ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರಂತೆ “ಮಿಸ್ಟರ್ ಕ್ಲೀನ್” ವ್ಯಕ್ತಿತ್ವ ಹೊಂದಿರುವುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Triple talaq: ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿ, ರಸ್ತೆಯಲ್ಲೇ ತಲಾಖ್ ಕೊಟ್ಟ ಪತಿ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡಾ ವಿದೇಶಗಳಿಗೆ ತೆರಳಿದಾಗ ಸ್ವೀಕರಿಸುವ ಗೌರವವನ್ನು ಮೋದಿಜೀಯವರು ಕೂಡಾ ಅದೇ ರೀತಿ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಜೊತೆಗೆ ಮೋದಿಜೀ ಮಾಜಿ ಪ್ರಧಾನಿ ರಾಜೀವ್ ಗಾಂಧಿಯಂತೆ ಮಿಸ್ಟರ್ ಕ್ಲೀನ್ ವ್ಯಕ್ತಿತ್ವ ಹೊಂದಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.
ಅಜಿತ್ ಪವಾರ್ ಇತ್ತೀಚೆಗಷ್ಟೇ ಶರತ್ ಪವಾರ್ ನೇತೃತ್ವದ ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ(NCP)ವನ್ನು ತೊರೆದು ಬಿಜೆಪಿ-ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದರು. ಪವಾರ್ ಪ್ರಧಾನಿ ಮೋದಿ ಅವರು ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಈ ಹೇಳಿಕೆಯನ್ನು ನೀಡಿರುವುದಾಗಿ ವರದಿಯಾಗಿದೆ.
ಪ್ರಧಾನಿ ಮೋದಿ ಅವರನ್ನು ಪುಣೆಯ ಜನರು ರಸ್ತೆಯ ಎರಡೂ ಕಡೆಗಳಲ್ಲಿ ನಿಂತು ಸ್ವಾಗತಿಸಿದ್ದಾರೆ. ನಾನು ಮತ್ತು ದೇವೇಂದ್ರಜೀ ಅವರು ಪ್ರಧಾನಿ ಬೆಂಗಾವಲು ಪಡೆ ವಾಹನದಲ್ಲಿ ಕುಳಿತಿದ್ದೇವು. ಆದರೆ ಪ್ರಧಾನಿ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಯಾರೊಬ್ಬರೂ ಕಪ್ಪು ಬಾವುಟವನ್ನು ಹಾರಿಸಿದ್ದನ್ನು ನಾವು ಕಂಡಿಲ್ಲ. ಪ್ರಧಾನಿ ಅವರನ್ನು ಪುಣೆ ಜನರು ಅದ್ದೂರಿಯಾಗಿ ಬರಮಾಡಿಕೊಂಡಿರುವುದಾಗಿ ಅಜಿತ್ ಪವಾರ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕಾಗಿ ಪುಣೆಗೆ ಆಗಮಿಸುವ ವೇಳೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎನ್ ಸಿಪಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿದಿನ 18 ಗಂಟೆ ಕಾರ್ಯನಿರ್ವಹಿಸುತ್ತಾರೆ:
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಿನ 18 ಗಂಟೆಗಳಷ್ಟು ಕಾಲ ಕಾರ್ಯನಿರ್ವಹಿಸುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಇಡೀ ದೇಶವೇ ದೀಪಾವಳಿ ಸಂಭ್ರಮದಲ್ಲಿ ತೊಡಗಿದ್ದರೆ, ಮೋದಿಜೀಯವರು ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿಕೊಳ್ಳುತ್ತಾರೆ ಎಂದು ಅಜಿತ್ ಪವಾರ್ ಹೇಳಿದರು.
ಕಳೆದ 9 ವರ್ಷಗಳಿಂದ ನಾವು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ನೋಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಜೀಯವರಂತೆ ಜನಪ್ರಿಯತೆ ಪಡೆದ ಮತ್ತೊಬ್ಬ ನಾಯಕರಿಲ್ಲ. ಸತ್ಯ ಯಾವಾಗಲೂ ಸತ್ಯವೇ. ನನಗೆ ಅಭಿವೃದ್ಧಿ ಬೇಕಾಗಿದೆ ಎಂದು ಪವಾರ್ ತಿಳಿಸಿದ್ದಾರೆ.