Advertisement

ರಾಜ್‌ಕುಮಾರ್‌ ನಾಡಿನ ಸಾಂಸ್ಕೃತಿಕ ರಾಯಭಾರಿ

12:39 PM Jul 26, 2018 | |

ನಂಜನಗೂಡು: ಕಲಾ ಪ್ರೌಢಿಮೆಯಿಂದ ಹುಟ್ಟಿದ ನೆಲೆ ಹಾಗೂ ಭಾಷೆಯ ಸಾಂಸ್ಕೃತಿಕ ರಾಯಭಾರಿಯಾಗಿ ಡಾ.ರಾಜ್‌ಕುಮಾರ್‌ ರೂಪುಗೊಂಡರೆಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು. 

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್‌ ನೆನಪಿನ ಕಾರ್ಯಕ್ರಮ ಹಾಗೂ ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ ಸಂಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದ್ಭುತ ನಟನಾ ಕೌಶಲ್ಯ ಹೊಂದಿದ್ದ ರಾಜಕುಮಾರ್‌, ಭೌತಿಕವಾಗಿ ನಮ್ಮ ಮುಂದೆ ಇಲ್ಲದಿದ್ದರೂ ಜನಮಾನಸರಲ್ಲಿ ಎಂದಿಗೂ ಅಜರಾಮರರಾಗಿದ್ದಾರೆ.

ರಂಗಭೂಮಿ ಮತ್ತು ಚಿತ್ರರಂಗ ಕ್ಷೇತ್ರಗಳಲ್ಲಿ ಅವರೇ ಇಂದಿಗೂ ರಾಜ್ಯದ ಸಾಂಸ್ಕೃತಿಕ ರಾಯಭಾರಿ. ಅಭಿಮಾನಿಗಳಲ್ಲಿ ದೇವರನ್ನು ಕಂಡ ಏಕೈಕ ಕಲಾವಿದ ರಾಜ್‌ಕುಮಾರ್‌. ಆದ್ದರಿಂದ ಅವರು ವರನಟನಾಗಲು ಸಾಧ್ಯವಾಯಿತು ಎಂದು ಹೇಳಿದರು. 

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ ಮಾತನಾಡಿ, ಸಿನಿಮಾ ರಂಗದ ಪ್ರವೇಶಕ್ಕಿಂತಲೂ ಮೊದಲು ಅವರಿಗಿದ್ದ ದಕ್ಷಿಣ ಕಾಶಿ ನಂಜನಗೂಡಿನ ನಂಟನ್ನು ಮೆಲಕು ಹಾಕಿದರು. ನಂಜನಗೂಡಿನ ಒಕ್ಕಲಗೇರಿಯ ವಾಸಿಯಾಗಿದ್ದಾಗಲೇ ಬೇಡರ ಕಣ್ಣಪ್ಪ ಚಿತ್ರಕ್ಕೆ ಆಯ್ಕೆಯಾದವರು ರಾಜ್‌ಕುಮಾರ್‌. ಅವರ ಆ ಪಾತ್ರವೇ ಅವರನ್ನು ಮೇರು ಪರ್ವತಕ್ಕೇರಿಸಿತು ಎಂದು ಹೇಳಿದರು.

ಚಲನಚಿತ್ರ ನಟ ಸುಂದರರಾಜ್‌ ಮಾತನಾಡಿ, ರಾಜಕುಮಾರ್‌ರಂತಹ ಮೇರು ವ್ಯಕ್ತಿಯೊಂದಿಗೆ ಕೆಲಸ ನಿರ್ವಸುವ ಅವಕಾಶ ತಮಗೆ ದೊರೆತಿದ್ದು, ನಮ್ಮ ಪಾಲಿನ ಸೌಭಾಗ್ಯ. ರಾಜಕುಮಾರ್‌ರ ಆದರ್ಶ ಬದುಕು ಇಂದಿನ ಹಾಗೂ ಭವಿಷ್ಯದ ಯುವ ಕಲಾದರಿಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.

Advertisement

ಸಮಾರಂಭದಲ್ಲಿ ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್‌, ಮಾಜಿ ಶಾಸಕ ಕೊಳ್ಳೇಗಾಲ ಬಾಲರಾಜ್‌, ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ದೇವರಾಜ್‌, ಮಾಂಬಳ್ಳಿ ರಾಜಶೇಖರ್‌, ಸರ್ಕಾರಿ ಪ್ರಥಮ ದರ್ಜೆಕಾಲೇಜು ಪ್ರಾಂಶುಪಾಲ ಪ್ರೊ.ಎಸ್‌.ಬಿ.ಸಿದ್ದರಾಜು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ.ಶಿವಸ್ವಾಮಿ, ಪ್ರೊ.ಸೀತಾ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next