Advertisement
ಗೆಲ್ಲಲು 223 ರನ್ ತೆಗೆಯುವ ಕಠಿನ ಗುರಿ ಪಡೆದ ಡೆಲ್ಲಿ ತಂಡವು ಉತ್ತಮ ಆರಂಭ ಪಡೆದಿತ್ತು. ಆದರೆ ನಾಯಕ ರಿಷಬ್ ಪಂತ್ ಔಟಾದ ಬಳಿಕ ಕುಸಿತಕ್ಕೆ ಒಳಗಾದ ಡೆಲ್ಲಿ ತಂಡವು ಅಂತಿಮವಾಗಿ 8 ವಿಕೆಟಿಗೆ 207 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಮೊದಲು ರಾಜಸ್ಥಾನ್ ತಂಡವು 2 ವಿಕೆಟಿಗೆ 222 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು.
ಅಂತಿಮ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 36 ರನ್ ಬೇಕಿತ್ತು. ಮೆಕ್‌ಕಾಯ್ ಎಸೆದ ಅಂತಿಮ ಓವರಿನ ಮೊದಲ ಮೂರು ಎಸೆತಗಳನ್ನು ರೋವ¾ನ್ ಪೊವೆಲ್ ಸಿಕ್ಸರ್‌ಗೆ ಅಟ್ಟಿದರು. ಮೂರನೇ ಎಸೆತಕ್ಕೆ ಅಂಪಾಯರ್ ನೋಬಾಲ್ ಕೊಡದ ಕಾರಣ ಸ್ವಲ್ಪಮಟ್ಟಿನ ಗೊಂದಲ ಏರ್ಪಟ್ಟಿತ್ತು. ನಾಲ್ಕನೇ ಎಸೆತದಲ್ಲಿ ರನ್ ಬಂದಿಲ್ಲ. ಅಂತಿಮ ಎಸೆತದಲ್ಲಿ ಪೊವೆಲ್ ಔಟಾದ ಕಾರಣ ರಾಜಸ್ಥಾನ್ ರೋಚಕ ಗೆಲುವು ಕಾಣುವಂತಾಯಿತು. ಗೆಲ್ಲುವ ಗುರಿ ಕಠಿನವಾಗಿದ್ದರೂ ಡೆಲ್ಲಿ ತಂಡ ಉತ್ತಮ ಆರಂಭ ಪಡೆದಿತ್ತು. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಭರ್ಜರಿಯಾಗಿ ಆಡಿ ಮೊದಲ ವಿಕೆಟಿಗೆ 43 ರನ್ ಪೇರಿಸಿದ್ದರು. ಈ ಹಂತದಲ್ಲಿ ವಾರ್ನರ್ ಅವರನ್ನು ತಂಡ ಕಳೆದುಕೊಂಡಿತು. ಆಬಳಿಕ ಪೃಥ್ವಿ ಶಾ ಮತ್ತು ರಿಷಬ್ ಪಂತ್ ಮೂರನೇ ವಿಕೆಟಿಗೆ 51 ರನ್ ಪೇರಿಸಿದರು. ಪೃಥ್ವಿ ಶಾ 37 ರನ್ ಹೊಡೆದರೆ ರಿಷಬ್ ಪಂತ್ 44 ರನ್ ಹೊಡೆದರು. ಆಬಳಿಕ ಯಾವುದೇ ಆಟಗಾರ ಉತ್ತಮವಾಗಿ ಆಡಿಲ್ಲ. ಕೊನೆ ಕ್ಷಣದಲ್ಲಿ ರೋವ¾ಲ್ ಪೊವೆಲ್ ಸಿಡಿದ ಕಾರಣ ತಂಡ ಗೆಲ್ಲುವ ಆಸೆ ಚಿಗುರಿತ್ತು.
