Advertisement

ಅರಿವಿನ ಕೊರತೆಗೆ ಬ್ರಿಟಿಷ್‌ ಆಳ್ವಿಕೆ ಕಾರಣ: ಸಚಿವ ರಾಜನಾಥ್‌ ಸಿಂಗ್‌

12:44 AM Dec 25, 2022 | Team Udayavani |

ಡೆಹ್ರಾಡೂನ್‌: ಮೂರು ಶತಮಾನಗಳ ಬ್ರಿಟಿಷರ ಆಳ್ವಿಕೆಯು ಭಾರತೀಯರು ತಮ್ಮ ವೈಭವದ ಇತಿಹಾಸವನ್ನು ತಿಳಿಯು ವುದನ್ನು ತಡೆಯಿತು ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

Advertisement

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಸ್ವಾಮಿ ರಾಮ್‌ ಹಿಮಾಲಯನ್‌ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ಬಲಿಷ್ಠ ಭಾರತವನ್ನು ನಿರ್ಮಿಸಲು ದೇಶದ ಗತಕಾಲದ ಭವ್ಯ ಇತಿಹಾಸ, ಅದರ ಶ್ರೇಷ್ಠ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಬಗ್ಗೆ ಯುವಕರು ಅರಿಯುವುದು ಅಗತ್ಯವಿದೆ,’ ಎಂದರು.

“ಶ್ರೇಷ್ಠವಾದ ಎಲ್ಲವೂ ನಮಗೆ ಗಂಗಾ ನದಿಯ ದಡದಿಂದ ಬಂದಿದೆ’ ಎಂಬ ಫ್ರಾನ್ಸ್‌ ತತ್ವಜ್ಞಾನಿ ವಾಲ್ಟೆರ್‌ನ ಹೇಳಿಕೆ ಉಲ್ಲೇಖಿಸಿದ ಅವರು, ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷ್ಯಾ ಮತ್ತು ಬೌದ್ಧರ ನಾಡಾಗಿರುವ ಥಾಯ್ಲೆಂಡ್‌ ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ರಾಮಾಯಣಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡಿವೆ,’ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next