Advertisement

ರಾಜಸ್ಥಾನದ ರಾಮಗಢ ಬೈಪೋಲ್‌ : ಕಾಂಗ್ರೆಸ್‌ಗೆ ಬೃಹತ್‌ ಲೀಡ್‌

06:07 AM Jan 31, 2019 | udayavani editorial |

ರಾಮಗಢ : ರಾಜಸ್ಥಾನದ ರಾಮಗಢ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಜನವರಿ 28ರಂದು ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು ಕಾಂಗ್ರೆಸ್‌ ಅಭ್ಯರ್ಥಿ ಶಾಫಿಯಾ ಝುಬೇರ್‌ ಖಾನ್‌ ಬೃಹತ್‌ ಲೀಡ್‌ ಪಡೆದುಕೊಂಡಿದ್ದಾರೆ.

Advertisement

ಭಾರತೀಯ ಜನತಾ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಅನುಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ. 

ಕಳೆದ ಜ.28ರಂದು ಒಟ್ಟು 278 ಮತಗಟ್ಟೆಗಳಲ್ಲಿ ಶೇ.79.12 ಪ್ರಮಾಣದಲ್ಲಿ ಭಾರೀ ಮತದಾನವಾಗಿತ್ತು. ಕಳೆದ ವರ್ಷ ಡಿ.7ರಂದು ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ಮುನ್ನವೇ ಬಿಎಸ್‌ಪಿ ಅಭ್ಯರ್ಥಿ ಲಕ್ಷ್ಮಣ ಸಿಂಗ್‌ ಹೃದಯ ಸ್ತಂಭನದಿಂದ ಹಠಾತ್‌ ನಿಧನ ಹೊಂದಿದ್ದರು. ಪರಿಣಾಮವಾಗಿ ಉಪ ಚುನಾವಣೆ ಅನಿವಾರ್ಯವಾಗಿತ್ತು. 

ರಾಮಗಢ ಉಪಚುನಾವಣೆಯಲ್ಲಿ  ಬಿಎಸ್‌ಪಿ, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದುಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next