ಚೆನ್ನೈ: ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಸಿನೆಮಾ ರಂಗಕ್ಕೆ ಬರುವ ಮುನ್ನ ಬಸ್ ಕಂಡಕ್ಟರ್ ಆಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರು ಪತ್ರಕರ್ತರೂ ಆಗಿದ್ದರು. ಈ ಅಂಶ ವನ್ನು ಅವರೇ ಬಹಿ ರಂಗಪಡಿಸಿದ್ದಾರೆ.
ಮಂಗಳವಾರ ಚೆನ್ನೈಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. “ಬೆಂಗಳೂರಿನಲ್ಲಿರುವ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 2 ತಿಂಗಳ ಕಾಲ ಕರಡು ತಿದ್ದುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಈ ಮೂಲಕ ಪತ್ರಕರ್ತನೂ ಆಗಿದ್ದೆ’ ಎಂದು ಹೇಳಿದ್ದಾರೆ.
ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ ತಲೈವಾ, ಈಗ ಉಂಟಾಗುವ ಬದಲಾವಣೆಯಿಂ ದಾಗಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ತಮಿಳುನಾಡಿನ ಬದಲಾ ವಣೆ ಗಾಗಿ ಸಮಗ್ರವಾಗಿರುವ ದಿಕ್ಸೂಚಿ ಪತ್ರ (ವಿಷನ್ ಡಾಕ್ಯುಮೆಂಟ್) ಸಿದ್ಧವಾಗಬೇಕಾಗಿದೆ ಎಂದು ಹೇಳಿದ್ದಾರೆ. 2021ರ ವಿಧಾನಸಭೆ ಚುನಾ ವಣೆ ವೇಳೆಗೆ ಘೋಷಣೆಯಾಗುವ ರಾಜಕೀಯ ಪಕ್ಷಕ್ಕೆ ಹೆಸರು ಇಡುವ ಬಗ್ಗೆ ಇನ್ನೂ ನಿರ್ಧಾರ ವಾಗಿಲ್ಲ ಎಂದರು. ಜತೆಗೆ ಚಿಹ್ನೆಯ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ. ಈ ಬಗ್ಗೆ ನಿರ್ಧಾ ರವಾದ ತತ್‌ಕ್ಷಣವೇ ತಿಳಿಸುವುದಾಗಿ ಹೇಳಿದ್ದಾರೆ.
ಸೋಮವಾರ ಪಕ್ಷದ ವೆಬ್‌ಸೈಟ್ ಮತ್ತು ಆ್ಯಪ್ ಬಿಡುಗಡೆ ಮಾಡಿ, ಅದರ ಮೂಲಕ ತಮಿಳುನಾಡಿನ ಜನರನ್ನು ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದ್ದರು.
ರಾಜಕೀಯ ಪ್ರವೇಶ ಮಾಡಿ ಪಕ್ಷ ಸ್ಥಾಪನೆ ಮಾಡುವುದು ರಜನಿಕಾಂತ್ ಅವರ ಹಕ್ಕು. ತಮಿಳುನಾಡು ದೊಡ್ಡ ರಾಜ್ಯ. ಈ ಹಿಂದೆ ಕೂಡ ಚಿತ್ರ ನಟರು ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಅದರಲ್ಲಿ ಕೆಲವರು ಯಶಸ್ವಿಯಾಗಿದ್ದರೆ, ಮತ್ತೆ ಹಲವರು ವಿಫಲರಾಗಿದ್ದಾರೆ.
ವಿ.ನಾರಾಯಣಸ್ವಾಮಿ, ಪುದುಚೇರಿ ಮುಖ್ಯಮಂತ್ರಿ