Advertisement

35 ವರ್ಷದ ಬಳಿಕ ಹುಟ್ಟಿದ ಮೊದಲ ಹೆಣ್ಣು ಮಗು : ಖುಷಿಯಲ್ಲಿ ಆ ತಂದೆ ಮಾಡಿದ್ದೇನು ಗೊತ್ತಾ?

05:44 PM Apr 23, 2021 | Team Udayavani |

ರಾಜಸ್ಥಾನ : ಮನೆಗಳಲ್ಲಿ ಚಿಕ್ಕ ಮಕ್ಕಳು ಜನಿಸಿದರೆ ಹೆತ್ತವರು ಮತ್ತು ಸಂಬಂಧಿಕರು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಇನ್ನು ಬಹಳ ದಿನಗಳ ನಂತರ ಮನೆಗೆ ಚಿಕ್ಕ ಮಗುವಿನ ಆಗಮನವಾದರಂತೂ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ರಾಜಸ್ಥಾನದ ಕುಟುಂಬವೊಂದರಲ್ಲಿ ಹೆಣ್ಣು ಮಗು ಜನಿಸಿದ್ದು ಅವರ ಖುಷಿಗೆ ಪಾರೇ ಇಲ್ಲದಾಗಿದೆ. ಈ ಮಗುವನ್ನು ಮನೆಗೆ ಕರೆ ತರಲು ಆ ಮಗುವಿನ ತಂದೆ ಬರೋಬ್ಬರಿ ನಾಲ್ಕುವರೆ ಲಕ್ಷ ರುಪಾಯಿಯನ್ನು ಖರ್ಷು ಮಾಡಿದ್ದಾರೆ.

Advertisement

ಹೌದು ರಾಜಸ್ಥಾನದ ನಾಗೌರ್ ಜಿಲ್ಲೆಯ ನಿಂಬ್ದಿ ಚಂದಾವತ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡದಿದೆ. ಇಲ್ಲಿನ ಕುಟುಂಬವೊಂದರಲ್ಲಿ ಕಳೆದ ದಿನಗಳಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿದೆ. ಈ ಮಗು ಆ ಕುಟುಂಬದಲ್ಲಿ 35 ವರ್ಷಗಳ ಬಳಿಕ ಹುಟ್ಟಿದ ಮೊದಲ ಹೆಣ್ಣು ಮಗು. ಕೂಸು ತನ್ನ ತಾತನ ಮನೆಯಲ್ಲಿ ಜನಿಸಿದ್ದು, ಈ ಮಗುವನ್ನು ತಮ್ಮ ತಮ್ಮ ಸ್ವಂತ ಮನೆಗೆ ಕರೆದುಕೊಂಡು ಹೋಗಲು ಮಗುವಿನ ತಂದೆಯು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ತಂದಿದ್ದಾರೆ. ಇದಕ್ಕೆ ಬರೋಬ್ಬರಿ 4.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ತನ್ನ ಮನೆಗೂ ಮತ್ತು ಆತನ ಮಾವನ ಮನೆಗೂ ಕೇವಲ 20 ಕಿ.ಮೀ ಇದ್ದು ಅಲ್ಲಿಂದ ತನ್ನ ಮನೆಗೆ ಬರಲು ಹೆಲಿಕಾಪ್ಟರ್ ತಂದಿರುವುದು ನಿಂಬ್ದಿ ಚಂದಾವತದ  ಗ್ರಾಮಸ್ಥರಿಗೆ ಖುಷಿಯಾಗಿದೆ. ಅಲ್ಲದೆ ಹೆಲಿಕಾಪ್ಟರ್ ಲ್ಯಾಂಡ್ ಆಗುವುದನ್ನು ನೋಡಲು ಜನ ಕೂಡ ಸೇರಿದ್ದರು.

ಮತ್ತೊಂದು ವಿಶೇಷ ಅಂದ್ರೆ ಆ ಮಗುವಿನ ತಾತ ಮದನ್ ಲಾಲ್ ಕುಮಾರ್ ತನ್ನ ಮೊಮ್ಮಗಳನ್ನು ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ರಾಮನವಮಿ ಹಬ್ಬದ ದಿನ ಮಗುವಿನ ತಂದೆ ಅದ್ದೂರಿ ವೆಚ್ಚದಲ್ಲಿ, ತಾಳ ಮೇಳ, ವಾದ್ಯದೊಂದಿಗೆ ತನ್ನ ಮುದ್ದಾದ ಹೆಣ್ಣು ಮಗಳನ್ನು ಮನೆಗೆ ಕರೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next