Advertisement

34 ಕೋಟಿ ರೂ. ಲಾಭ ನಿರೀಕ್ಷೆಯಲ್ಲಿದ್ದ ಕುಂದ್ರಾ

12:21 AM Jul 29, 2021 | Team Udayavani |

ಮುಂಬಯಿ/ಹೊಸದಿಲ್ಲಿ:  ಅಶ್ಲೀಲ ಚಿತ್ರ ನಿರ್ಮಾಣದ ಆರೋಪದಡಿ ಬಂಧಿತರಾಗಿರುವ ಉದ್ಯಮಿ ರಾಜ್‌ ಕುಂದ್ರಾರವರು ತಮ್ಮ ಅಶ್ಲೀಲ ಚಿತ್ರಗಳಿಂದ 2023ರ ಹೊತ್ತಿಗೆ 34 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದರು ಎಂದು ಪೊಲೀಸರು ಮುಂಬಯಿಯ ಸ್ಥಳೀಯ ಕೋರ್ಟ್‌ಗೆ ತಿಳಿಸಿದ್ದಾರೆ.

Advertisement

ಜಾಮೀನು ಅರ್ಜಿ ತಿರಸ್ಕಾರ: ಇದೇ ವೇಳೆ ಮುಂಬಯಿ ಕೋರ್ಟ್‌ ರಾಜ್‌ ಕುಂದ್ರಾ,  ರಯಾನ್‌ ಥೋಪೆì ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ. ಜಾಮೀನಿಗೆ ಮನವಿ ಮಾಡಿ ರಾಜ್‌ ಪರ ವಕೀಲರು ಮಾಡಿದ ಎಲ್ಲ  ವಾದಗಳನ್ನು ತಳ್ಳಿಹಾಕಿದ ನ್ಯಾಯಪೀಠ, ಈ ಪ್ರಕರಣದಲ್ಲಿ ರಾಜ್‌ ಅವರೇ ಪ್ರಮುಖ ಆರೋಪಿಯಾಗಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿತು.

ಮತ್ತೂಂದೆಡೆ ಬಾಂಬೆ ಹೈಕೋರ್ಟ್‌ನಲ್ಲಿ ರಾಜ್‌ ಕುಂದ್ರಾ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯೂ  ತಿರಸ್ಕೃತಗೊಂಡಿದೆ, ಬಾಲಿ ವುಡ್‌ನ‌ ನಟಿಯೊಬ್ಬರು ತಮ್ಮನ್ನು ರಾಜ್‌ ಕುಂದ್ರಾರವರ ಹಾಟ್‌ಶಾಟ್ಸ್‌ ಆ್ಯಪ್‌ನಲ್ಲಿ ಲಭ್ಯವಾಗುವ ವೀಡಿಯೋಗಳಲ್ಲಿ ನಟಿಸುವಂತೆ ಒತ್ತಾಯಿಸಲಾಗಿತ್ತೆಂದು ಹೇಳಿಕೆ ನೀಡಿದ್ದಾರೆ. ಅದರನ್ವಯ, ಪೊಲೀಸರು ಹೊಸ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. ಆದರೆ, ಅದರಲ್ಲಿ ರಾಜ್‌ ಕುಂದ್ರಾರವರ ಹೆಸರಿಲ್ಲ. ರಾಜ್‌ ಕುಂದ್ರಾರ ಕಂಪೆನಿ ಹಾಗೂ ನಟಿ ಗೆಹನಾ ವಶಿಷ್ಠ ಹೆಸರನ್ನು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next