ಬಿಗ್‌ಬಾಸ್ ಸ್ಪರ್ಧಿ ರಾಜೀವ್ ನಾಯಕನಾಗಿ ಅಭಿನಯಿಸುತ್ತಿರುವ “ಉಸಿರೇ.. ಉಸಿರೇ…’ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು.
ನಟ ಕಿಚ್ಚ ಸುದೀಪ್ “ಉಸಿರೇ.. ಉಸಿರೇ…’ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್‌ನ ಬಿಡುಗಡೆ ಮಾಡಿದರು.
ಇದೇ ವೇಳೆ ಮಾತನಾಡಿದ ಸುದೀಪ್, “ರಾಜೀವ್ ನನಗೆ ಸಿಸಿಎಲ್ ದಿನಗಳಿಂದಲೂ ಪರಿಚಯ. ಈ ಸಮಾರಂಭಕ್ಕೆ ಬರಲು ಮುಖ್ಯಕಾರಣ ರಾಜೀವ. ಅವನಲ್ಲಿ ಈಗಲೂ ಏನೋ ಒಂಥರ ಮುಗ್ಧತೆ ಇದೆ. ಅವನು ಕ್ರಿಕೆಟ್ ಸರಿಯಾಗಿ ಅಭ್ಯಾಸ ಮಾಡಿದ್ದರೆ, ಇಷ್ಟೊತ್ತಿಗೆ ರಾಜ್ಯ ಮಟ್ಟದಲ್ಲಿ ಆಡುತ್ತದ್ದ. ಆದರೆ ಅವನ ಆಸಕ್ತಿ ಸಿನಿಮಾದ ಕಡೆಗಿತ್ತು. ಈ ಸಿನಿಮಾದ ಮೂಲಕ ತನ್ನಕೆರಿಯರ್ ಹುಡುಕಿಕೊಳ್ಳುತ್ತಿರುವ ರಾಜೀವ್‌ಗೆ ಒಳ್ಳೆದಾಗಲಿ. ಈಗಿನ ಪರಿಸ್ಥಿತಿಯಲ್ಲಿ ದೊಡ್ಡ ದೊಡ್ಡ ನಿರ್ಮಾಪಕರೇ ಸಿನಿಮಾ ಮಾಡಲು ಮುಂದಾಗುತ್ತಿಲ್ಲ. ಹೀಗಿರುವಾಗ ನಿರ್ಮಾಪಕ ಪ್ರದೀಪ್ ಧೈರ್ಯ ಮಾಡಿ ಈ ಸಿನಿಮಾ ನಿರ್ಮಿಸುತ್ತಿರುವುದು ತುಂಬ ಖುಷಿಯ ವಿಚಾರ. ಒಳ್ಳೆಯವರೆಲ್ಲಾ ಸೇರಿ ಮಾಡುವ ಕೆಲಸ ಒಳ್ಳೇಯದೇ ಆಗಿರುತ್ತದೆ’ ಎಂದು ಸುದೀಪ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಚಿತ್ರದ ನಾಯಕ ನಟ ರಾಜೀವ್, “ನಾನು ಈ ತನಕಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಇಂತಹ ವೇದಿಕೆ ಸಿಗಲು10 ವರ್ಷಬೇಕಾಯಿತು. ನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ, ಅವರು ಅಭಿನಯಿಸಿದ್ದ ಸಿನಿಮಾದ “ಉಸಿರೇ.. ಉಸಿರೇ…’ ಹಾಡನ್ನುಕೇಳಿದೆ. ನನಗೆ ಈ ಚಿತ್ರದ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ನಮ್ಮ ಚಿತ್ರಕ್ಕೆ ಇದೇ ಟೈಟಲ್ ಇಡೋಣ. ಈಗಲೇ ರಿಜಿಸ್ಟ್ರಾರ್ ಮಾಡುವಂತೆ ಹೇಳಿದೆ. ಸಿನಿಮಾದ ಪಾತ್ರ ಸಹಜವಾಗಿರುವುದರಿಂದ, ಪಾತ್ರಕ್ಕಾಗಿ ಹೆಚ್ಚೇನು ವರ್ಕೌಟ್ ಮಾಡಿಲ್ಲ.4 ವರ್ಷಗಳ ನಮ್ಮ ಶ್ರಮಕ್ಕೆ ಈಗ ಪ್ರತಿಫಲ ಸಿಗುತ್ತಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಿ.ಎಂ ವಿಜಯ್, “ಇದೊಂದು ಔಟ್ ಆ್ಯಂಡ್ ಔಟ್ ನೈಜ ಘಟನೆಯಾಧಾರಿತ ಸ್ಟೋರಿ ಸಿನಿಮಾ. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆಯನ್ನ ಇಟ್ಟುಕೊಂಡು ಸಿನಿಮಾದ ಕಥೆ ಮಾಡಿದ್ದೇವೆ. ಇಲ್ಲಿಯವರೆಗೂ ಯಾವ ಸಿನಿಮಾದಲ್ಲೂ ಕಾಣದ ಕ್ಲೈಮ್ಯಾಕ್ಸ್ ಈ ಸಿನಿಮಾದಲ್ಲಿದೆ. ಇಲ್ಲಿಯವರೆಗೆ ಬಂದ ಎಲ್ಲ ಲವ್ ಸ್ಟೋರಿಗಳಿಗಿಂತ ಡಿಫರೆಂಟ್ ಆಗಿ ಸಿನಿಮಾ ನಿಲ್ಲುತ್ತದೆ. ಇದೇ ಸೆಪ್ಟೆಂಬರ್ ಕೊನೆಗೆ ಶೂಟಿಂಗ್ ಶುರು ವಾಗಲಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:’21 ಅವರ್ಸ್’ ಟೈಮ್ ಫಿಕ್ಸ್ ಮಾಡಿದ ಡಾಲಿ
“ಎನ್ ಗೊಂಬೆ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ಪ್ರದೀಪ್ ಯಾದವ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. “ಇಲ್ಲಿಯವರೆಗೆ ಅನೇಕ ಕಥೆಗಳನ್ನು ಕೇಳಿದ್ದೆ. ಆದ್ರೆ ರಾಜೀವ್ ಹಾಗೂ ವಿಜಯ್ ಬಂದು ಹೇಳಿದ ಈ ಕಥೆ ಇಷ್ಟವಾಗಿದ್ದರಿಂದ, ಅದನ್ನ ಸಿನಿಮಾ ಮಾಡಲು ಮುಂದಾದೆ’ ಎಂದರು ನಿರ್ಮಾಪಕ ಪ್ರದೀಪ್ ಯಾದವ್.
ಇನ್ನು “ಉಸಿರೇ.. ಉಸಿರೇ…’ ಚಿತ್ರದಲ್ಲಿ ರಾಜೀವ್‌ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಹುಭಾಷಾ ನಟ ಅಲಿ ಮತ್ತೂಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ವಿವೇಕ್ ಚಕ್ರವರ್ತಿ ಸಂಗೀತ, ಸರವಣನ್ ಛಾಯಾಗ್ರಹಣವಿದೆ.