Advertisement

ರಾಜನಾಥ್‌ ಸಿಂಗ್- ಮುಫ್ತಿ ಭೇಟಿ ಮುನ್ನವೇ,ಯಾಸಿನ್‌ ಮಲಿಕ್‌ ಅರೆಸ್ಟ್‌

03:25 PM Sep 09, 2017 | udayavani editorial |

ಶ್ರೀನಗರ : ದಿಲ್ಲಿಯ ಎನ್‌ಐಎ ಪ್ರಧಾನ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುವುದಕ್ಕೆ ಮುನ್ನವೇ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್‌ ಮಲಿಕ್‌ ಮತ್ತು ಇತರ ಕೆಲವು ಹಿರಿಯ ಪ್ರತ್ಯೇಕತಾವಾದಿ ನಾಯಕರನ್ನು ಪೊಲೀಸರು ಇಂದು ಬಂಧಿಸಿ ಗೃಹ ಬಂಧನದಲ್ಲಿ ಇರಿಸಿದರು. 

Advertisement

ನಾಲ್ಕು ದಿನಗಳ ಕಾಶ್ಮೀರ ಭೇಟಿಯನ್ನು ಇಂದಿನಿಂದ ಆರಂಭಿಸಿರುವ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಂದು ಕಾಶ್ಮೀರ ಸಮಸ್ಯೆ ಕುರಿತಾಗಿ ವಿವಿಧ ಕ್ಷೇತ್ರಗಳ ನಾಯಕರೊಂದಿಗೆ ಮಾತುಕತೆ ನಡೆಸುವುದಕ್ಕೆ ಮುನ್ನವೇ ಯಾಸಿನ್‌ ಮಲಿಕ್‌ ಬಂಧನವಾಗಿರುವುದು ಗಮನಾರ್ಹವಾಗಿದೆ. 

ರಾಜನಾಥ್‌ ಸಿಂಗ್‌ ಅವರಿಂದು ಶ್ರೀನಗರದ ನೆಹರೂ ಗೆಸ್ಟ್‌ ಹೌಸ್‌ನಲ್ಲಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದರು. 

ಸಿಂಗ್‌ ಅವರು ಶ್ರೀನಗರ, ಅನಂತನಾಗ್‌, ಜಮ್ಮು ಮತ್ತು ರಾಜೋರಿಗೆ ತೆರಳಿ ಅಲ್ಲಿ ಪೌರ ಸಮಜದ ವಿವಿಧ ನಾಯಕರು, ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳ ನಾಯಕರು ಹಾಗೂ ಔದ್ಯಮಿಕ ರಂಗದ ಹಿರಿಯರೊಡನೆ ಮಾತುಕತೆ ನಡೆಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next