ನೋಬಾಲ್ ವಿವಾದ,
Related Articles
ರಾಜಸ್ಥಾನದ ಒಬೆದ್ ಮೆಕ್‌ಕಾಯ್ ಎಸೆದ ಕೊನೆಯ ಓವರ್‌ನ 3ನೇ ಎಸೆತ ನೋಬಾಲ್ ಎಂದು ಡೆಲ್ಲಿ ವಾದಿಸಿತು. ಆದರೆ ಅಂಪಾಯರ್ ಅದನ್ನು ಪುರಸ್ಕರಿಸಲಿಲ್ಲ. ಆಗ ಸಿಟ್ಟಾದ ಡೆಲ್ಲಿ ನಾಯಕ ರಿಷಭ್ ಪಂತ್ ತನ್ನ ಬ್ಯಾಟ್ಸ್‌ಮನ್‌ರನ್ನು ವಾಪಸ್ ಕರೆದರು. ನಿಯಮಗಳ ಪ್ರಕಾರ ಹೀಗೆ ಮಾಡುವುದು ಗಂಭೀರ ತಪ್ಪು. ಒಂದು ವೇಳೆ ರಿಷಭ್ ಕರೆದಾಗ ಬ್ಯಾಟ್ಸ್‌ಮೆನ್ ಪೆವಿಲಿಯನ್‌ಗೆ ತೆರಳಿದ್ದರೆ ಐಪಿಎಲ್ ಇತಿಹಾಸದಲ್ಲೇ ಕಪ್ಪುಚುಕ್ಕೆ ಎನ್ನುವಂತಹ ಪಂದ್ಯವೊಂದು ನಡೆದುಹೋಗುತ್ತಿತ್ತು. ಆದರೆ ಪೊವೆಲ್ ಹಾಗೆ ಮಾಡದೇ ಹೋಗಿದ್ದರಿಂದ ಕಳಂಕವೊಂದು ತಪ್ಪಿತು. ಟಿವಿ ಪರಿಶೀಲನೆಯಲ್ಲಿ ಚೆಂಡು ನೋಬಾಲ್ ಅಲ್ಲ ಎನ್ನುವುದು ಸಾಬೀತಾಯಿತು. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಡೆಲ್ಲಿ ನಾಯಕ ರಿಷಭ್‌ಗೆ ಶಿಕ್ಷೆ ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಬಿಗು ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 22 ರನ್ ನೀಡಿ ಮೂರು ವಿಕೆಟ್ ಕಿತ್ತು ರಾಜಸ್ಥಾನದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ವಾರ್ನರ್, ಪಂತ್ ಮತ್ತು ಲಲಿತ್ ಯಾದವ್ ಅವರ ಅಮೂಲ್ಯ ವಿಕೆಟನ್ನು ಅವರು ಹಾರಿಸಿದ್ದರು. ಆರ್. ಅಶ್ವಿನ್ 32 ರನ್ನಿಗೆ 2 ವಿಕೆಟ್ ಕಿತ್ತು ಗಮನ ಸೆಳೆದರು.
Advertisement
ಎರಡರ ನಂಟುದಿನಾಂಕ ಎಪ್ರಿಲ್ 22, ಸ್ಕೋರ್ 222, ಉರುಳಿದ ವಿಕೆಟ್ 2… ಈ ರೀತಿಯಾಗಿ ಎರಡರ ನಂಟಿನೊಂದಿಗೆ ಬೆಸೆದುಕೊಂಡದ್ದು ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್. ಜತೆಗೆ ಆರಂಭಕಾರ ಜಾಸ್ ಬಟ್ಲರ್ ಅವರ ಅಮೋಘ 3ನೇ ಸೆಂಚುರಿ. ಈ ಎಲ್ಲ ವೈಭವದೊಂದಿಗೆ ಮೆರೆದಾಡಿದ ರಾಜಸ್ಥಾನ್ ಶುಕ್ರವಾರದ ಪಂದ್ಯದಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನವಿತ್ತಿದೆ. ಬಟ್ಲರ್ ಬೊಂಬಾಟ್ ಆಟ
