Advertisement

Jailer: ಓಟಿಟಿ ಬರುವ ಮುನ್ನವೇ ʼಜೈಲರ್‌ʼ HD ಪ್ರಿಂಟ್‌ ಲೀಕ್; ಎಲ್ಲೆಡೆ ಶೇರ್‌ ಆದ ಲಿಂಕ್

09:45 AM Aug 30, 2023 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅಭಿನಯದ ʼಜೈಲರ್‌ʼ ಹವಾ ಜೋರಾಗಿದೆ. ಸಿನಿಮಾ ರಿಲೀಸ್‌ ಆಗಿ 20 ದಿನ ಕಳೆದರೂ ಇನ್ನು ಕೂಡ ಹಲವಾರು ಕಡೆ ಸಿನಿಮಾ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ.

Advertisement

2 ವರ್ಷದ ಬಳಿಕ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಬಿಗ್‌ ಸ್ಕ್ರೀನ್‌ ನಲ್ಲಿ ಕಾಣಿಸಿಕೊಂಡಿದ್ದಾರೆʼ ʼಜೈಲರ್‌ʼ ರಜಿನಿಕಾಂತ್‌ ಹಾಗೂ ನೆಲ್ಸನ್‌ ದಿಲೀಪ್‌ ಕುಮಾರ್‌ ಇಬ್ಬರಿಗೂ ಕಂಬ್ಯಾಕ್‌ ಸಿನಿಮಾವೆಂದೇ ಹೇಳಬಹುದು. ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಮಾತ್ರವಲ್ಲದೆ, ಗ್ಲೋಬಲ್‌ ಮಟ್ಟದಲ್ಲೂ ʼಜೈಲರ್‌ʼ ಭರ್ಜರಿ ಕಲೆಕ್ಷನ್‌ ಮಾಡಿದೆ. ವರ್ಲ್ಡ್‌ ವೈಡ್‌ 550 ಕೋಟಿಗೂ ಹೆಚ್ಚು ರೂಪಾಯಿ ಗಳಿಕೆ ಕಂಡಿದೆ.

ಇನ್ನೇನು ಥಿಯೇಟರ್‌ ನಿಂದ ಸಿನಿಮಾ ಓಟಿಟಿಗೆ ಬರಬೇಕೆನ್ನುವ ಸುದ್ದಿ ಟ್ರೆಂಡ್‌ ನಲ್ಲಿರುವಾಗಲೇ ʼಜೈಲರ್‌ʼ ಹೆಚ್‌ ಡಿ ಕಾಪಿ ಆನ್ಲೈನ್‌ ನಲ್ಲಿ ಲೀಕ್‌ ಆಗಿರುವುದು ಥಿಯೇಟರ್‌ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.

ಆನ್ಲೈನ್‌ ನಲ್ಲಿ ವಿವಿಧ ವೆಬ್‌ ಸೈಟ್‌ ನಲ್ಲಿ ʼಜೈಲರ್‌ʼ ಸಿನಿಮಾದ ಹೆಚ್‌ ಡಿ ಕಾಪಿ ಲೀಕ್‌ ಆಗಿದೆ. ಸಿನಿಮಾದ ಲಿಂಕ್‌ ನ್ನು ಟ್ವಿಟರ್‌ ಸೇರಿದಂತೆ ಇತರೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಲೀಕ್‌ ಆದ ದೃಶ್ಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಚೆನ್ನೈನ ರೋಹಿಣಿ ಸಿಲ್ವರ್ ಸ್ಕ್ರೀನ್‌ನ ನಿರ್ದೇಶಕ ರೇವಂತ್ ಚರಣ್ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. “ದಯವಿಟ್ಟು ʼಜೈಲರ್‌ʼ ಚಿತ್ರದ ಯಾವುದೇ ಹೆಚ್‌ ಡಿ ದೃಶ್ಯಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ಸಿನಿಮಾವನ್ನು ಥಿಯೇಟರ್‌ ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಿ. ಪೈರಸಿಯನ್ನು ಬೆಂಬಲಿಸಬೇಡಿ” ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ʼಜೈಲರ್‌ʼ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ ನಿರ್ಮಾಣ ಮಾಡಿದ್ದು, ಸನ್‌ ನೆಕ್ಸ್ಟ್‌ ಓಟಿಟಿಯಲ್ಲಿ ಸಿನಿಮಾ ಶೀಘ್ರದಲ್ಲಿ ಸ್ಟ್ರೀಮ್‌ ಆಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ʼಜೈಲರ್‌ʼ ರಜಿನಿಕಾಂತ್‌ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಾಯಕನ್, ರಮ್ಯಾ ಕೃಷ್ಣನ್, ವಸಂತ ರವಿ, ಸುನೀಲ್, ತಮನ್ನಾ ಮತ್ತು ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ಮೋಹನ್ ಲಾಲ್, ಶಿವ ರಾಜಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next