Advertisement

ಯೋಧರ ಶೌರ್ಯವನ್ನು ಹೊಗಳಲು ಪದಗಳು ಸಾಕಾಗುವುದಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್

04:40 PM Jan 14, 2023 | Team Udayavani |

ಚೀರ್ ಬಾಗ್‌( ಉತ್ತರಾಖಂಡ) : ಹುತಾತ್ಮ ಯೋಧರಿಗೆ ಸಮರ್ಪಿತವಾಗಿರುವ ಶೌರ್ಯ ಸ್ಥಲ ಎಂಬ ಯುದ್ಧ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಉದ್ಘಾಟಿಸಿದರು.

Advertisement

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ರಕ್ಷಣಾ ಸಚಿವರು ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟ್ರ ಸೇವೆಯಲ್ಲಿ ಹುತಾತ್ಮರಾದ ರಾಜ್ಯದ ವೀರ ಯೋಧರಿಗೆ ಗೌರವ ಸಲ್ಲಿಸಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಹಿರಿಯ ಯೋಧರ ದಿನಾಚರಣೆಯ ಸಂದರ್ಭದಲ್ಲಿ ಸಶಸ್ತ್ರ ಪಡೆಗಳು, ಯೋಧರು ಮತ್ತು ಯುದ್ಧದಲ್ಲಿ ಸೈನಿಕರಾಗಿದ್ದ ಪತಿಯನ್ನು ಕಳೆದುಕೊಂಡಿರುವ ಮಹಿಳೆಯರನ್ನು ಉದ್ದೇಶಿಸಿ, ದೇಶದ ಗಡಿಗಳು ವೀರ ಯೋಧರಿಂದಾಗಿ ಸುರಕ್ಷಿತವಾಗಿವೆ ಅವರಿಂದಾಗಿ ಹೆಮ್ಮೆಯಿಂದ ನಿಲ್ಲುತ್ತದೆ.ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಯೋಧರ ಕೊಡುಗೆ ಬಹಳ ದೊಡ್ಡದಾಗಿದೆ. ನಿಮ್ಮಿಂದಾಗಿ ನಾವು ಇಂದು ಹೆಮ್ಮೆಯಿಂದ ನಿಲ್ಲಬಲ್ಲೆವು. ನಿಮ್ಮ ಶೌರ್ಯವನ್ನು ಹೊಗಳಲು ಪದಗಳು ಸಾಕಾಗುವುದಿಲ್ಲ ಎಂದರು.

”ಯೋಧರು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಏಕೆಂದರೆ ಅದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ.ದೇಶಕ್ಕಾಗಿ ನೀವು ಮಾಡುವ ಮಹಾನ್ ತ್ಯಾಗಕ್ಕೆ ಪ್ರತಿಯಾಗಿ ನಾವು ಮಾಡಬಹುದಾದ ಒಂದು ಸಣ್ಣ ಭಾಗವಾಗಿದೆ. ಇಡೀ ದೇಶವು ಯುದ್ಧ ಯೋಧರಿಗೆ ಕೃತಜ್ಞತೆಯ ಋಣವನ್ನು ಹೊಂದಿದೆ”ಎಂದರು.

Advertisement

Udayavani is now on Telegram. Click here to join our channel and stay updated with the latest news.

Next