕಲ್ಪಿಸುತ್ತಿಲ್ಲವೇಕೆ ಎಂದು ಶುಕ್ರವಾರ ರಾಜ್ಯಸಭೆ ಪ್ರತಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಚೀನಾ ಅತಿಕ್ರಮಣದ ಬಗ್ಗೆ ಮಾತನಾಡಲು ನಾನು ಬಯಸಿದರೂ, ನನಗೆ ಅನುಮತಿ ನಿರಾಕರಿಸಲಾಯಿತು ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅರುಣಾಚಲದಲ್ಲಿ 3,097 ಕಿ.ಮೀ. ರಸ್ತೆ ನಿರ್ಮಾಣ
ಕಳೆದ 5 ವರ್ಷಗಳಲ್ಲಿ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ)ಯು ಅರುಣಾಚಲ ಪ್ರದೇಶದಲ್ಲಿ 3,097 ಕಿ.ಮೀ. ಮತ್ತು ಲಡಾಖ್‌ನಲ್ಲಿ 3,140 ಕಿ.ಮೀ. ರಸ್ತೆಯನ್ನು ನಿರ್ಮಾಣ ಮಾಡಿದೆ ಎಂದು ಲೋಕಸಭೆಗೆ ಸಚಿವ ಅಜಯ್ ಭಟ್ ಮಾಹಿತಿ ನೀಡಿದ್ದಾರೆ. 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಘರ್ಷಣೆ ನಡೆದ ಬಳಿಕ ಭಾರತವು ಎಲ್‌ಎಸಿಯುದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿದೆ ಎಂದೂ ತಿಳಿಸಿದ್ದಾರೆ.