Advertisement

ಪುತ್ರಿಯ ಸಿನಿಮಾದಲ್ಲಿ “ತಲೈವಾ” ವಿಶೇಷ ಪಾತ್ರ: “ಲಾಲ್‌ ಸಲಾಂ” ಪೋಸ್ಟರ್‌ ಔಟ್

03:18 PM Nov 05, 2022 | Team Udayavani |

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಪುತ್ರಿ ಐಶ್ವರ್ಯ ರಜಿನಿಕಾಂತ್‌ ನಿರ್ದೇಶನಕ್ಕೆ ಮತ್ತೆ ಇಳಿದಿದ್ದಾರೆ. ಅವರ ಮುಂದಿನ ಸಿನಿಮಾ “ಲಾಲ್‌ ಸಲಾಂ” ಸಿನಿಮಾದ ಮುಹೂರ್ತ ನೆರವೇರಿಸಿ, ಪೋಸ್ಟರ್‌ ಬಿಡುಗಡೆ ಮಾಡಿ, ಚಿತ್ರದಲ್ಲಿ ವಿಶೇಷ ಪಾತ್ರ ಮಾಡುವವರ ಬಗ್ಗೆ ಮಾಹಿತಿ ಕೊಟ್ಟಿದೆ.

Advertisement

ರಜಿನಿ ಹಿರಿಯ ಮಗಳು ಐಶ್ವರ್ಯ ಈ ಹಿಂದೆ 2012 ರಲ್ಲಿ “3” ಸಿನಿಮಾವನ್ನು ನಿರ್ದೇಶನ ಮಾಡಿದ್ದರು. “ವೈ ರಾಜಾ ವೈʼ ಸಿನಿಮಾಕ್ಕೆ ನಿರ್ದೇಶನ ಮಾಡಿ, “ಸಿನಿಮಾ ವೀರನ್” ಎಂಬ ಸಾಕ್ಷ್ಯ ಚಿತ್ರವನ್ನು ಮಾಡಿದ್ದರು. ಈಗ ಐಶ್ವರ್ಯ ರಜಿನಿಕಾಂತ್‌ “ಲಾಲ್‌ ಸಲಾಂ” ಸಿನಿಮಾವನ್ನು ಮಾಡಲಿದ್ದಾರೆ.

ವಿಷ್ಣು ವಿಶಾಲ್‌, ವಿಕ್ರಾಂತ್‌ ಮುಖ್ಯಭೂಮಿಕೆಯಲ್ಲಿನ ಚಿತ್ರದಲ್ಲಿ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಪುತ್ರಿಯ ಸಿನಿಮಾದಲ್ಲಿ ರಜಿನಿಕಾಂತ್‌ ಕಾಣಿಸಿಕೊಳ್ಳಲಿದ್ದಾರೆ.

ಇದೊಂದು ತೆಲುಗು ಸಿನಿಮಾವಾಗಿದ್ದು, ಪೋಸ್ಟರ್‌ ರಿಲೀಸ್‌ ಆಗಿದೆ. ಸುಟ್ಟ ಸ್ಥಿತಿಯಲ್ಲಿ ಕ್ರಿಕೆಟ್‌ ಹೆಲ್ಮೆಟ್‌ ವೊಂದು ಬಿದ್ದಿದೆ. ಅದರ ಹಿಂದೆ ಆಗಷ್ಟೇ ಮುಗಿದ ಆಕ್ರೋಶ, ಪ್ರತಿಭಟನೆಯ ವಾತಾವರಣವಿದೆ. ಇಬ್ಬರು ನಾಯಕರು ಇರುವುದರಿಂದ ಮೇಲ್ನೋಟಕ್ಕೆ ಇದೊಂದು ಕ್ರಿಕೆಟ್‌ ಕಥಾಹಂದರದ ಕಥೆಯಂತೆ ಕಾಣುತ್ತದೆ.

ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ. ಈ ಸಿನಿಮಾ 2023 ಕ್ಕೆ ತೆರೆಗೆ ಬರಲಿದೆ. ಸದ್ಯ ರಜಿನಿಕಾಂತ್‌ ನೆಲ್ಸನ್ ದಿಲೀಪ್‌ಕುಮಾರ್ ಅವರ “ಜೈಲರ್”‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಈ ಸಿನಿಮಾ ಏಪ್ರಿಲ್‌ 14, 2023 ರಂದು ರಿಲೀಸ್‌ ಆಗಲಿದೆ.

Advertisement

 

#LslSalaam Pooja launch pics. #SuperstarRajinikanth @ash_rajinikanth @LycaProductions pic.twitter.com/7x3iVYGhnS

— Sreedhar Pillai (@sri50) November 5, 2022

Advertisement

Udayavani is now on Telegram. Click here to join our channel and stay updated with the latest news.

Next