Advertisement

ರಾಜಸ್ಥಾನ ಚುನಾವಣೆ:ಫ‌ತೇಪುರ ಸಿಕಾರ್‌ನಲ್ಲಿ ಹಠಾತ್‌ ಭುಗಿಲೆದ್ದ ಹಿಂಸೆ

03:49 PM Dec 07, 2018 | Team Udayavani |

ಜೈಪುರ : ಶಾಂತ ರೀತಿಯಲ್ಲಿ ಸಾಗುತ್ತಿದ್ದ ರಾಜಸ್ಥಾನ ವಿಧಾನಸಭಾ ಚುನಾವಣೆ ಮಧ್ಯಾಹ್ನದ ವೇಳೆಗೆ ಹಠಾತ್‌ ಹಿಂಸೆಯನ್ನು ಕಂಡಿದೆ. 

Advertisement

ಫ‌ತೇಪುರದ ಸಿಕಾರ್‌ ನಲ್ಲಿ ಮತದಾನ ನಡೆಯುತ್ತಿದ್ದ ಸುಭಾಷ್‌ ಸ್ಕೂಲ್‌ನಲ್ಲಿ ಇದ್ದಕ್ಕಿದ್ದಂತೆಯೇ ಹಿಂಸೆ ಸಂಭವಿಸಿತು. ಉದ್ರಿಕ್ತ ಜನರು ವಾಹನಗಳಿಗೆ ಬೆಂಕಿ ಹಚ್ಚಿ ಸೊತ್ತುಗಳನ್ನು ಧ್ವಂಸಗೊಳಿಸಿದರು. 

ಮಧ್ಯಾಹ್ನ 3 ಗಂಟೆಯ ಬಳಿಕ ನಡೆದ ಈ ಘಟನೆಯ ಮಾಹಿತಿ ಪಡೆದ ಹೆಚ್ಚುವರಿ ಭದ್ರತಾ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಬಂದು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡರು. 

ಈ ಹಠಾತ್‌ ಹಿಂಸೆ, ಗಲಭೆಯಿಂದಾಗಿ ಸುಮಾರು 30 ನಿಮಿಷಗಳ ಕಾಲ ಮತದಾನವನ್ನು ಅಮಾನತುಗೊಳಿಸಲಾಯಿತು. 

ಹಿಂಸೆ ಸ್ಫೋಟಗೊಳ್ಳಲು ಕಾರಣವೇನೆಂದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಮತದಾನ ಮತ್ತೆ ಮುಂದುವರಿದಿದೆ. ಹೆಚ್ಚಿನ ಭದ್ರತಾ ಸಿಬಂದಿಗಳು ಇಲ್ಲಿ ಕರ್ತವ್ಯ ನಿರತರಾಗಿದ್ದಾರೆ. 

Advertisement

ಮಧ್ಯಾಹ್ನ 1 ಗಂಟೆಯ ವರೆಗಿನ ಅವಧಿಯಲ್ಲಿ ಶೇ.41.53 ಮತದಾನ ನಡೆದಿರುವುದು ದಾಖಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next