Advertisement

ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದ ಹೈದರಾಬಾದ್ ರೇಪ್ ಅಂಡ್ ಮರ್ಡರ್ ಕೇಸ್; ಸಂಸದರ ಆಕ್ರೋಶ

09:57 AM Dec 03, 2019 | Team Udayavani |

ನವದೆಹಲಿ:ದೇಶಾದ್ಯಂತ ತೀವ್ರ ಆಕ್ರೋಶದ ಕಿಡಿಹಚ್ಚಿರುವ ಹೈದರಾಬಾದ್ ಪಶುವೈದ್ಯೆ ರೇಪ್ ಅಂಡ್ ಮರ್ಡರ್ ಪ್ರಕರಣದ ಬಗ್ಗೆ ಸೋಮವಾರ ರಾಜ್ಯಸಭೆಯಲ್ಲಿಯೂ ಪ್ರತಿಧ್ವನಿಸಿದೆ ಎಂದು ವರದಿ ತಿಳಿಸಿದೆ.

Advertisement

ಲೋಕಸಭೆಯ ಚಳಿಗಾಲದ ಅಧಿವೇಶನ ಸೋಮವಾರಕ್ಕೆ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ರಾಜ್ಯಸಭೆಯಲ್ಲಿ ಹೈದರಾಬಾದ್ ಪಶು ವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಬರ್ಭರವಾಗಿ ಹತ್ಯೆಗೈದಿರುವ ಘಟನೆ ಬಗ್ಗೆ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪ್ರಶ್ನಿಸಿದ್ದರು.

ಈ ದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರು ಸುರಕ್ಷಿತವಾಗಿ ಬದುಕುವುದೇ ದುಸ್ತರವಾಗಿದೆ. ನಾಲ್ವರು ಕಾಮ ಪಿಶಾಚಿಗಳು ಹೈದರಾಬಾದ್ ನಲ್ಲಿ ಭೀಬತ್ಸ ಕೃತ್ಯ ಎಸಗಿದ್ದಾರೆ. ಅವರನ್ನೆಲ್ಲಾ ಡಿಸೆಂಬರ್ 31ರೊಳಗೆ ನೇಣುಗಂಬಕ್ಕೆ ಏರಿಸಬೇಕು. ಶೀಘ್ರವೇ ಶೀಘ್ರ ವಿಚಾರಣಾ ಕೋರ್ಟ್ ಅನ್ನು ಸ್ಥಾಪಿಸಬೇಕು. ನ್ಯಾಯ ವಿಳಂಬವಾಗುವುದು ನ್ಯಾಯವನ್ನು ನಿರಾಕರಿಸಿದಂತೆ ಎಂದು ಎಐಎಡಿಎಂಕೆ ಸಂಸದ ವಿಜಿಲಾ ಸತ್ಯಾನಂದ ಅಭಿಪ್ರಾಯವ್ಯಕ್ತಪಡಿಸಿದರು.

ಲೋಕಸಭೆಯಲ್ಲಿಯೂ ಪಶುವೈದ್ಯೆ ಹತ್ಯೆ ಪ್ರಕರಣದ ಬಗ್ಗೆ ಚರ್ಚೆ ನಡೆದಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸಂಸದರು ಒತ್ತಾಯಿಸಿದರು. ಅಲ್ಲದೇ ಇಂತಹ ಪ್ರಕರಣಗಳು ಶೀಘ್ರವೇ ಇತ್ಯರ್ಥವಾಗುವ ಮೂಲಕ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗುವಂತೆ ಕಾನೂನು ತಿದ್ದುಪಡಿ ತರುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next