ಹಿಂದಿನೆರಡು ಶತಕಗಳ ಫಾರ್ಮ್ ಅನ್ನು ಡೆಲ್ಲಿ ವಿರುದ್ಧವೂ ಮುಂದುವರಿಸಿದ ಜಾಸ್ ಬಟ್ಲರ್ ಮೊದಲ ಓವರ್‌ನಲ್ಲೇ 2 ಬೌಂಡರಿ ಬಾರಿಸುವ ಮೂಲಕ ಬೊಂಬಾಟ್ ಆಟಕ್ಕೆ ಮುಂದಾದರು. ಇವರಿಗೆ ದೇವದತ್ತ ಪಡಿಕ್ಕಲ್ ಉತ್ತಮ ಬೆಂಬಲವಿತ್ತರು. ರನ್ ಪ್ರವಾಹದಂತೆ ಹರಿದುಬರತೊಡಗಿತು. ಇದಕ್ಕೂ ಮೊದಲು ಕೆಕೆಆರ್ ಮತ್ತು ಮುಂಬೈ ವಿರುದ್ಧ ಸೆಂಚುರಿ ಬಾರಿಸಿದ್ದ ಜಾಸ್ ಬಟ್ಲರ್, ಈ ಮುಖಾಮುಖೀಯಲ್ಲಿ 65 ಎಸೆತಗಳಿಂದ 116 ರನ್ ಬಾರಿಸಿದರು. ಶತಕಕ್ಕೆ 57 ಎಸೆತ ತೆಗೆದುಕೊಂಡರು. ಈ ಸಿಡಿಲಬ್ಬರದ ಬ್ಯಾಟಿಂಗ್ ವೇಳೆ ಚೆಂಡನ್ನು 9 ಸಲ ಸಿಕ್ಸರ್‌ಗೆ ಬಡಿದಟ್ಟಿದರು. ಇಷ್ಟೇ ಸಂಖ್ಯೆಯ ಬೌಂಡರಿಯನ್ನೂ ಬಾರಿಸಿದರು. ಜಾಸ್ ಬಟ್ಲರ್ ಐಪಿಎಲ್ ಋತುವಿನಲ್ಲಿ 3 ಪ್ಲಸ್ ಸೆಂಚುರಿ ಬಾರಿಸಿದ 2ನೇ ಬ್ಯಾಟರ್. 2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಬಾರಿಸಿದ್ದು ಐಪಿಎಲ್ ದಾಖಲೆ. ಇದನ್ನು ಸರಿದೂಗುವ ಅವಕಾಶವೊಂದು ಬಟ್ಲರ್‌ಗೆ ಎದುರಾಗಿದೆ.
ಬಟ್ಲರ್ ಜತೆಗಾರ ದೇವದತ್ತ ಪಡಿಕ್ಕಲ್ ಗಳಿಕೆ 54 ರನ್. ಇದು 35 ಎಸೆತಗಳಿಂದ ಬಂತು. ಸಿಡಿಸಿದ್ದು 7 ಬೌಂಡರಿ, 2 ಸಿಕ್ಸರ್. ಇವರಿಬ್ಬರು 15.1 ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಡೆಲ್ಲಿ ಬೌಲಿಂಗ್ ದಾಳಿಯನ್ನು ಪುಡಿಗೈಯುತ್ತ ಸಾಗಿದರು. ಮೊದಲ ವಿಕೆಟಿಗೆ 155 ರನ್ ಹರಿದು ಬಂತು. ಅನಂತರ ಕ್ರೀಸ್ ಇಳಿದ ನಾಯಕ ಸಂಜು ಸ್ಯಾಮ್ಸನ್ ಕೂಡ ಸಿಕ್ಕಿದ ಅವಕಾಶವನ್ನು ಬಿಟ್ಟುಕೊಡಲಿಲ್ಲ. ಕೇವಲ 19 ಎಸೆತಗಳಿಂದ 46 ರನ್ ಬಾರಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ ಅಬ್ಬರಿಸಿದರು.
