Advertisement

ನಮ್ಮ ನೆರವು ಋಣಭಾರ ಹೇರುವುದಕ್ಕಲ್ಲ; ಚೀನಾ ವಿರುದ್ಧ ಭಾರತ ಪರೋಕ್ಷ ಟೀಕೆ

07:58 PM Nov 10, 2021 | Team Udayavani |

ವಿಶ್ವಸಂಸ್ಥೆ: ಇತರ ದೇಶಗಳಿಗೆ ನೆರವು ನೀಡುವ ಮೂಲಕ ಅವುಗಳಿಗೆ ಸಾಲಭಾರ ಉಂಟಾಗುವಂತೆ ಮಾಡುವುದಿಲ್ಲ ಎಂದು ಭಾರತ ಚೀನಾಕ್ಕೆ ಟಾಂಗ್‌ ನೀಡಿದೆ.

Advertisement

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವ ಡಾ.ರಾಜಕುಮಾರ್‌ ರಂಜನ್‌ ಸಿಂಗ್‌ ಈ ಆರೋಪ ಮಾಡಿದ್ದಾರೆ.

“ನೆರೆಹೊರೆಯ ದೇಶಗಳಿಗೆ ಸಹಾಯ ಮಾಡುವುದೇ ಭಾರತದ ಆದ್ಯತೆ. ಇದೇ ನೀತಿಯನ್ನು ಆಫ್ರಿಕಾ ಖಂಡದ ರಾಷ್ಟ್ರಗಳಿಗೂ ವಿಸ್ತರಿಸುತ್ತದೆ. ಅಗತ್ಯವಿರುವ ದೇಶಗಳಿಗೆ ನೆರವು ನೀಡುವ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ.

ಜಗತ್ತಿನ ಶ್ರೇಯೋಭಿವೃದ್ಧಿಗೆ ಭಾರತ ಯಾವತ್ತೂ ಶ್ರಮಿಸುತ್ತಿದೆ. ಇತರ ರಾಷ್ಟ್ರಗಳ ಜತೆಗೆ ಅಭಿವೃದ್ಧಿಯಲ್ಲಿ ಸಹಭಾಗಿತ್ವವನ್ನು ಬಯಸುತ್ತೇವೆ. ಜತೆಗೆ ಆಯಾ ರಾಷ್ಟ್ರಗಳ ಆದ್ಯತೆಗಳನ್ನೂ ಗೌರವಿಸುತ್ತೇವೆ. ನಾವು ನೀಡುವ ನೆರವು ಕೂಡ ಆಯಾ ದೇಶಗಳಿಗೆ ಅಗತ್ಯಕ್ಕೆ ತಕ್ಕಂತೆ ಇರುತ್ತದೆಯೇ ಹೊರತು, ನಾವು ಕೊಟ್ಟ ನೆರವಿನಿಂದ ಆ ದೇಶಗಳನ್ನು ಸಾಲದ ಕೂಪಕ್ಕೆ ತಳ್ಳುವಂತೆ ಇರುವುದಿಲ್ಲ’ ಎಂದು ಡಾ.ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ:ದಲಿತ ನಾಯಕರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ : ತಂಗಡಗಿ

Advertisement

ಚೀನಾದ ಕುತ್ಸಿತ ಸಾಲ ನೀತಿಯನ್ನು ಪರೋಕ್ಷವಾಗಿ ಉಲ್ಲೇಖೀಸಿ ವಿದೇಶಾಂಗ ಖಾತೆ ಸಹಾಯಕ ಸಚಿವರು ಈ ಮಾತುಗಳನ್ನಾಡಿದ್ದಾರೆ. “”ಅಂತಾರಾಷ್ಟ್ರೀಯಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಿಡುವಲ್ಲಿ ಎಲ್ಲಾ ರಾಷ್ಟ್ರಗಳನ್ನೂ ಒಳಗೊಳ್ಳಬೇಕು. ಮಾನವೀಯ ನೆರವು ನೀಡುವುದರ ಜತೆಗೇಈ ಅಂಶವೂ ಸಾಗಬೇಕಾಗಿದೆ. ಇದರ ಜತೆಗೆ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮನಸ್ಸು ಮಾಡಬೇಕಾಗಿದೆ ಎಂದರು. ಸಂಘರ್ಷಮಯ ಸನ್ನಿವೇಶಗಳಲ್ಲಿ ನೀಡುವ ಮಾನವೀಯ ನೆರವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸಲ್ಲದು ಎಂದರು. ಸಂಘರ್ಷಕ್ಕೆ ಒಳಗಾದ ರಾಷ್ಟ್ರಗಳಿಗೆ ವಾಗ್ಧಾನ ಮಾಡಿದಂತೆಯೇ ನೆರವು ನೀಡಿದೆ ಭಾರತ ಸರ್ಕಾರ ಎಂದು ರಾಜಕುಮಾರ್‌ ರಂಜನ್‌ ಸಿಂಗ್‌ ಹೇಳಿದ್ದಾರೆ.

ಪ್ರಾದೇಶಿಕವಾಗಿ ಮತ್ತು ಉಪ-ಪ್ರಾದೇಶಿಕ ಸಂಸ್ಥೆಗಳು ಅತ್ಯಂತ ಸಂಕಷ್ಟಮಯ ಸನ್ನಿವೇಶಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿವೆ. ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಅವುಗಳತ್ತ ನಂಬಿಕೆಯ ನೋಟಹರಿಸಬೇಕಾಗಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next