ರಾಜಸ್ಥಾನ: 150 ಅಡಿ ಆಳದ ಕೊಳವೆ ಬಾವಿಯಲ್ಲಿ 57 ಗಂಟೆಗಳ ಕಾಲ ಸಿಲುಕಿದ್ದ ಐದು ವರ್ಷದ ಬಾಲಕ ಮೃತ ಪಟ್ಟ ದಾರುಣ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.
ಮೃತ ಬಾಲಕನನ್ನು ಆರ್ಯನ್(5) ಎನ್ನಲಾಗಿದ್ದು.
ಸೋಮವಾರ ಮಧ್ಯಾಹ್ನ ಸುಮಾರು ಮನೆಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಾನೆ ಇದನ್ನು ಅಲ್ಲೇ ಇದ್ದ ಮಹಿಳೆಯೊಬ್ಬರು ನೋಡಿ ಮನೆಮಂದಿಗೆ ಮಾಹಿತಿ ನೀಡಿ ಬಳಿಕ ರಕ್ಷಣಾ ತಂಡ ಕರೆಸಿ ಕಾರ್ಯಾಚರಣೆ ನಡೆಸಿದ ವೇಳೆ ಬಾಲಕ ಸಿಲುಕಿರುವುದು ಗೊತ್ತಾಗಿದೆ.
ಸುಮಾರು 150 ಅಡಿ ಆಳದಲ್ಲಿ ಸಿಲುಕಿದ್ದ ಆರ್ಯನ್ ನನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಜೆಸಿಬಿ ಜೊತೆಗೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಕ್ಯಾಮೆರಾ ಮೂಲಕ ಬಾಲಕನ ಇರುವಿಕೆ ಪತ್ತೆಹಚ್ಚಲಾಯಿತು ಈ ವೇಳೆ ಬಾಲಕ ಸುಮಾರು ೧೫೦ ಅಡಿ ಆಳದಲ್ಲಿ ಸಿಲುಕಿರುವುದು ಗೊತ್ತಾಗಿದೆ ಕೂಡಲೇ ಬಾಲಕ ಇರುವ ಜಾಗಕ್ಕೆ ಪೈಪ್ ಮೂಲಕ ಆಕ್ಸಿಜನ್ ಪೂರೈಸುವ ವ್ಯವಸ್ಥೆ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಡಿಸೆಂಬರ್ 9 ರಂದು ಮಧ್ಯಾಹ್ನ 3.30 ರಿಂದ 4 ರವರೆಗೆ ಪ್ರಾರಂಭವಾದ ರಕ್ಷಣಾ ಕಾರ್ಯಾಚರಣೆಯು ಡಿಸೆಂಬರ್ 11 ರಂದು ತಡರಾತ್ರಿ ಕೊನೆಗೊಂಡಿತು. ಸುಮಾರು ೫೭ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಆರ್ಯನ್ ನನ್ನು ರಕ್ಷಣೆ ಮಾಡಿ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.
ಈ ವೇಳೆ ಮಗುವನ್ನು ಪರಿಶೀಲಿಸಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ದೀಪಕ್ ಶರ್ಮಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ, ಆಸ್ಪತ್ರೆಗೆ ಕರೆದುಕೊಂಡು ಬಂದ ಕೂಡಲೇ ಎಲ್ಲ ರೀತಿಯ ತಪಾಸಣೆಗಳನ್ನು ನಡೆಸಲಾಯಿತು ಇದಾದ ಬಳಿಕ ಎರಡೆರಡು ಬರಿ ಇಸಿಜಿ ಮಾಡಿದ್ದೇವೆ ಮಗುವಿನ ಉಸಿರು ನಿಂತಿತ್ತು ನಮ್ಮಿಂದ ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಕೈಕೊಟ್ಟ ಯಂತ್ರ:
ರಕ್ಷಣಾ ಕಾರ್ಯಾಚರಣೆ ವೇಳೆ ಡ್ರಿಲ್ ಮಾಡುವ ಯಂತ್ರ ಕೈಕೊಟ್ಟ ಪರಿಣಾಮ ರಕ್ಷಣಾ ಕಾರ್ಯಾಚರಣೆ ಸುಮಾರು ಐದು ಗಂಟೆಗಳ ಕಾಲ ವಿಳಂಬಗೊಂಡಿತು ಎಂದು ದೌಸಾದ ಜಿಲ್ಲಾಧಿಕಾರಿ ಹೇಳಿದರು. ಮಗುವಿನ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ 150 ಅಡಿ ಆಳದಲ್ಲಿ ಸಿಲುಕಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿತ್ತು ಎಂದು ಹೇಳಿದರು.