Advertisement

ಸದ್ಯ ಲಾಕ್‌ಡೌನ್‌ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ : ರಾಜೇಶ್‌ ಟೋಪೆ

10:46 PM Apr 01, 2021 | Team Udayavani |

ಮುಂಬಯಿ: ಪ್ರತಿದಿನ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ  ಕಾರಣ  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೆ ಬರಬಹುದೇ ಎಂಬುದು ಎಲ್ಲರ ಪ್ರಶ್ನೆ ಆಗಿರುವಾಗ  ಈ ಹಿನ್ನೆಲೆಯಲ್ಲಿ ಮಾತನಾಡಿದ  ರಾಜ್ಯ ಆರೋಗ್ಯ ಸಚಿವ  ರಾಜೇಶ್‌ ಟೋಪೆ  ಅವರು,  ಪ್ರಸ್ತುತ ಯಾರೂ ಲಾಕ್‌ಡೌನ್‌ ಬಯಸುವುದಿಲ್ಲ  ಹೇಳಿದ್ದಾರೆ.

Advertisement

ಸದ್ಯ ಲಾಕ್‌ಡೌನ್‌ ಬಗ್ಗೆ  ಯಾವುದೇ ನಿರ್ಣಯ   ಕೈಗೊಳ್ಳುವುದಿಲ್ಲ  ಆದರೆ ಈ ಬಗ್ಗೆ ಚರ್ಚೆ  ನಡೆಯುತ್ತಿದ್ದು, ಜನಸಂದಣೆ ಕಂಡು ಬಂದ ನಂತರ ಇದನ್ನು ತಡೆಯುವ ದೃಷ್ಟಿಯಿಂದ ಇಂತಹ ಪ್ರದೇಶಗಳಲ್ಲಿ  ಈ  ಕಠಿನ ಕ್ರಮ ಕೈಗೊಳ್ಳಲಾವುದು ಎಂದು  ಟೋಪೆ ಹೇಳಿದ್ದಾರೆ.

ರಾಜ್ಯದಲ್ಲಿ  ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ  ಆತಂಕವಿದೆ. ಎಲ್ಲಾ ಪ್ರದೇಶಗಳನ್ನು ಅಧ್ಯಯನ ಮಾಡುವ ಮೂಲಕ ಲಾಕ್‌ಡೌನ್‌ ಅನ್ನು ನಿರ್ಧರಿಸಲಾಗುತ್ತದೆ. ಪರಿಸ್ಥಿತಿಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗುತ್ತದೆ. ನಿರ್ಬಂಧಗಳನ್ನು ಬಿಗಿಗೊಳಿಸಬೇಕಾಗಿದೆ. ಜನರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ, ಜನರ ಉದಾಸೀನತೆಯು  ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ರಾಜೇಶ್‌ ಟೋಪೆ ಹೇಳಿದರು.

ಕೊರೊನಾ  ಸೋಂಕು ಹೆಚ್ಚಾದಂತೆ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯು ದೊರೆಯುತ್ತಿಲ್ಲ.  ಆದ್ದರಿಂದ, ಹಾಸಿಗೆಗಳ ಸಂಖ್ಯೆ ರೋಗಿಗಳ ಸಂಖ್ಯೆಗಿಂತ ಕಡಿಮೆಯಾದಾಗ, ಲಾಕ್‌ಡೌನ್‌  ಎನ್ನುವುದು  ಕೊನೆಯ ಉಪಾಯವಾಗಿರುತ್ತದೆ ಎಂದು ಟೋಪೆ ಹೇಳಿದ್ದಾರೆ.

ಐಸಿಯುಗಳ ಮತ್ತು ಆಮ್ಲಜನಕ ಹಾಸಿಗೆಗಳ ಕೊರತೆಯ ಬಗ್ಗೆ ದೂರುಗಳಿದ್ದರೆ, ಲಾಕ್‌ ಡೌನ್‌ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಯುತ್ತಿದೆ. ಲಾಕ್‌ಡೌನ್‌ ಅಗತ್ಯವಿಲ್ಲ  ಎಂದು ಕೆಲವರು ಹೇಳುತ್ತಿದ್ದಾರೆ ಆದರೆ ಎಲ್ಲ ಬಗ್ಗೆ ವಿಚಾರ ಮಾಡಿದ ನಂತರ ನಿರ್ಧಾರವನ್ನು ತಲುಪಬೇಕಾಗಿದೆ ಎಂದು ರಾಜೇಶ್‌ ಟೋಪೆ ಹೇಳಿದ್ದಾರೆ.

Advertisement

ಕೋವಿಡ್ ಮತ್ತೆ ವೇಗವಾಗಿ ಹರಡುತ್ತಿದೆ. ಆದ್ದರಿಂದ ಕೆಲವು ನಗರಗಳಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ. ಈ ಸಮಯದಲ್ಲಿ ನೀವು ಆಸ್ಪತ್ರೆಯ ಹಾಸಿಗೆಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80 ರಷ್ಟು ಹಾಸಿಗೆಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು, ಇದರಿಂದ ಹಾಸಿಗೆಗಳು ಕಡಿಮೆಯಾಗುವುದಿಲ್ಲ. ಅಲ್ಲದೆ, ಶೇ. 80 ರಷ್ಟು ಆಮ್ಲಜನಕ ಸಿಲಿಂಡರ್‌ಗಳನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಲು ಸೂಚನೆ ನೀಡಲಾಗಿದೆ ಎಂದು ರಾಜೇಶ್‌ ಟೋಪೆ ಹೇಳಿದ್ದಾರೆ.

ಶರದ್‌ ಪವಾರ್‌ ಅವರ ಆರೋಗ್ಯ ಚೇತರಿಕೆ :

ಪಿತ್ತಕೋಶದ ಶಸ್ತ್ರ ಚಿಕಿತ್ಸೆಗಾಗಿ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ ಶಸ್ತ್ರಚಿಕಿತ್ಸೆಗೆ ನಡೆಸಲಾಯಿತು ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್‌ ಟೋಪೆ ತಿಳಿಸಿದ್ದಾರೆ. ಶರದ್‌ ಪವಾರ್‌ ಅವರ ಆರೋಗ್ಯವು ಈಗ ಸ್ಥಿರವಾಗುತ್ತಿದ್ದು, ಮುಂದಿನ  ನಾಲ್ಕೈದು ದಿನಗಳಲ್ಲಿ ಡಿಸ್ಚಾರ್ಜ್‌ ಮಾಡಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next