ಚೆನ್ನೈ : ಆರೋಗ್ಯ ತಪಾಸಣೆಗೆಂದು ಅಮೆರಿಕಕ್ಕೆ ತೆರಳಿದ್ದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತವರೂರಿಗೆ ವಾಪಸ್ ಆಗಿದ್ದಾರೆ.
ರಜನಿಕಾಂತ್ ಅವರು ಕಳೆದ ತಿಂಗಳು ಪತ್ನಿ ಲತಾ ಹಾಗೂ ಪುತ್ರಿ ಐಶ್ವರ್ಯ ಜೊತೆಗೆ ಯುಎಸ್ ಗೆ ಹಾರಿದ್ದರು. ಅವರ ಈ ಪ್ರವಾಸಕ್ಕೆ ಕಾರಣ ಆರೋಗ್ಯ. ಅಮೆರಿಕದಲ್ಲಿನ ಆಸ್ಪತ್ರೆಯಲ್ಲಿ ತಮ್ಮ ಆರೋಗ್ಯ ತಪಾಸಣೆಗೆಂದು ರಜನಿ ಅವರು ತೆರಳಿದ್ದರು. ಇದೀಗ ಮೂರು ವಾರಗಳ ಬಳಿಕ ಚೆನ್ನೈಗೆ ಆಗಮಿಸಿದ್ದಾರೆ.
ಇನ್ನು ತಮ್ಮ ನೆಚ್ಚಿನ ನಟ ಚೆನ್ನೈಗೆ ಆಗಮಿಸುತ್ತಿರುವ ವಿಷಯ ತಿಳಿದ ರಜನಿ ಫ್ಯಾನ್ಸ್ ಚೆನ್ನೈ ಏರ್‌ಪೋರ್ಟ್‌ನತ್ತ ದೌಡಾಯಿಸಿದ್ದರು. ಅಭಿಮಾನಿಗಳಿಗೆ ನಮಸ್ಕಾರ ಮಾಡಿದ ರಜನಿಕಾಂತ್ ತಮ್ಮ ನಿವಾಸದತ್ತ ಹೊರಟರು. ಆರೋಗ್ಯವಾಗಿ ವಾಪಸ್ ಬಂದ ರಜನಿಕಾಂತ್‌ರನ್ನ ನೋಡಿದ ಅಭಿಮಾನಿಗಳು ಸಂತಸಗೊಂಡರು. ರಜಿನಿಕಾಂತ್ ಫುಲ್ ಫಿಟ್ ಅಂಡ್ ಫೈನ್ ಆಗಿ ವಾಪಸ್ ಬಂದಿದ್ದಾರೆ.