Advertisement

ಪಂಚಾಯತ್‌ ರಾಜ್‌ ಬೆಳವಣಿಗೆಗೆ ರಾಜೀವ್‌ ಕೊಡುಗೆ ಅಪಾರ

03:08 PM May 22, 2023 | Team Udayavani |

ಚಾಮರಾಜನಗರ: ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಬಲ ತುಂಬುವ ಜೊತೆಗೆ ಮಾಹಿತಿ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯ ಮಾಡಿಸಿ ಕೊಟ್ಟ ರಾಜೀವ್‌ಗರು ಇಡೀ ದೇಶಕ್ಕೆ ಮಾದರಿ ಆಡಳಿತ ನೀಡಿದ ಉತ್ತಮ ಪ್ರಧಾನಿ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ದಿ. ರಾಜೀವ್‌ಗಾಂಧಿ ಅವರ 32ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಪಂಚಾಯತ್‌ ರಾಜ್‌ ಬಲಪಡಿಸಿದ ರಾಜೀವ್‌: ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜನ ಸಾಮಾನ್ಯರಿಗೂ ಅಧಿಕಾರ ಹಂಚಿಕೆಯಾಗ ಬೇಕು ಎಂಬ ಹಂಬಲವನ್ನು ಹೊಂದಿದ್ದರು. ಪಂಚಾ ಯತ್‌ ರಾಜ್‌ ವ್ಯವಸ್ಥೆಯನ್ನು ದೇಶಾದ್ಯಂತ ಬಲಪ ಡಿಸಿ, ದೆಹಲಿಯಿಂದ ಹಳ್ಳಿಯವರೆಗೆ ಅಧಿಕಾರ ವಿಕೇಂದ್ರೀಕರಣ ಗೊಳಿಸಿದ್ದರು. ಜಿಲ್ಲಾ ಪಂಚಾಯಿತಿ ಯನ್ನು ಬಲವರ್ಧನೆಗೊಳಿಸುವ ಮೂಲಕ ನನ್ನಂಥ ಅನೇಕರು ಅಧಿಕಾರಕ್ಕೆ ಬರಲು ಕಾರಣರಾದರು. ಅಲ್ಲದೇ ದೇಶದಲ್ಲಿ ಮೊದಲಿಗೆ ಮಾಹಿತಿ ತಂತ್ರಜ್ಞಾನ ಬೆಳೆಸಲು ಅವರ ದೂರದೃಷ್ಟಿ ಕಾರಣ. ದೂರವಾಣಿ ವ್ಯವಸ್ಥೆಯನ್ನು ಗಣಕೀಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.

ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳ ಬೆಳವಣಿಗಾಗಿ ವಿಶೇಷ ಆಸಕ್ತಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ರಾಜೀವ್‌ ಗಾಂಧಿಯವರು ದೇಶದ ಅಭಿವೃದ್ಧಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಬೆಳವಣಿಗೆಯಾಗಲು ಹೆಚ್ಚಿನ ಉತ್ತೇಜನ ನೀಡಿದ್ದರು. ಇದರ ಪರಿಣಾಮವಾಗಿ ದೂರ ಸಂಪರ್ಕ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳವ ಣಿಗೆಯಾಯಿತು. ತಾಂತ್ರಿಕ ರಂಗದಲ್ಲಿ ಇತರ ದೇಶಗಳ ಸರಿ ಸಮಾನವಾಗಿ ನಿಲ್ಲಲು ಕಾರಣ ರಾದರು. ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳ ಬೆಳವಣಿಗಾಗಿ ವಿಶೇಷ ಆಸಕ್ತಿ ವಹಿಸಿದರು. ಒಟ್ಟಾರೆಯಾಗಿ ನವ ಭಾರತದ ಬೆಳವಣಿಗೆಗೆ ರಾಜೀವ್‌ ಗಾಂಧಿಯವರ ಕೊಡುಗೆ ಅಪಾರ ಎಂದು ತಿಳಿಸಿದರು.

ಯುವಕರಿಗೆ ಸ್ಪೂರ್ತಿ ತುಂಬಿದ ಗಾಂಧಿ: ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಮಾತ ನಾಡಿ, ರಾಜೀವ್‌ ಗಾಂಧಿಯವರು ಯುವಕರಿಗೆ ಸ್ಪೂರ್ತಿ ತುಂಬಿ, ಯುವ ರಾಜಕಾರಣಿಗಳ ಬೆನ್ನು ತಟ್ಟುತ್ತಿದ್ದರು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಭಾವಿಸಿ ಅಂದೇ 21 ವರ್ಷಕ್ಕಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಕೆ ಮಾಡಿ, ಯುವಕರು ಸಕ್ರಿಯವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಇಂಥ ಚಿಂತನಾ ಶೀಲ ರಾಜಕಾರಣಿ ರಾಜೀವ್‌ಗಾಂಧಿ ಉಗ್ರಗಾಮಿಗಳ ಗುಂಡಿಗೆ ಬಲಿಯಾದದ್ದು ದುರ್ದೈವ ಎಂದು ವಿಷಾದಿಸಿದರು.

Advertisement

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎ.ಎಸ್‌. ಗುರು ಸ್ವಾಮಿ, ಮಹಮದ್‌ ಅಸ್ಗರ್‌, ತಾಪಂ ಮಾಜಿ ಸದಸ್ಯರಾದ ಕಾಗಲವಾಡಿ ಶಿವ ಸ್ವಾಮಿ, ಮುಖಂಡ ರಾದ ಶಂಭಪ್ಪ, ಶಿವಮೂರ್ತಿ, ಎಎಚ್‌ಎನ್‌ ನಸ್ರುಲ್‌ಖಾನ್‌, ಆಯೂಬ್‌ ಖಾನ್‌, ಜಿಪಂ ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್‌, ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆ ಶಕುಂತಲಾ, ರಾಚ ಶೆಟ್ಟಿ, ಮಾಜಿ ನಗರಸಭಾ ಸದಸ್ಯರಾದ ಕೆಂಪ ರಾಜು, ಮಲ್ಲು, ಪುಟ್ಟಸ್ವಾಮಿ, ಚಂದ್ರು ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next