Advertisement

ರಾಜೀವ್‌ಗಾಂಧಿ, ಅರಸು ಜನ್ಮದಿನಾಚರಣೆ

08:15 AM Aug 21, 2017 | Harsha Rao |

ಉಡುಪಿ: ಮಾಜಿ ಪ್ರಧಾನಿ ದಿ| ರಾಜೀವ್‌ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಯ ಆಶ್ರಯದಲ್ಲಿ ಆ. 20ರಂದು ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ನಡೆಸಲಾಯಿತು.

Advertisement

ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕ, ಯುವತಿಯರಿಗೆ 18 ವರ್ಷಕ್ಕೆ ಮತದಾನದ ಹಕ್ಕು, ಉಳುವವನೆ ಹೊಲದೊಡೆಯ ಕಾನೂನಿನ ಮೂಲಕ ರಾಜ್ಯದ ಲಕ್ಷಾಂತರ ಮಂದಿಗೆ ಭೂ ಒಡೆತನ, ಬಡವರಿಗೆ 3, 5 ಸೆಂಟ್ಸ್‌ ಜಾಗ ನೀಡುವುದರ ಮೂಲಕ ರಾಜೀವ್‌ ಗಾಂಧಿಯವರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕಂಪ್ಯೂಟರ್‌ ಯುಗವನ್ನು ಪ್ರಾರಂಭಿಸಿ ಮಾಹಿತಿ ತಂತ್ರಜ್ಞಾನಕ್ಕೆ ಕೊಡುಗೆಯನ್ನೂ ನೀಡಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌ ಅವರು ಮಾತನಾಡಿ, ಸಂವಿಧಾನದ 73-74ರ ವಿಧಿಗೆ ತಿದ್ದುಪಡಿ ತಂದು ಪಂಚಾಯತ್‌ರಾಜ್‌ ವ್ಯವಸ್ಥೆಯ ವಿಕೇಂದ್ರೀಕರಣವನ್ನು ರಾಜೀವ್‌ ಗಾಂಧಿ ಮಾಡಿದ್ದರು. ಡಿ. ದೇವರಾಜ ಅರಸು ಅವರು ಬಡವರಿಗಾಗಿ ಹಲವು ಜನಪರ ಕಾರ್ಯಕ್ರಮವನ್ನು ನೀಡಿದ್ದರು ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಯತೀಶ್‌ ಕರ್ಕೇರ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ಬಿ. ನರಸಿಂಹಮೂರ್ತಿ, ಕಿಶನ್‌ ಹೆಗ್ಡೆ, ಅಲೆವೂರು ಹರೀಶ್‌ ಕಿಣಿ, ಕೇಶವ ಎಂ. ಕೋಟ್ಯಾನ್‌, ಅಶೋಕ್‌ ಕುಮಾರ್‌ ಕೊಡವೂರು, ಪಿ. ಅಮೃತ್‌ ಶೆಣೈ, ಕೀರ್ತಿ ಶೆಟ್ಟಿ, ಜ್ಯೋತಿ ಹೆಬ್ಟಾರ್‌, ಹಿಂದುಳಿದ ವರ್ಗದ ಜತಿನ್‌, ಚರಣ್‌, ರಾಘವೇಂದ್ರ, ಪ್ರಶಾಂತ ಪೂಜಾರಿ, ಸದಾಶಿವ ಕಟ್ಟೆಗುಡ್ಡೆ, ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ. ಜನಾರ್ದನ ಭಂಡಾರ್ಕರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next