ಹುಬ್ಬಳ್ಳಿ: ಬಿಜೆಪಿಯ ಜನಾಶ್ರೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಚಾಲನೆ ನೀಡಿದರು.
ಇಲ್ಲಿನ ಹೊಟೇಲ್ ವೊಂದರಲ್ಲಿ ಐವರು ಕೋವಿಡ್ ವಾರಿಯರ್ಸ್ ಗೆ ಸನ್ಮಾನಿಸುವ ಮೂಲಕ ಯಾತ್ರೆ ಉದ್ಘಾಟಿಸಲಾಯಿತು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಜನಸಂಘದಿಂದಲೂ ಬಿಜೆಪಿಗೆ ಹುಬ್ಬಳಿ-ಧಾರವಾಡ ಶಕ್ತಿಕೇಂದ್ರವಾಗಿದೆ. 1967ರಲ್ಲಿಯೇ ಹುಬ್ಬಳ್ಳಿ ಸೇರಿದಂತೆ ಉತ್ತರದಿಂದ ನಾಲ್ವರು ಜನಸಂಘದ ಶಾಸಕರು ಶಾಸಕರು ಆಯ್ಕೆಯಾಗಿದ್ದರು. 1976 ರಲ್ಲಿ ಜನಸಂಘದವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾಗಿದ್ದರು. ಇದೀಗ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಶತಸಿದ್ದ. ಕಾಂಗ್ರೆಸ್ ನವರು ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಲಘುವಾಗಿ ಮಾತನಾಡಿದ್ದು, ಇದು ಅವರ ಅವನತಿಯ ಸಂಕೇತವಾಗಿದೆ ಎಂದರು.
ಇದನ್ನೂ ಓದಿ:ಶಾಲಾರಂಭಕ್ಕೆ ಇಂದು ಮಾರ್ಗಸೂಚಿ ಬಿಡುಗಡೆ, ಸೋಂಕು ಪತ್ತೆಯಾದರೆ ತರಗತಿ ರದ್ದು: ಬಿ.ಸಿ.ನಾಗೇಶ್
ಜಿಲ್ಕಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಧಾನಿ ಮೋದಿ ಸರಕಾರ ಜನರ ಸರಕಾರವಾಗಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ದ ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಂಜೀವ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮುಖಂಡರಾದ ಕೇಶವ ಪ್ರಸಾದ, ಜಯಾ ರುದ್ರೇಶ,ಲಿಂಗರಾಜ ಪಾಟೀಲ ಇನ್ನಿತರರು ಇದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರಿಗೆ ಬಸವೇಶ್ವರರ ಪುತ್ಥಳಿ ನೀಡಿ ಸನ್ಮಾನಿಸಲಾಯಿತು.