Advertisement

ರಜನಿ ಹುಟ್ಟೂರಲ್ಲಿ ಪುಳಕ

09:20 AM Jan 08, 2018 | Karthik A |

ಪುಣೆ/ಹೊಸದಿಲ್ಲಿ: ಸೂಪರ್‌ಸ್ಟಾರ್‌ ರಜನೀಕಾಂತ್‌ ರಾಜಕೀಯ ಪ್ರವೇಶ ವಿಚಾರ ಅಭಿಮಾನಿಗಳಲ್ಲಿ ಪುಳಕ ತಂದಿರುವುದರ ಜತೆಗೆಯೇ ಅವರ ಹುಟ್ಟೂರಲ್ಲೂ ಸಂಭ್ರಮ ಮನೆಮಾಡಿದೆ. ಅವರು ಹುಟ್ಟೂರು ಇರುವುದು ಮಾವಡಿ ಕಡೇಪಥರ್‌ ಗ್ರಾಮದಲ್ಲಿ. ಪುಣೆಯಿಂದ 60 ಕಿಮೀ ದೂರದಲ್ಲಿದೆ ಈ ಗ್ರಾಮ. ರಜನೀಕಾಂತ್‌ ಆಗಿ ಬದಲಾಗುವುದಕ್ಕಿಂತ ಮೊದಲು ಅವರು ಶಿವಾಜಿ ರಾವ್‌ ಗಾಯಕ್ವಾಡ್‌ ಆಗಿದ್ದರು. “ನಮ್ಮ ಗ್ರಾಮದ ಮಣ್ಣಿನ ಮಗ ಸಿನೆಮಾದಲ್ಲಿ ದೊಡ್ಡ ಹೆಸರು ಗಳಿಸಿದ್ದಾನೆ. ಈಗ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾನೆ. ಸಿನೆಮಾದಲ್ಲಿ ಹಿಟ್‌ ಆದಂತೆ ರಾಜಕೀಯದಲ್ಲೂ ಹೆಸರು ಮಾಡುತ್ತಾನೆ’ ಎಂದು ಗ್ರಾಮಸ್ಥರು ಸಂತಸಪಟ್ಟಿದ್ದಾರೆ. ಈಗ ಅವರು ಅಲ್ಲಿಗೆ ಭೇಟಿ ನೀಡುತ್ತಾರಾ ಎಂಬ ಕುತೂಹಲ ಸ್ಥಳೀಯರದ್ದು.

Advertisement

ಈ ಸ್ಥಳ ಸುಪ್ರಸಿದ್ಧ ಯಾತ್ರಾ ಸ್ಥಳ ಜೆಜೂರಿಗೆ ಸಮೀಪದಲ್ಲಿದೆ. ರಜನಿಯವರ ಅಜ್ಜ ಕರ್ನಾಟಕದ ಬಸವನ ಬಾಗೇವಾಡಿಗೆ ತೆರಳಿ,  ಅಲ್ಲಿಂದ ಬೆಂಗಳೂರಿಗೆ ಹೋದರು ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿ ಜಮೀನು ಇದ್ದರೂ ರಜನಿ ಕುಟುಂಬ ಕರ್ನಾಟಕದಲ್ಲಿಯೇ ಉಳಿಯಿತು. ಪುಣೆಯ ಪುರಂದರ ತಾಲೂಕಿನ ಇತರ ಗ್ರಾಮಗಳೂ ರಜನಿಯ ಸಂಪರ್ಕವನ್ನು ಮೆಲುಕು ಹಾಕುತ್ತವೆ. 2016ರಲ್ಲಿ ಬಿಜೆಪಿ ಶಾಸಕ ಅನಿಲ್‌ ಗೋಟೆ, ತಲೈವಾಗೆ “ಮಹಾರಾಷ್ಟ್ರ ಭೂಷಣ್‌’ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದರು.

ನಮ್ಮಂತೆಯೇ ಇದೆ
ತಲೈವಾ ರಜನಿ ಪ್ರದರ್ಶಿಸಿದ “ಅಪಾನ ಮುದ್ರೆ’ಯ ಚಿಹ್ನೆ ನಾವು ವಿನ್ಯಾಸ ಮಾಡಿದ ಮುದ್ರೆಯಂತೆಯೇ ಇದೆ ಎಂದು ಮುಂಬಯಿಯ ಯೋಗ ಸ್ಟಾರ್ಟಪ್‌ವೊಂದು ಹೇಳಿಕೊಂಡಿದೆ. ಆದರೆ ಹೆಬ್ಬೆರಳನ್ನು ಮುಕ್ತವಾಗಿ ಇರಿಸಲಾಗಿದೆ. 2002ರಲ್ಲಿ ರಜನಿ ಅಭಿನಯಿಸಿದ “ಬಾಬಾ’ ಸಿನೆಮಾದಲ್ಲಿ ಆ ಮುದ್ರೆ ಪ್ರದರ್ಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next