Advertisement

ಚಲಿಸುವ ರೈಲಿನಿಂದ ಬಿದ್ದ ತಾತ : ಕ್ಷಣಾರ್ಧದಲ್ಲಿ ಕಾಪಾಡಿದ ಭದ್ರತಾ ಸಿಬ್ಬಂದಿ!

03:57 PM Apr 03, 2021 | Team Udayavani |

ರಾಜಸ್ಥಾನ : ರೈಲ್ವೆ ಪ್ಲಾಟ್ ಫಾರ್ಮ್ ಗಳಲ್ಲಿ ಜಾಗರೂಕತೆ ಇಂದ ಇರಬೇಕು, ರೈಲು ಬೋಗಿಗಳ ಬಾಗಿಲುಗಳಲ್ಲಿ ನಿಲ್ಲಬಾರದು ಎಂದು ಯಾವಾಗಲೂ ಭದ್ರತಾ ಸಿಬ್ಬಂದಿ ಹೇಳುತ್ತಲೇ ಇರುತ್ತಾರೆ. ಆದ್ರೆ ಕೆಲವೊಂದು ಬಾರಿ ಅಚಾನಕ್ಕಾಗಿ ಒಂದೊಂದು ದುರ್ಘಟನೆಗಳು ನಡೆಯುತ್ತವೆ. ಇಂತಹದ್ದೇ ಒಂದು ಆತಂಕದ ಘಟನೆ ರಾಜಸ್ಥಾನದ ಸವಾಯ್ ಮಾಧೋಪೂರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Advertisement

ಹೌದು ಚಲಿಸುವ ರೈಲುಗಾಡಿಯಿಂದ ವೃದ್ಧರೊಬ್ಬರು ಕೆಳಗಡೆ ಬಿದ್ದ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಲ್ಲಿ ವಯಸ್ಸಾದ ವೃದ್ಧರೊಬ್ಬರು ಪ್ರಾಯಾಣ ಮಾಡುತ್ತಿದ್ದು, ನಿಲ್ದಾಣದಲ್ಲಿ ಇಳಿಯಲೆಂದು ರೈಲು ಬೋಗಿ ಬಾಗಿಲಿಗೆ ಬಂದು ನಿಂತಿದ್ದಾರೆ. ಆ ವೇಳೆ ವೃದ್ಧನಿಗೆ ಆಯತಪ್ಪಿ ಕೆಳಗಡೆ ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಆ ತಾತನನ್ನು ಸುರಕ್ಷಿತ ಸ್ಥಳಕ್ಕೆ ಎಳೆದಿದ್ದಾರೆ. ಈ ವಿಡಿಯೋವನ್ನು ಕೇಂದ್ರ ರೈಲ್ವೆ ಮಂತ್ರಿ ಪಿಯುಶ್ ಗೋಯಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ವಿಡಿಯೋ ಶೇರ್ ಮಾಡಿ ಬರೆದಿರುವ ಕೇಂದ್ರ ಸಚಿವ, ರಾಜಸ್ಥಾನದ ಸವಾಯಿ ಮಾಧೋಪುರ್ ನಿಲ್ದಾಣದಲ್ಲಿ, ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಕೆಲಸದಿಂದ ಅಪಾಯದಲ್ಲಿ ವೃದ್ಧ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ನಮ್ಮ ಭದ್ರತಾ ಸಿಬ್ಬಂದಿಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next