Advertisement

ಅಳೆದು ತೂಗಿ ಗೆಹ್ಲೋಟ್ ಸಂಪುಟ ಭರ್ತಿ ಮಾಡಿದ ಕಾಂಗ್ರೆಸ್

06:18 PM Nov 21, 2021 | Team Udayavani |

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಸಂಜೆ ಬಹು ನಿರೀಕ್ಷಿತ ಸಚಿವ ಸಂಪುಟ ಪುನಾರಚನೆ ಮಾಡಿದ್ದು, 15 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

11 ಕ್ಯಾಬಿನೆಟ್ ಮತ್ತು ನಾಲ್ವರು ರಾಜ್ಯ ಸಚಿವರಿಗೆ ರಾಜ್ಯಪಾಲ ಕಲರಾಜ್ ಮಿಶ್ರಾ ಅವರು ಪ್ರಮಾಣ ವಚನ ಬೋಧಿಸಿದರು.

ಇಂದು ಪುನಾರಚನೆಯಲ್ಲಿ ಸಚಿನ್ ಪೈಲಟ್ ಬೆಂಬಲಿಗ ಐವರು ಸೇರಿದಂತೆ ಹನ್ನೆರಡು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ಮೂವರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

11 ಕ್ಯಾಬಿನೆಟ್ ಸಚಿವರಲ್ಲಿ ಮಮತಾ ಭೂಪೇಶ್, ಭಜನ್ ಲಾಲ್ ಜಾತವ್ ಮತ್ತು ಟಿಕಾರಾಂ ಜುಲ್ಲಿ ಅವರನ್ನು ರಾಜ್ಯ ಸಚಿವ ಸ್ಥಾನದಿಂದ ಕ್ಯಾಬಿನೆಟ್ ದರ್ಜೆಗೆ ಏರಿಸಲಾಗಿದೆ,

ಕಳೆದ ವರ್ಷ ಬಂಡಾಯವೆದ್ದು ವಜಾಗೊಂಡಿದ್ದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರೂ ಕ್ಯಾಬಿನೆಟ್ ಮಂತ್ರಿಗಳಾಗಿ ಮರುಸೇರ್ಪಡೆಗೊಂಡಿದ್ದಾರೆ.

Advertisement

ಹೇಮರಾಮ್ ಚೌಧರಿ, ಮಹೇಂದ್ರಜೀತ್ ಸಿಂಗ್ ಮಾಳವಿಯಾ, ರಾಮ್‌ಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದರಾಮ್ ಮೇಘವಾಲ್ ಮತ್ತು ಶಕುಂತಲಾ ರಾವತ್ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜಾಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ಗುಧಾ ಮತ್ತು ಮುರಾರಿ ಲಾಲ್ ಮೀನಾ ಅವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈಗ ರಾಜಸ್ಥಾನದ ಮಂತ್ರಿಗಳ ಮಂಡಳ ಮುಖ್ಯಮಂತ್ರಿಯನ್ನು ಹೊರತುಪಡಿಸಿ 19 ಕ್ಯಾಬಿನೆಟ್ ಮಂತ್ರಿಗಳನ್ನು ಮತ್ತು 10 ರಾಜ್ಯ ಮಂತ್ರಿಗಳನ್ನು ಹೊಂದಿದೆ.

ಅಸಮಾಧಾನ

ಸಚಿವ ಸಂಪುಟ ವೇಳೆ ಕಾಂಗ್ರೆಸ್ ಶಾಸಕಿ ಶಾಫಿಯಾ ಜುಬೇರ್ ಅಸಮಾಧಾನ ಹೊರ ಹಾಕಿದ್ದು, ಕಾಂಗ್ರೆಸ್ ನ ದ್ವಂದ್ವ ನಿಲುವು ಬಯಲಾಗಿದೆ ಎಂದು ಹೇಳಿದ್ದಾರೆ.

“ಪ್ರಿಯಾಂಕಾ ಗಾಂಧಿ ಯುಪಿಯಲ್ಲಿ ಮಹಿಳೆಯರಿಗೆ ಶೇಕಡಾ 40 ರಷ್ಟು ಪ್ರಾತಿನಿಧ್ಯದ ಬಗ್ಗೆ ಮಾತನಾಡುತ್ತಾರೆ ಆದರೆ ರಾಜಸ್ಥಾನದಲ್ಲಿ ಕೇವಲ 10 ಪ್ರತಿಶತದಷ್ಟು ಮಹಿಳೆಯರು ಮಾತ್ರ ಸಂಪುಟದಲ್ಲಿದ್ದಾರೆ. ಹಲವಾರು ಸಮರ್ಥರನ್ನು ಸಂಪುಟದಿಂದ ಕೈಬಿಡಲಾಗಿದೆ. ನಾನು ಪಕ್ಷದ ನಾಯಕತ್ವಕ್ಕೆ ನನ್ನ ಅಸಮಾಧಾನವನ್ನು ತಿಳಿಸಿದ್ದೇನೆ.” ಎಂದು ಜುಬೈರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next