Advertisement

ಐಪಿಎಲ್‌: ರಾಜಸ್ಥಾನ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಆಗಮನ ವಿಳಂಬ

06:22 PM Sep 07, 2020 | mahesh |

ಹೊಸದಿಲ್ಲಿ: ರಾಜಸ್ಥಾನ್‌ ರಾಯಲ್ಸ್‌ ತಂಡದ ಖ್ಯಾತ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಐಪಿಎಲ್‌ ಕೂಟದ ಮೊದಲ ಸುತ್ತಿನ ಕೆಲವು ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದೆ. ಅನಾರೋಗ್ಯಕ್ಕೆ ಒಳಗಾಗಿರುವ ತಂದೆಯನ್ನು ನೋಡಿಕೊಳ್ಳುವ ಸಲುವಾಗಿ ಅವರೀಗ ನ್ಯೂಜಿಲ್ಯಾಂಡಿನಲ್ಲಿದ್ದಾರೆ.

Advertisement

ನ್ಯೂಜಿಲ್ಯಾಂಡಿನ ಕೋವಿಡ್‌ ನಿಯಮದಂತೆ, ಬೆನ್‌ ಸ್ಟೋಕ್ಸ್‌ ಈಗಷ್ಟೇ 14 ದಿನಗಳ ಕ್ವಾರಂಟೈನ್‌ ಅವಧಿಯನ್ನು ಪೂರೈಸಿದ್ದಾರೆ. ಇನ್ನೀಗ ಅವರು ತಂದೆಯನ್ನು ಭೇಟಿಯಾಗಬೇಕಿದೆ. ಹಾಗೆಯೇ ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಉಳಿಯುವುದು ಅವರ ಯೋಜನೆ. ಹೀಗಾಗಿ ಐಪಿಎಲ್‌ ಪಂದ್ಯಾವಳಿಯ ಮೊದಲ ಸುತ್ತಿನ ಕೆಲವು ಪಂದ್ಯಗಳಿಗೆ ಸ್ಟೋಕ್ಸ್‌ ಲಭ್ಯರಾಗುವುದಿಲ್ಲ ಎಂದು ತಿಳಿದು ಬಂದಿದೆ. ಅವರ ತಂದೆ ಮೆದುಳಿನ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ.

ಬೆನ್‌ ಸ್ಟೋಕ್ಸ್‌ ಅವರನ್ನು ರಾಜಸ್ಥಾನ್‌ ರಾಯಲ್ಸ್‌ 12.5 ಕೋಟಿ ರೂ.ಗೆ ಖರೀದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next