ರಾಜಸ್ಥಾನ: ಲುಂಪಿ ಚರ್ಮ ಕಾಯಿಲೆ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜಸ್ಥಾನದ ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ವಿಧಾನಸಭೆ ಕಲಾಪಕ್ಕೆ ಆಗಮಿಸುವ ವೇಳೆ ದನವನ್ನು ಕರೆತಂದ ಘಟನೆ ನಡೆದಿತ್ತು. ಆದರೆ ರಾವತ್ ವಿಧಾನಸಭೆ ಆವರಣ ಪ್ರವೇಶಿಸುವ ಮುನ್ನವೇ ದನ ಓಟಕಿತ್ತಿತ್ತು.
ಇದನ್ನೂ ಓದಿ:“ಆರ್ ಆರ್ ಆರ್” ಬಗ್ಗೆ .. ʼಛೆಲ್ಲೋ ಶೋʼ ನಿರ್ದೇಶಕ ಹೇಳಿದ್ದೇನು?
ವಿಧಾನಸಭೆಯ ಹೊರಗೆ ರಾವತ್ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಯುವಕನೊಬ್ಬ ದನವನ್ನು ಹಗ್ಗದಿಂದ ಕಟ್ಟಿ ಹಿಡಿದುಕೊಂಡಿದ್ದ, ಆದರೆ ಏಕಾಏಕಿ ದನ ಓಡಲು ಪ್ರಾರಂಭಿಸಿತ್ತು. ಹಗ್ಗದ ಸಹಾಯದಿಂದ ನಿಲ್ಲಿಸಲು ಪ್ರಯತ್ನಿಸಿದರು ಕೂಡಾ ಸಾಧ್ಯವಾಗಿಲ್ಲವಾಗಿತ್ತು.
ದನ ಓಡಿ ಹೋದ ಕುರಿತು ಟೀಕಿಸಿರುವ ಕಾಂಗ್ರೆಸ್ ಪಕ್ಷದ ಗೋವಿಂದ್ ಸಿಂಗ್ ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ರಾವತ್, ಈ ಅಸೂಕ್ಷ್ಮತೆಯ ಸರ್ಕಾರದ ವಿರುದ್ಧ ದನ ಕೂಡಾ ಆಕ್ರೋಶಗೊಂಡಿರುವುದಾಗಿ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ದನಗಳು ಲುಂಪಿ ಚರ್ಮ ರೋಗದಿಂದ ಬಳಲುತ್ತಿವೆ. ಆದರೆ ರಾಜ್ಯ ಸರ್ಕಾರ ಗಾಢ ನಿದ್ರೆಯಲ್ಲಿದೆ. ಹೀಗಾಗಿ ಲುಂಪಿ ರೋಗದ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿಧಾನಸಭಾ ಆವರಣದೊಳಕ್ಕೆ ದನವನ್ನು ಕರೆತಂದಿರುವುದಾಗಿ ರಾವತ್ ತಿಳಿಸಿದ್ದರು.