10 ಓವರ್ ಅಂತ್ಯಕ್ಕೆ ರಾಜಸ್ಥಾನ್ 87 ರನ್ ಗಳಿಸಿತ್ತು. 15 ಓವರ್ ವೇಳೆ ಈ ಮೊತ್ತ 155ಕ್ಕೆ ಏರಿತು. ಡೆತ್ ಓವರ್‌ಗಳಲ್ಲಿ 67 ರನ್ ಹರಿದು ಬಂತು. ಖಲೀಲ್ ಅಹ್ಮದ್ ಮತ್ತು ಮುಸ್ತಫಿಜುರ್ ರೆಹಮಾನ್ ವಿಕೆಟ್ ಹಂಚಿಕೊಂಡರು. ಸ್ಕೋರ್ ಪಟ್ಟಿ
ರಾಜಸ್ಥಾನ್ ರಾಯಲ್ಸ್
ಜಾಸ್ ಬಟ್ಲರ್ ಸಿ ವಾರ್ನರ್ ಬಿ ಮುಸ್ತಫಿಜುರ್ 116
ದೇವದತ್ತ ಪಡಿಕ್ಕಲ್ ಎಲ್‌ಬಿಡಬ್ಲ್ಯು ಖಲೀಲ್ 54
ಸಂಜು ಸ್ಯಾಮ್ಸನ್ ಔಟಾಗದೆ 46
ಶಿಮ್ರನ್ ಹೆಟ್‌ಮೈರ್ ಔಟಾಗದೆ 1
ಇತರ 5
ಒಟ್ಟು (2 ವಿಕೆಟಿಗೆ) 222
ವಿಕೆಟ್ ಪತನ: 1-155, 2-202.
ಬೌಲಿಂಗ್: ಖಲೀಲ್ ಅಹ್ಮದ್ 4-0-47-1
ಶಾದೂìಲ್ ಠಾಕೂರ್ 3-1-29-0
ಲಲಿತ್ ಯಾದವ್ 4-0-41-0
ಮುಸ್ತಫಿಜುರ್ ರೆಹಮಾನ್ 4-0-43-1
ಕುಲದೀಪ್ ಯಾದವ್ 3-0-40-0
ಅಕ್ಷರ್ ಪಟೇಲ್ 2-0-21-0 ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಬೌಲ್ಟ್ ಬಿ ಅಶ್ವಿನ್ 37
ಡೇವಿಡ್ ವಾರ್ನರ್ ಸಿ ಸ್ಯಾಮ್ಸನ್ ಬಿ ಪ್ರಸಿದ್ಧ್ 28
ಸಫìರಾಜ್ ಖಾನ್ ಸಿ ಪ್ರಸಿದ್ಧ್ ಬಿ ಅಶ್ವಿನ್ 1
ರಿಷಬ್ ಪಂತ್ ಸಿ ಪಡಿಕ್ಕಲ್ ಬಿ ಪ್ರಸಿದ್ಧ್ 44
ಲಲಿತ್ ಯಾದವ್ ಸಿ ಸ್ಯಾಮ್ಸನ್ ಬಿ ಪ್ರಸಿದ್ಧ್ 37
ಅಕ್ಷರ್ ಪಟೇಲ್ ಬಿ ಚಹಲ್ 1
ಶಾದೂìಲ್ ಠಾಕುರ್ ರನೌಟ್ 10
ರೋವ¾ನ್ ಪೊವೆಲ್ ಸಿ ಸ್ಯಾಮ್ಸನ್ ಬಿ ಮೆಕ್‌ಕಾಯ್ 36
ಕುಲದೀಪ್ ಯಾದವ್ ಔಟಾಗದೆ 0
ಇತರ: 13
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 207
ವಿಕೆಟ್ ಪತನ: 1-43, 2-48, 3-99, 4-124, 5-127, 6-157, 7-187, 8-207
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-36-0
ಪ್ರಸಿದ್ಧ್ ಕೃಷ್ಣ 4-1-22-3 ಒಬೆದ್ ಮೆಕ್‌ಕಾಯ್ 3-0-52-1
ಆರ್. ಅಶ್ವಿನ್ 4-0-32-2
ಯಜುವೇಂದ್ರ ಚಹಲ್ 4-0-28-1
ರಿಯಾನ್ ಪರಾಗ್ 1-0-22-0
ಪಂದ್ಯಶ್ರೇಷ್ಠ: ಜಾಸ್ ಬಟ್ಲರ್