Advertisement

ಗರ್ಭಪಾತ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅಸ್ತು

11:41 PM Mar 16, 2021 | Team Udayavani |

ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತೆಯರು, ಅಪ್ರಾಪ್ತ ವಯಸ್ಕರು ಮತ್ತು ಅಂಗವಿಕಲರ ಸಹಿತ “ವಿಶೇಷ ವರ್ಗದ ಮಹಿಳೆ’ಯರ ಗರ್ಭಪಾತಕ್ಕೆ ಈಗಿರುವ 20 ವಾರಗಳ ಗರಿಷ್ಠ ಮಿತಿಯನ್ನು 24 ವಾರಗಳಿಗೆ ಏರಿಸುವ ಮಸೂದೆಯನ್ನು ರಾಜ್ಯಸಭೆ ಮಂಗಳವಾರ ಅಂಗೀಕರಿಸಿದೆ.

Advertisement

“ದಿ ಮೆಡಿಕಲ್‌ ಟರ್ಮಿನೇಶನ್‌ ಆಫ್ ಪ್ರಗ್ನೆನ್ಸಿ (ಅಮೆಂಡ್‌ಮೆಂಟ್‌) ಬಿಲ್‌ 2020ನ್ನು ರಾಜ್ಯಸಭೆಯು ಧ್ವನಿ ಮತದಿಂದ ಅನುಮೋದಿಸಿದೆ. ಲೋಕಸಭೆಯಲ್ಲಿ ಮಸೂದೆ ವರ್ಷದ ಹಿಂದೆಯೇ ಅಂಗೀಕೃತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next