Advertisement

BJP ಸದಸ್ಯತ್ವ ಅಭಿಯಾನ: 10 ಕೋಟಿ ನೋಂದಣಿ ಗುರಿ

01:02 AM Aug 19, 2024 | Team Udayavani |

ಹೊಸದಿಲ್ಲಿ: ಸೆಪ್ಟಂಬರ್‌ 1ರಿಂದ ಬಿಜೆಪಿ ತನ್ನ ಸದಸ್ಯತ್ವ ಅಭಿಯಾನ ಆರಂಭಿಸಲು ನಿರ್ಧರಿಸಿದೆ. ಈ ಬಾರಿ ಒಟ್ಟು 10 ಕೋಟಿ­ಗಿಂತಲೂ ಅಧಿಕ ಸದಸ್ಯರನ್ನು ನೋಂದಾಯಿಸಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಭೆ­ಯಲ್ಲಿ ತೀರ್ಮಾನಿಸಲಾಗಿದೆ. ಆದರೆ ವಿಧಾನಸಭೆ ಚುನಾವಣೆ ನಡೆಯಲಿ­ರುವ ಜಮ್ಮು- ಕಾಶ್ಮೀರ, ಹರಿಯಾಣ­ಗಳನ್ನು ಹೊರಗಿ­ಡಲು ತೀರ್ಮಾನಿಸ­ಲಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಹೇಳಿದ್ದಾರೆ.

Advertisement

ಮಿಸ್ಡ್ ಕಾಲ್‌, ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮತ್ತು ನಮೋ ಆ್ಯಪ್‌ ಮೂಲಕ ಸದಸ್ಯರನ್ನು ಹೊಂದಲು ತೀರ್ಮಾನಿಸ ಲಾಗಿದೆ ಎಂದು ಸಂಬಿತ್‌ ಪಾತ್ರಾ ತಿಳಿಸಿ ದ್ದಾರೆ. ಬಿಜೆಪಿಯ ಆಂತರಿಕ ಚುನಾ ವಣೆಗೆ ಪೂರಕವಾಗಿ ಸದಸ್ಯತ್ವ ಅಭಿಯಾನ ನಡೆಸಲಾಗುತ್ತದೆ. ಮಹಾರಾಷ್ಟ್ರ ಬಿಜೆಪಿಯ ಹಿರಿಯ ನಾಯಕ ವಿನೋದ್‌ ತಾಬ್ಡೆ ಅವರು ಸದಸ್ಯತ್ವ ಅಭಿಯಾನ ನಡೆಸಿಕೊಡುವ ನೇತೃತ್ವ ವಹಿಸಲಿದ್ದಾರೆ. ಸೆ.1 ಮತ್ತು ಸೆ.10ರಂದು ಒಟ್ಟು 2 ಹಂತಗಳಲ್ಲಿ ಅದನ್ನು ಕೈಗೆತ್ತಿಕೊ ಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕಿ ವಿನಯ ರಾಟ್ಕರ್‌ ಅವರು ಕರ್ನಾಟಕದಲ್ಲಿ ನಡೆಯಲಿರುವ ಸದಸ್ಯತ್ವ ಅಭಿಯಾನದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next