Advertisement

Congress; ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಇಂದು ಕಾಂಗ್ರೆಸ್‌ ಸಭೆ

01:05 AM Feb 10, 2024 | Team Udayavani |

ಬೆಂಗಳೂರು: ಇದೇ ತಿಂಗಳಿನ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಕಾಂಗ್ರೆಸ್‌ನ ಜಿ.ಸಿ. ಚಂದ್ರಶೇಖರ್‌, ಡಾ| ಎಲ್‌. ಹನುಮಂತಯ್ಯ ಹಾಗೂ ನಾಸಿರ್‌ ಹುಸೇನ್‌ ಮತ್ತೆ ಮುಂದುವರಿಯುವ ಸಾಧ್ಯತೆಗಳಿವೆ.

Advertisement

ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಜತೆಗೆ ಜಿ.ಸಿ. ಚಂದ್ರಶೇಖರ್‌, ಹನುಮಂತಯ್ಯ ಹಾಗೂ ನಾಸಿರ್‌ ಹುಸೇನ್‌ ಅವಧಿ ಎಪ್ರಿಲ್‌ನಲ್ಲಿ ಅಂತ್ಯ ಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ನಾಲ್ಕು ಸ್ಥಾನಗಳಿಗೆ ಚುನಾವಣ ಆಯೋಗವು ಫೆ. 27ರಂದು ಚುನಾವಣೆ ಘೋಷಿಸಿದೆ. ಗುರುವಾರವೇ ಅಧಿಸೂಚನೆ ಹೊರಬಿದ್ದಿದ್ದು, ನಾಮ ಪತ್ರ ಸಲ್ಲಿಕೆಗೆ ಫೆ. 15 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಲಿದೆ.

ನಿವೃತ್ತಿಯಾಗುತ್ತಿರುವ ಮೂವರು ಸದಸ್ಯ ರನ್ನು ಮುಂದುವರಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಸಮ್ಮತಿ ನೀಡಿದ್ದು, ಈಗಾಗಲೇ ತಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಿರುವುದರಿಂದ ಶನಿವಾರ ಸಭೆ ನಡೆದರೆ ಔಪಚಾರಿಕವಾಗಿ ನಿರ್ಧಾರ ಹೊರಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಕ್ಕಲಿಗ, ದಲಿತ ಹಾಗೂ ಅಲ್ಪಸಂಖ್ಯಾಕ ಸಮುದಾಯಗಳು ಮುಖ್ಯವಾಗಿರುವುದರಿಂದ ರಾಜ್ಯಸಭಾ ಚುನಾವಣೆಯಲ್ಲಿ ಯಾವುದೇ ಜಾತಿಯ ಅಭ್ಯರ್ಥಿಯನ್ನು ಬದಲಾಯಿ ಸಿದರೂ ಅಥವಾ ಅದೇ ಜಾತಿಯ ಮತ್ತೂಬ್ಬ ರಿಗೆ ಅವಕಾಶ ನೀಡಿದರೂ ಅಸಮಾಧಾನ ಉಂಟಾ ಗುವುದು ಸಹಜ. ಹೀಗಾಗಿ ಚುನಾ ವಣೆ ಹೊಸ್ತಿಲಲ್ಲಿ ಸಾಹಸಕ್ಕೆ ಕೈಹಾಕದೆ ಹಾಲಿ ಇರುವ ಸದಸ್ಯರಿಗೆ ಮತ್ತೂಮ್ಮೆ ರಾಜ್ಯಸಭಾ ಟಿಕೆಟ್‌ ನೀಡುವುದು ಸೂಕ್ತ ಎಂಬ ಅಭಿ ಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ದಿಲ್ಲಿಯಿಂದ ಅಭ್ಯರ್ಥಿಯಾದರೆ ಒಬ್ಬರಿಗೆ ಕೊಕ್‌
ಒಂದು ವೇಳೆ ದಿಲ್ಲಿ ಮಟ್ಟದಲ್ಲಿ ಯಾರಾದರೂ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸಲು ಬಯಸಿದರೆ ಆಗ ಈ ಮೂವರಲ್ಲಿ ಒಬ್ಬರು ಅವಕಾಶ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಜಿ.ಸಿ. ಚಂದ್ರಶೇಖರ್‌ ಬೆಂಬಲಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌, ನಾಸಿರ್‌ ಹುಸೇನ್‌ ಬೆಂಬಲಕ್ಕೆ ಸ್ವತಃ ಎಐಸಿಸಿ ಅಧ್ಯಕ್ಷ ಖರ್ಗೆ ನಿಂತಿರುವುದರಿಂದ ಸಹಜವಾಗಿ ಹನುಮಂತಯ್ಯ ಬದಲಿಗೆ ದಿಲ್ಲಿಯವರು ಅಭ್ಯರ್ಥಿ ಆಗಬಹುದು. ಸದ್ಯಕ್ಕಂತೂ ಆ ರೀತಿಯ ಯಾವುದೇ ಬೆಳ ವಣಿಗೆಗಳು ಕಾಣಿಸುತ್ತಿಲ್ಲ. ಕೊನೇ ಘಳಿಗೆಯಲ್ಲಿ ಅಚ್ಚರಿ ಬೆಳವಣಿಗೆಗಳು ಆದರೂ ಆಗಬಹುದು,
ಆಗದೆ ಇರಬಹುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next