“ನಾನು ಮತ್ತೆ ಬಣ್ಣ ಹಚ್ಚುತ್ತೇನೆ, ಆ್ಯಕ್ಟಂಗ್ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಎಲ್ಲ ಅಂದುಕೊಳ್ಳದೇನೆ ನಡೆಯುತ್ತಿದೆ. ತೆರೆಮೇಲೆ ನಾನು ಏನೇ ಆ್ಯಕ್ಟಿಂಗ್ ಮಾಡಿದ್ರು, ಅದರ ಎಲ್ಲ ಯಶಸ್ಸು ನನ್ನಿಂದ ಅಭಿನಯ ಮಾಡಿಸಿದ ನಿರ್ದೇಶಕರಿಗೆ ಸೇರಬೇಕು. ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಿದ ನಿರ್ಮಾಪಕರಿಗೆ ಸೇರಬೇಕು…’ – ಇದು ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅವರ ಮನದಾಳದ ಮಾತು.
ಇಂದು ರಾಘವೇಂದ್ರ ರಾಜಕುಮಾರ್ ಅಭಿನಯದ “ರಾಜತಂತ್ರ’ ಚಿತ್ರ ತೆರೆಗೆ ಬರುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ರಾಘಣ್ಣ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದರು. “ನಿರ್ದೇಶಕರು, ನಿರ್ಮಾಪಕರು ನನಗೆ ಒಪ್ಪುವಂಥ ಪಾತ್ರಗಳನ್ನ, ಕಥೆಗಳನ್ನ ಆಯ್ಕೆ ಮಾಡಿತರುತ್ತಿದ್ದಾರೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ದೊಡ್ಡ ಖುಷಿ ಮತ್ತೂಂದಿಲ್ಲ. “ರಾಜತಂತ್ರ’ ಅಂಥದ್ದೇ ಒಂದು ಕಥೆ ಇರುವ ಸಿನಿಮಾ. ನನಗೆ ಒಪ್ಪುವಂಥ ಒಳ್ಳೆಯ ಕಥೆ ಇದರಲ್ಲಿದೆ. ನಿರ್ದೇಶಕರು, ನಿರ್ಮಾಪಕರು ತುಂಬ ಪರಿಶ್ರಮ ಹಾಕಿ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದ್ದರಿಂದ ಇಂಥದ್ದೊಂದು ಸಿನಿಮಾಮಾಡೋದಕ್ಕೆ ಸಾಧ್ಯವಾಯ್ತು’ ಎಂದು ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ರಾಘಣ್ಣ.
ಇನ್ನು “ರಾಜತಂತ್ರ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ತೆರೆಮೇಲೆ ನಿವೃತ್ತ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅಷ್ಟೇ ಅಲ್ಲದೆ ರಾಘಣ್ಣ ಅವರಿಗೆಚಿತ್ರದಲ್ಲಿ ಕೆಲ ಆ್ಯಕ್ಷನ್ ದೃಶ್ಯಗಳೂಇದೆಯಂತೆ. ಚಿತ್ರದಲ್ಲಿ ತಮ್ಮಪಾತ್ರಕ್ಕಾಗಿ ರಾಘಣ್ಣ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡುವ ರಾಘಣ್ಣ,””ಅಮ್ಮನ ಮನೆ’ ಚಿತ್ರದ ನಂತರ ಹತ್ತಾರು ಕಥೆಗಳು ಹುಡುಕಿಕೊಂಡು ಬಂದರೂವಿಶಿಷ್ಟ ಪಾತ್ರವನ್ನು ಹೊಂದಿದೆ ಎಂಬ ಕಾರಣಕ್ಕೆ”ರಾಜತಂತ್ರ’ ಸಿನಿಮಾ ಒಪ್ಪಿಕೊಂಡೆ. ಇದರಲ್ಲಿಕ್ಯಾಪ್ಟನ್ ರಾಜರಾಮ್ ಎನ್ನುವ ನಿವೃತ್ತ ಯೋಧನಪಾತ್ರ ನನ್ನದು. ಗಡಿಯಲ್ಲಿ ಶತ್ರುಗಳ ಎದುರು ಹೋರಾಡಿ ಬಂದ ಯೋಧನೊಬ್ಬ ಸಮಾಜದಲ್ಲಿಇರುವ ಶತ್ರುಗಳ ವಿರುದ್ದ ಹೇಗೆ ಹೋರಾಡುತ್ತಾನೆಅನ್ನೋದನ್ನ ನಿರ್ದೇಶಕರು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ. ತುಂಬ ಗಂಭೀರವಾದಂಥಜೊತೆಗೆ ಒಂದು ಒಳ್ಳೆಯ ಮೆಸೇಜ್ ಹೇಳುವಂಥ ಪಾತ್ರ ನನ್ನದು. ಸಣ್ಣ ಆ್ಯಕ್ಷನ್ ಅನ್ನು ಕೂಡ ಚಿತ್ರತಂಡ ನನ್ನ ಕೈಯಲ್ಲಿ ಮಾಡಿಸಿದೆ. ಇಡೀ ಸಿನಿಮಾ, ಅದರ ಕಥೆ, ಹೇಳಿರುವ ರೀತಿ, ನನ್ನ ಪಾತ್ರ ಎಲ್ಲವೂ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.
ಒಟ್ಟಾರೆ ಕಳೆದೊಂದು ದಶಕದಿಂದ ಅಭಿನಯದಿಂದ ದೂರ ಉಳಿದಿದ್ದ ಹಿರಿಯ ನಟ ರಾಘವೇಂದ್ರ ರಾಜಕುಮಾರ್, ಕಳೆದ ವರ್ಷ”ಅಮ್ಮನ ಮನೆ’ ಚಿತ್ರಕ್ಕೆ ಬಣ್ಣ ಹಚ್ಚಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈಗ ಮತ್ತೆ ತೆರೆಮುಂದೆ ಸಕ್ರಿಯರಾಗಿರುತ್ತಿರುವ ರಾಘಣ್ಣ “ರಾಜತಂತ್ರ’ದ ಮೂಲಕ ಹೊಸವರ್ಷದ ಮೊದಲ ದಿನವೇ ಹೊಸ ಜೋಶ್‌ನಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.ಇನ್ನು “ರಾಜತಂತ್ರ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ಹಿರಿಯ ನಟಿಭವ್ಯಾ, ಹಿರಿಯ ನಟರಾದ ದೊಡ್ಡಣ್ಣ,ಶ್ರೀನಿವಾಸಮೂರ್ತಿ ಮೊದಲಾದವರು ಪ್ರಮುಖಪಾತ್ರಗಳಿಗೆ ಜೀವ ತುಂಬಿದ್ದಾರೆ. “ವಿಶ್ವಂ ಡಿಜಿಟಲ್‌ಮೀಡಿಯಾ’ ಬ್ಯಾನರ್‌ನಲ್ಲಿ “ರಾಜತಂತ್ರ’ ಚಿತ್ರ ನಿರ್ಮಾಣವಾಗಿದ್ದು, ಚಿತ್ರಕ್ಕೆ ಜೆ.ಎಂ ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣದ ಜೊತೆಗೆಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
– ಜಿ.ಎಸ್ ಕಾರ್ತಿಕ ಸುಧನ್