Advertisement

Rajya Sabha: ಬಿಜೆಪಿ ಬಲ ಈಗ 86ಕ್ಕೆ ಕುಸಿತ, ಇನ್ಮುಂದೆ ಮಸೂದೆ ಪಾಸು ಅಷ್ಟು ಸುಲಭವಲ್ಲ

08:51 PM Jul 15, 2024 | Team Udayavani |

ನವದೆಹಲಿ: ಮುಂದಿನ ಸೋಮವಾರ ಸಂಸತ್‌ ಅಧಿವೇಶನ ಶುರುವಾಗಲಿರುವಂತೆಯೇ ರಾಜ್ಯಸಭೆಯಲ್ಲಿ 4 ನಾಮನಿರ್ದೇಶಿತ ಸದಸ್ಯರು ನಿವೃತ್ತರಾಗಿದ್ದಾರೆ. ಹೀಗಾಗಿ, ಮೇಲ್ಮನೆಯಲ್ಲಿ ಬಿಜೆಪಿಯ ಬಲ 86ಕ್ಕೆ ಕುಸಿದಿದೆ.

Advertisement

ಇದೇ ವೇಳೆ ಎನ್‌ಡಿಎ ಬಲ 101ಕ್ಕೆ ಕುಸಿದಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ 87 ಸದಸ್ಯರನ್ನು ಹೊಂದಿದೆ. ಸದ್ಯ ಬಿಜೆಪಿ ಇತರೆ ನಾಮನಿರ್ದೇಶಿತ ಸದಸ್ಯರು, ವೈಎಸ್‌ಆರ್‌ಸಿಪಿ, ಎಐಎಡಿಎಂಕೆಯಂತಹ ಮಿತ್ರಪಕ್ಷಗಳ ನೆರವಿನಿಂದ ರಾಜ್ಯಸಭೆಯಲ್ಲಿ ಮಸೂದೆಗಳನ್ನು ಗೆಲ್ಲಿಸಿಕೊಳ್ಳಲು ಅವಕಾಶ ಇದೆ.

ಶೀಘ್ರವೇ ರಾಜ್ಯಸಭೆ ನಡೆಯಲಿರುವ ಉಪಚುನಾವಣೆಯತ್ತ ಬಿಜೆಪಿ ದೃಷ್ಟಿ ನೆಟ್ಟಿದೆ. ಸದ್ಯ ರಾಜ್ಯಸಭೆಯಲ್ಲಿ 19 ಸ್ಥಾನಗಳು ಖಾಲಿಯಿವೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ 10 ಮಂದಿ ತಮ್ಮ ಸ್ಥಾನಕ್ಕೆ ಕಳೆದ ತಿಂಗಳೇ ರಾಜೀನಾಮೆ ನೀಡಿದ್ದರು.

ರಾಜ್ಯಸಭಾ ಬಲಾಬಲ

ಒಟ್ಟು ಸದಸ್ಯ ಬಲ-245
ಖಾಲಿಯಿರುವ ಸ್ಥಾನಗಳು-19
ಸದ್ಯದ ಸದಸ್ಯ ಬಲ-226
ಬಹುಮತಕ್ಕೆ ಅಗತ್ಯ ಸ್ಥಾನ-114
ಎನ್‌ಡಿಎ ಸದಸ್ಯ ಬಲ-101
ಬಿಜೆಪಿ ಸದಸ್ಯರ ಸಂಖ್ಯೆ-86
ಇಂಡಿಯಾ ಮಿತ್ರಕೂಟದ ಸಂಖ್ಯೆ-87
ಕಾಂಗ್ರೆಸ್‌ -26
ಇತರರು -29

Advertisement

Udayavani is now on Telegram. Click here to join our channel and stay updated with the latest news.

Next