Advertisement
ಚಿತ್ರರಂಗಕ್ಕೆ ಬಂದು ಮೂರು ವರ್ಷಗಳ ನಂತರ ಮೊದಲ ಚಿತ್ರ ಬಿಡುಗಡೆಯಾಗುತ್ತಿದೆ?ಮೊದಲ ಚಿತ್ರ. ಸಹಜವಾಗಿಯೇ ಒಂದು ಕಡೆ ಭಯ ಮತ್ತು ಖುಷಿ ಇದೆ. ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ನನ್ನ ಸಿನಿಮಾ ಜರ್ನಿ ಶುರುವಾಗಿದ್ದು 2013ರಲ್ಲಿ. ಈಗ ಒಂದು ಸಿನಿಮಾ ಆಚೆ ಬರುತ್ತಿದೆ. ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಮೊದಲ ಸಾರ್ಥಕವಾಗುತ್ತಿದೆ.
ಇಲ್ಲಿ ಚೇತನ್, ಮೇಘನಾ, ನಾನು, ಅರ್ಚನಾ, ಯಶ್ ಶೆಟ್ಟಿ ಸೇರಿದಂತೆ ಆರು ಜನ ಕಲಾವಿದರಿದ್ದೇವೆ. ಈ ಆರು ಪಾತ್ರಗಳ ನಡುವಿನ ಕಥೆ ಇದು. 1980ರ ದಶಕದಲ್ಲಿ ಶುರುವಾಗಿ, 1989ರಲ್ಲಿ ಅಂತ್ಯಗೊಳ್ಳುವ ಸ್ಟೋರಿಯಲ್ಲಿ ರೆಟ್ರೋ ಸ್ಟೈಲ್ ಹೈಲೆಟ್. ಕಂಪ್ಲೀಟ್ ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆ. ಬೆಂಗಳೂರು, ಧಾರವಾಡ, ಬೆಳಗಾವಿಯಲ್ಲಿ ಚಿತ್ರೀಕರಿಸಲಾಗಿದೆ. ನಿಮ್ಮ ಪಾತ್ರ ಹೇಗಿದೆ?
ನಾನಿಲ್ಲಿ ಡಿಎಸ್‌ಪಿ ಎಂಬ ಪಾತ್ರ ನಿರ್ವಹಿಸಿದ್ದೇನೆ. ಅದೊಂಥರಾ ಅಮಿತಾಭ್ ಬಚ್ಚನ್ ಅವರನ್ನು ಅನುಕರಣೆ ಮಾಡುವಂತಹ ಪಾತ್ರ. ಅವರ ಹಾವ-ಭಾವ, ನಡೆ, ನುಡಿ ಎಲ್ಲವೂ ಹಾಗೇ ಇರುವಂಥದ್ದು. ಕಾಲೇಜ್‌ನಲ್ಲಿ ಲಾಸ್ಟ್ ಬೆಂಚ್ ಸ್ಟುಡೆಂಟ್ ನಾನು. ಬಿಲ್ಡಪ್ ರಾಜನಂತಿರುವ, ಆಟಿಟ್ಯೂಡ್ ಇರುವಂತಹ ಪಾತ್ರ. ಇಲ್ಲಿ ಲೆಫ್ಟ್ ಹ್ಯಾಂಡ್ ಬಳಕೆ ಹೆಚ್ಚು ಮಾಡಿದ್ದೇನೆ. ಸ್ಮೋಕ್ ಮಾಡೋದಿರಲಿ, ಬೈಕ್ ಓಡಿಸೋದಿರಲಿ ಎಲ್ಲವೂ ಲೆಫ್ಟ್ಹ್ಯಾಂಡ್‌ನಲ್ಲೇ ನಡೆಯುತ್ತೆ.
Related Articles
ಇದೊಂದು ಚಾಲೆಂಜಿಂಗ್ ಸಿನಿಮಾ ಆಗಿತ್ತು. ಯಾಕೆಂದರೆ, ಇಡೀ ಸಿನಿಮಾವನ್ನು ಕ್ಯಾರಿ ಮಾಡುವ ಪಾತ್ರ ನನ್ನದು. ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ನಮ್ಮ ಮೇಲೆಯೇ ಇರುವುದರಿಂದ ಅದೊಂದು ಹೊಸ ಅನುಭವ ಕಟ್ಟಿಕೊಟ್ಟಿತು. ಒಳ್ಳೇ ಟೀಮ್, ಒಳ್ಳೇ ಕಥೆಯಲ್ಲಿ ಕೆಲಸ ಮಾಡಿದ ಖುಷಿ ಇದೆ. ಎಲ್ಲರ ಪ್ರೋತ್ಸಾಹ, ಸಹಕಾರದಿಂದ ನಾನು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಇಲ್ಲಿ ಎಲ್ಲರೂ ಹಳಬರಿದ್ದಾರೆ. ನಾನೊಬ್ಬ ಹೊಸಬ. ಹಾಗಾಗಿ, ಅವರಿಂದ ಕಲಿತದ್ದು ಬಹಳವಿದೆ.
Advertisement
“ನೂರೊಂದು ನೆನಪು’ ಆಯ್ತು. ಮುಂದೆ?ಹೌದು, ಒಳ್ಳೆಯ ಕಥೆ ಕೇಳುತ್ತಿದ್ದೇನೆ. ಯಾವುದನ್ನೂ ಫೈನಲ್ ಮಾಡಿಲ್ಲ. “ಫ್ಲೈ’ ರಿಲೀಸ್‌ಗೆ ರೆಡಿಯಾಗುತ್ತಿದೆ. ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ. ಒಂದೆರೆಡು ಮಾತುಕತೆಯಲ್ಲಿದೆ.