Advertisement
ವರ್ಷಂಪ್ರತಿ ಶ್ರೀ ಲಕ್ಷಿ¾à ವೆಂಕಟರಮಣ ಮಂದಿರದ ವರ್ಧಂತ್ಯೋತ್ಸವ ವಿಧಿವತ್ತಾಗಿ ಆಚರಿಸಲಾಗುತ್ತಿದ್ದು ಈ ಬಾರಿ ರಜತ ಸಂಭ್ರಮದ ಅಂಗವಾಗಿ ವಿವಿಧ ಸೇವೆಗಳೊಂದಿಗೆ ಆಯೋಜಿಸಲು ನಿರ್ಧರಿಸಲಾಗಿದೆ. ಪರಿವಾರ ದೇವತೆಗಳ 22ನೇ ವರ್ಧಂತಿ ಮಹೋತ್ಸವವು ಮತ್ತು ನವಗ್ರಹ ದೇವತೆಗಳ 18ನೇ ವರ್ಧಂತಿ ಮಹೋತ್ಸವ ತ್ರಿದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 8.30 ರವರೆಗೆ ನಡೆಯಲಿದೆ. ಜೂ. 14ರಂದು ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ದೇವಸ್ಥಾನಕ್ಕೆ ಪಾದಾರ್ಪಣೆಗೈದು ನಾಲ್ಕು ದಿನಗಳ ಕಾಲ ಮೊಕ್ಕಾಂ ಹೂಡಿ ದೇವರಿಗೆ ಪೂಜೆ ನೆರವೇರಿಸಲಿದ್ದಾರೆ.
Related Articles
ನವಿ ಮುಂಬಯಿಯ ಹಲವಾರು ದೇವಸ್ಥಾನಗಳ ಪೈಕಿ ವಾಶಿಯ ಶ್ರೀ ಲಕ್ಷಿ¾à ವೆಂಕಟರಮಣ ದೇವರನ್ನೊಳಗೊಂಡಿರುವ ಬಾಲಾಜಿ ಮಂದಿರ ಒಂದಾಗಿದೆ. ಇದು ಪ್ರತಿಷ್ಠಿತ ಹಾಗೂ ಉನ್ನತ ಸ್ಥಾನ ಪಡೆದಿರುವ ಒಂದು ಧಾರ್ಮಿಕ ಕೇಂದ್ರವೂ ಹೌದು. ವಾಶಿಯ ಹೃದಯ ಭಾಗದಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಮೂಲೆಗಳಿಂದಲೂ ಸಮಾಜದಸಹಸ್ರಾರು ಭಕ್ತಾಭಿಮಾನಿಗಳನ್ನು ಆಗಮಿಸುತ್ತಿದ್ದಾರೆ. ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಅತೀ ಸುಂದರವಾದ ಶ್ರೀ ವೆಂಕಟರಮಣ ದೇವರ ಮತ್ತು ಎಡ ಬದಿಯಲ್ಲಿ ಶ್ರೀದೇವಿ ಹಾಗೂ ಬಲ ಬದಿಯಲ್ಲಿ ಭೂದೇವಿ ವಿಗ್ರಹವು ತಿರುಮಲ ತಿರುಪತಿ ದೇವಸ್ಥಾನದ ಕೊಡುಗೆಯಾಗಿರುತ್ತದೆ. ಮಂದಿರದ ಮೇಲಂತಸ್ತಿನ ನಾಲ್ಕು ಮೂಲೆಗಳಲ್ಲಿರುವ ಶ್ರೀ ಮುಖ್ಯಪ್ರಾಣ, ಶ್ರೀ ಗಣಪತಿ, ಶ್ರೀ ಲಕ್ಷಿ¾, ಶ್ರೀ ಗರುಡ ಮತ್ತು ನೆಲ ಅಂತಸ್ತಿನಲ್ಲಿರುವ ಭಗವಾನ್ ಸುಬ್ರಹ್ಮಣ್ಯ, ನಾಗ ದೇವತೆ ಮತ್ತು ನವಗ್ರಹಗಳಿಗೆ ನಿತ್ಯ ಪೂಜೆಗಳು ನಡೆಯುತ್ತಿರುವುದು ವಿಶೇಷತೆಯಾಗಿದೆ.
Advertisement
ಮಂದಿರಕ್ಕೆ ರಜತ ಸಂಭ್ರಮ1978ರಲ್ಲಿ ಸ್ಥಾಪನೆಗೊಂಡ ಜಿಎಸ್‌ಬಿ ಸಭಾ ನವಿ ಮುಂಬಯಿ ಸ್ವಸಮಾಜದ ಹಿತದೃಷ್ಟಿಯೊಂದಿಗೆ ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಸಮಾಜೋಭಿವೃದ್ಧಿಯಲ್ಲಿ ಕಾರ್ಯಪ್ರವೃತ್ತಗೊಂಡಿದೆ. ಉಪನಗರ ನವಿ ಮುಂಬಯಿಯ ವಾಶಿಯಲ್ಲಿ ಸಿಡ್ಕೊà ನಿವೇಶನ ಖರೀದಿಸಿ ತನ್ನ ಸಂಚಾಲಕತ್ವದಲ್ಲಿ ಶ್ರೀ ಬಾಲಾಜಿಕ ಮಂದಿರವನ್ನು ಸ್ಥಾಪಿಸಿ ಶ್ರದ್ಧಾಕೇಂದ್ರವಾಗಿಸಿ ಶ್ರೀದೇವರ ಸೇವೆಯಲ್ಲಿ ನಿರತವಾಗಿದೆ. ಬಾಲಾಜಿಯ ವಿಗ್ರಹವು ಸ್ವರ್ಣಾಭರಣಗಳಿಂದ ಮತ್ತು ಚಿನ್ನದ ಕಿರೀಟದಿಂದ ರಾರಾಜಿಸುತ್ತಿದೆ. ಈ ಮಂದಿರವು ದಿನಕಳೆದಂತೆ ಸದ್ಭಕ್ತರ ಆಕರ್ಷಣೀಯ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ದೇವಸ್ಥಾನದ ಟ್ರಸ್ಟ್ ಕೂಡಾ ವಿವಿಧ ಸೇವೆಗಳಲ್ಲಿ ನಿರತವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಶೈಕ್ಷಣಿಕ ನೆರವು ಮತ್ತು ವೈದ್ಯಕೀಯ ಸಹಾಯವನ್ನೂ ಮಾಡುತ್ತಿದೆ.
ರಜತ ಮಹೋತ್ಸವ ಸಂಭ್ರಮದಲ್ಲಿ ಜಿಎಸ್‌ಬಿ ಸಮಾಜ ಬಾಂಧವರು, ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಜಿಎಸ್‌ಬಿ ಸಭಾ ನವಿ ಮುಂಬಯಿ ಅಧ್ಯಕ್ಷ ಎಸ್. ಆರ್. ಪೈ, ಕಾರ್ಯಾಧ್ಯಕ್ಷ ದೀಪಕ್ ಬಿ. ಶೆಣೈ, ಗೌರವ ಕಾರ್ಯದರ್ಶಿ ವಸಂತ್ ಕುಮಾರ್ ಬಂಟ್ವಾಳ ಮತ್ತು ಕೋಶಾಧಿಕಾರಿ ಪ್ರೇಮಾನಂದ ಮಲ್ಯ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.